ಬೆಳಗಾವಿ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನಲ್ಲಿ ಇಂದು ದಂಧರಗಿಯವರ ನೂತನ ಆಸ್ಪತ್ರೆ ಉದ್ಘಾಟನೆಗೊಂಡಿತು.ಡಾ. ಎಲ್ ಎಸ್ ಜಂಬಗಿ, ಡಾ. ವರ್ಷಾ ಎಲ್ ಜಂಬಗಿ ದಂಪತಿಗಳು ಆಸ್ಪತ್ರೆಯನ್ನು ಉದ್ಘಾಟಿಸಿದರು ಹಾಗೂ ಕುಡಚಿ ಶಾಸಕ ಪಿ ರಾಜೀವ್ ಯಂತ್ರೋಪಕರಣಗಳನ್ನು ಉದ್ಘಾಟಿಸಿದರು.ಕೆಎಲ್ಇ ಯಲ್ಲಿ ಸೇವೆ ಸಲ್ಲಿಸಿ ನುರಿತವರಾದ ಎಲುವು ಕೀಲು ತಜ್ಞರು,ಹಾರೂಗೇರಿಯಲ್ಲಿ ಪ್ರಥಮ ಬಾರಿಗೆ ರೇಡಿಯೋಲಾಜಿಸ್ಟ್ ತಜ್ಞರಾಗಿ ಆಸ್ಪತ್ರೆ ಪ್ರಾರಂಭಿಸಿರುವ ದಂಧರಗಿ ದಂಪತಿಗಳಿಗೆ ಆಗಮಿಸಿದ ಜನ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಾವಿದ ಜಮಾದಾರ, ಶಿವಗೊಂಡ ಧರ್ಮಟ್ಟಿ, ಪರಶುರಾಮ ಪತ್ತಾರ, ಅಪ್ಪಸಾಬ ಕುಲಕರ್ಣಿ, ವಿಠ್ಠಲ ಬಂತಿ, ಪಿ ಎಸ್ ಐ ರೇಣುಕಾ ಜಕನೂರ, ಬಾಬುರಾವ ಹಳ್ಳೂರ,ಡಾ. ಇರ್ಫಾನ ದಂಧರಗಿ, ಡಾ.ಬೀಬಿ ಆಯಿಷಾ ದಂಧರಗಿ, ಡಾ. ಇಮ್ರಾನ ದಂಧರಗಿ, ಡಾ. ಕಥಿಜಾ ದಂಧರಗಿ, ಡಾ. ಶಕೀಲ್ ದಂಧರಗಿ, ಡಾ. ಸಾಧಿಯಾ ದಂಧರಗಿ, ಲಾಲಸಾಬ ಜಮಾದಾರ, ಎಸ್ ಎ ಮುಜಾವರ, ಮುಸ್ತಾಕ ಇಂಡಿಕಾರ,ಸಿಕಂದರ ಜಮಾದಾರ,ನಸೀಮಾ ದಂಧರಗಿ, ಎಚ್ ಎಮ್ ಸೌದಾಗರ, ಶಾಂತು ಹುಕ್ಕೇರಿ ಮುಂತಾದವರು ಉಪಸ್ಥಿತರಿದ್ದರು.
ವರದಿ : ಸುನೀಲ್ ಕಬ್ಬೂರ