ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರ ಮುಗಳಖೋಡ ಪುರಸಭೆ ಯಲ್ಲಿ ಅಕ್ರಮದ ವಾಸನೆ ಬರಲಾರಂಭಿಸಿದೆ
ಅದು ಏನೇದಂದರೆ ಮೊನ್ನೆ ಮೊನ್ನೆ ಅಷ್ಟೇ ಶಾಸಕ ಪಿ ರಾಜೀವ್ ಅವರು ರಾತ್ರೋ ರಾತ್ರಿ ಸರಕಾರಿ ನಿವೇಶನ ಹಕ್ಕು ಪತ್ರ ವನ್ನು ವಿತರಿಸಿದ್ದರೂ ಆದರೆ ಹತ್ತಾರು ವರುಷಗಳಿಂದ ವಾಸವಾಗಿರುವ ಹಲವು ಕುಟುಂಬ ಗಳಿಗೆ ನಿಮಗೆ ಹಕ್ಕು ಪತ್ರ ನೀಡುತ್ತೇವೆ ಸಾಯಂಕಾಲ ಬನ್ನಿ ಎಂದು ತಿಳಿಸಿದರಂತೆ ಅದರಂತೆ ನಿವೇಶನ ಹಕ್ಕು ಪತ್ರ ಆಶೆಗೆ ಬಿದ್ದು ಹೋಗಿದ್ದ ಕೆಲವು ಜನರಿಗೆ ಹಕ್ಕು ಪತ್ರ ನೀಡದೆ ಇದ್ದಕ್ಕೆ ನಿರಾಶೆಯಾಗಿದೆ ಕೆಲವಂದಿಷ್ಟು ಜನರಿಗೆ ಇಪ್ಪತು ಸಾವಿರ ರೂಪಾಯಿ ಗಳನ್ನು ಕೆಲ ಸದಸ್ಯರು ಬೇಡಿಕೆ ಇಟ್ಟಿದಾರೆಂದು ಆರೋಪಿಸಿದಾರೆ
ಗಮನಿಸಬೇಕಾದ ವಿಷಯವೇನೆಂದರೆ ರಾತ್ರಿ ವೇಳೆಯಲ್ಲಿ ಯಾಕೆ ಹಕ್ಕು ಪತ್ರಗಳನ್ನು ನೀಡಲು ಹೋದರು ಮತ್ತು ಅಲ್ಲಿ ಯಾವುದೇ ಅಧಿಕಾರಿಗಳು ಪುರಸಭೆ ನೌಕರರು ಯಾರು ಇಲ್ಲದೆ ಇರುವಾಗ ಹೇಗೆ ಕೊಡಲು ಸಾಧ್ಯ!
ಶಾಸಕ ಪಿ ರಾಜೀವ್ ಅವರು ಸಹಿ ಮಾಡಿರುವ ಬಿಳಿ ಹಾಳೆಯ ಮೇಲೆ ನಿವೇಶನ ಗಳ ಸಂಖ್ಯೆ ಇದ್ದು ಯಾರಿಗೆ ಆ ಚೀಟಿ ಇರುತ್ತದೆ ಯೋ ಅವರಿಗೆ ಅಷ್ಟೇ ನಿವೇಶನ ಅಂತೇ ಇದು ಎಲ್ಲಿಂದ ಬಂತು ಯಾವ ಕಾನೂನು ಎಂದು ಹಲವರ ಚರ್ಚೆಯಾಗಿದೆ
ಅಕ್ರಮ ನಿವೇಶನ ಹಂಚಿಕೆಯಲ್ಲಿ ಶಾಸಕ ಪಿ ರಾಜೀವ್ ಕೈವಾಡ, ಚೀಟಿ ಹಂಚಿ ನಿವೇಶನದ ಆಮಿಷ ಒಡ್ಡಿದ ಆರೋಪ, ದುಡ್ಡು ಕೊಟ್ಟು ಕಮಂಗಿಗಳಾದ ಜನಸಾಮಾನ್ಯರು.
ರಾತ್ರಿ ವೇಳೆ ಶಾಸಕರು ನಿವೇಶನ ಹಂಚಿಕೆ ಮಾಡುವ ಅವಶ್ಯಕತೆ ಇತ್ತಾ? ನಿವೇಶನ ಹಂಚಿಕೆ ವೇಳೆ ಕಾರ್ಯಾಂಗದ ವ್ಯವಸ್ಥೆಗೆ ತದ್ವಿರುದ್ಧವಾಗಿ ಅಧಿಕಾರಿಗಳು ಗೈರು ಹಾಜರಿ ಆಗಿರುವುದು ಸರಿನಾ?
ಶಾಸಕ ಪಿ ರಾಜೀವ್ ಹಾಗೂ ಸ್ಥಳೀಯ ಪುರಸಭೆ ಅಧಿಕಾರಿಗಳ ವಿರುದ್ಧ ಧರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾರ್ವಜನಿಕರು, ಇದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪುರಸಭೆ ಎದುರಿಗೆ ನಡೆಯುತ್ತಿರುವ ಪ್ರತಿಭಟನ ಹೋರಾಟ.
ಬಿ ಆರ್ ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣ ಸಿ ಎಂ, ಮಂಡ್ಯ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಸಾಥನೀಡಿದ್ದಾರೆ
ಅಧಿವೇಶನದಲ್ಲಿ ಗುಡುಗುವ ಶಾಸಕ ಪಿ ರಾಜೀವ್ ತಮ್ಮ ಕುಡಚಿ ಮತಕ್ಷೇತ್ರದಲ್ಲಿಯೇ ಕಾನೂನುಬಾಹಿರು ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಸದ್ಯದಲ್ಲಿಯೇ ಕಂಬಿ ಎಣಿಸಲಿದ್ದಾರೆ ಎಂದು ಗುಡುಗಿದ ಕೃಷ್ಣ ಸಿ ಎಂ ಮಂಡ್ಯ.
ಬುಧವಾರ ಬಂದು ಚೀಟಿಕೊಟ್ಟು ಬಕ್ರಾ ಮಾಡಿದ್ರಾ? ಶಾಸಕ ಪಿ ರಾಜೀವ್. ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿ ಭ್ರಷ್ಟರನ್ನು ಕಂಬಿ ಹಿಂದೆ ಕಳುಹಿಸಿ ಎಂಬ ದೃಢ ನಿಲುವಿನತ್ತ ಹೋರಾಟಗಾರರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದ ಪುರಸಭೆ ಅಧಿಕಾರಿಗಳು ಕುಡಚಿ ಹಾಗೂ ಹಾರುಗೇರಿ ಆರಕ್ಷಕ ಉಪನಿರೀಕ್ಷಕರು.
ಅಧಿಕಾರಿಗಳ ಮಾತಿಗೆ ಜಗ್ಗದ ಹೋರಾಟಗಾರರು, ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಕುಡಚಿ ಶಾಸಕ ಪಿ ರಾಜೀವ್ ಸ್ಥಳಕ್ಕೆ ಬರುವವರೆಗೂ ಹೋರಾಟ ನಿಲ್ಲದು ಎಂದು ಪಟ್ಟು ಹಿಡಿದ ಹೋರಾಟಗಾರರು. ಮುಂದುವರೆದ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ