ವರದಿ :ಸಚಿನ್ ಕಾಂಬ್ಳೆ
ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿಯ ನಿಷ್ಟಾವಂತ ಅಧಿಕಾರಿಗಳೆಂದೇ ಪ್ರಸಿದ್ಧಿ ಪಡೆದಿರುವ, ಆಯ್. ಎ. ಎಸ್. ಅಧಿಕಾರಿಗಳಾದ, ರೋಹಿಣಿ ಸಿಂಧೂರಿ ಮತ್ತು ಆಯ್. ಪಿ. ಎಸ್. ಅಧಿಕಾರಿಗಳಾದ ಡಿ. ರೂಪಾ ಇವರ ಮಧ್ಯೆ, ದಿನದಿನಕ್ಕೆ ವಾದ ವಿವಾದಗಳು ಹೆಚ್ಚುತ್ತಲಿವೆ, ಇಡೀ ದೇಶ ಮತ್ತು ರಾಜ್ಯದ ರಕ್ಷಣೆಯ ಜವಾಬ್ದಾರಿ ಹೊಂದಿರುವ ಇಂತಹ, ನಿಷ್ಟಾವಂತ ಜನಪರ ಅಧಿಕಾರಿಗಳೇ ಈ ಪ್ರಕಾರ ವರ್ತಿಸಿದರೆ, ಸಮಾಜದ ಗತಿ ಏನು ?, ಇಂತಹ ಅಧಿಕಾರಿಗಳು ಸಿಗುವುದೇ ಒಂದು ಅಪರೂಪದ ವಿಷಯವಾಗಿದೆ, ಮುತ್ತು-ರತ್ನದಂತಿರುವ ಈ ಅಧಿಕಾರಿಗಳು ಏನೇ ಇರಲಿ ತಮ್ಮ ತಮ್ಮ ವಾಗ್ವಾದಗಳನ್ನು ಕೂಡಲೇ ಕೈ ಬಿಟ್ಟು, ರಾಜ್ಯ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಬೇಕೆಂಬುದೇ ಪ್ರಜೆಗಳ ಆಸೆಯಾಗಿದೆ. *ಪ್ರತಿಕ್ರಿಯೆ* ಇಡೀ ರಾಜ್ಯ ಮತ್ತು ದೇಶಕ್ಕೆ ಆಯ್. ಎ. ಎಸ್. ಮತ್ತು ಆಯ್. ಪಿ. ಎಸ್. ಅಧಿಕಾರಿಗಳೆಂದರೆ ಎರಡು ಕಣ್ಣುಗಳಿದ್ದಂತೆ, ಸಾರ್ವಜನಿಕರಿಗೆ ಮಾರ್ಗ ತೋರಿಸುವ ಅಧಿಕಾರಿಗಳೇ ತಮ್ಮ ನಿಯಂತ್ರಣವನ್ನು ಕಳೆದುಕೊಂಡರೆ, ಜನರನ್ನು ರಕ್ಷಿಸುವವರಾರು ?, ಕೂಡಲೇ ಇಂತಹ ಅಧಿಕಾರಿಗಳು ತಮ್ಮ ತಮ್ಮ ವಯಕ್ತಿಕ ವಿಷಯಗಳನ್ನು ಬದಿಗಿಟ್ಟು ಜನಸೇವೆಗೆ ಮುಂದಾಗಬೇಕೆಂದು, ಚಿಕ್ಕೋಡಿಯ ಸಮಾಜ ಸೇವಕ, ಚಂದ್ರಕಾಂತ ಹುಕ್ಕೇರಿ ಇವರು ವಿನಂತಿಸಿದ್ದಾರೆ.





