ಬೆಳಗಾವಿ
ವರದಿ:ರಾಜಶೇಖರ ಶೇಗುಣಸಿ
ಮುಗಳಖೋಡ: ಪಟ್ಟಣದ ಘಟಪ್ರಭಾ ಎಡದಂಡೆ ಕಾಲುವೆಯಿಂದ ನಾಸಿ ತೋಟದ ವರೆಗೆ ಸುಮಾರು 5 ಕಿ.ಮೀ. ಉದ್ದದ ಕಾಲುವೆ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಕುಡಚಿ ಶಾಸಕ ಪಿ ರಾಜೀವ್ ಗುದ್ದಲಿ ಪೂಜೆಯೊಂದಿಗೆ ಚಾಲನೆ ನೀಡಿದರು.
ನಂತರ ಅದೇ ವಾಡಿನ ಸದಸ್ಯರಾದ ಕೆಂಪಣ್ಣ ಅಂಗಡಿ ಮಾತನಾಡಿ ನೀರಲಕೋಡಿ ಮರಾಕೋಡಿ ಹಾಗೂ ಹಳ್ಳೂರ್ ಗ್ರಾಮದ ರೈತರಿಗೆ ಸುಮಾರು ವರ್ಷಗಳಿಂದ ನೀರಿನ ಸಮಸ್ಯೆ ಇತ್ತು. ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಾಗ ಅವರು ತಕ್ಷಣ ಸ್ಪಂಧಿಸಿ ಯಾವತ್ತೂ ಈ ಭಾಗದ ರೈತರಿಗೆ ನೀರಿನ ಸಮಸ್ಯೆ ಒದಗದಿರಲಿ ಎಂಬ ಭಾವನೆಯಿಂದ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಗುದ್ದಲಿ ಪೂಜೆ ಮಾಡುವುದರ ಮುಖಾಂತರ ನೀರಾವರಿ ವ್ಯವಸ್ಥೆಗೆ ಪಿ.ರಾಜೀವ್ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಮೇಶ್ ನಾಸಿ, ಶ್ರೀಶೈಲ ಯಡವನ್ನವರ, ಮಲ್ಲಪ್ಪ ಅಂಗಡಿ, ದುಂಡಪ್ಪ ಸುತಾರ್, ಶಂಕರ್ ಅಂಗಡಿ, ಲಕ್ಷ್ಮಣ್ ಸಪ್ತಸಾಗರ್, ಸಾಗರ್ ಬಂಗಿ, ಶ್ರೀಶೈಲ್ ಹೊಸಟ್ಟಿ, ತಮ್ಮಣ್ಣ ಹಿಪ್ಪರಗಿ, ಬಿ. ಎಸ್. ಸವಸುದ್ದಿ, ಮಲ್ಲಪ್ಪ ಮುಗಳಖೋಡ, ಲಕ್ಕಪ್ಪ ಸಪ್ತಸಾಗರ್, ಗಂಗಪ್ಪ ಕಾಫ್ಸಿ, ಲಕ್ಕಪ್ಪ ಜೋಡಟ್ಟಿ, ಜಿನ್ನಪ್ಪ ಮೇಕನಮರಡಿ, ರಾಜು ಬಂಗಿ, ಪ್ರಕಾಶ್ ಕೊಂಗಾಲಿ, ಆನಂದಪ್ಪ ಹೊಸಟ್ಟಿ, ಶಿವಾನಂದ ಕೌಜಲಗಿ, ಮುತ್ತಪ್ಪ ಅಂಗಡಿ, ಮುತ್ತಪ್ಪ ಹೊಸಟ್ಟಿ, ಸಿದ್ದಪ್ಪ ಅಂಗಡಿ ಉಪಸ್ಥಿತರಿದ್ದರು.