ಬೆಳಗಾವಿ
ವರದಿ :ಶಶಿಕಾಂತ್ ಪುಂಡಿಪಲ್ಲಿ
ಬೆಳಗಾವಿ : ಕುಡಚಿ ಶಾಸಕ ಪಿ ರಾಜೀವ್ ಸರ್ಕಾರದ ಮಾನದಂಡ ಅನುಸರಿಸದೆ ಮುಗ್ಧ ಜನರ ಜೀವನ ಜೊತೆ ಚೆಲ್ಲಾಟ ಆಡುತಿದ್ದಾರೆ ಹಲವು ಅಕ್ರಮಗಳಲ್ಲಿ ಶಾಸಕರು ಭಾಗಿಯಾಗಿದ್ದಾರೆ ಆದಷ್ಟು ಬೇಗನೆ ಜೈಲಿಗೆ ಹೋಗುತ್ತಾರೆ ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯೂಥ್ ರಾಜ್ಯಾಧ್ಯಕ್ಷ ಕೃಷ್ಣಾ ಸಿಎಮ್ ಎಂಬುವರು ಗಂಭೀರ ಆರೋಪವನ್ನು ಮಾಡಿದ್ದಾರೆ.
ಅವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣ ಪುರಸಭೆ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾದ್ಯಮಗಳ ಜೊತೆ ಮಾತನಾಡಿ, ಮುಗಳಖೋಡ ಪುರಸಭೆ ವ್ಯಾಪ್ತಿಯಲ್ಲಿ ಸರ್ವೇ ನಂಬರ ೪೯೧/ಬ ರಲ್ಲಿ ನಿವೇಶನವಿಲ್ಲದ ಬಡ ಜನರಿಗೆ ಮೀಸಲಿಟ್ಟ ಸ್ಥಳದ ನಿವೇಶನ ಹಂಚಿಕೆಯಲ್ಲಿ ಶಾಸಕ ಪಿ ರಾಜೀವ್ ಮುಗ್ಧ ಜನರಿಗೆ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಶಾಸಕರು ಕಾರ್ಯಾಂಗ ವ್ಯವಸ್ಥೆ ಮರೆತು ತಮ್ಮ ಇಷ್ಟಾನುಸಾರ ಬಡ ಮುಗ್ದ ಜನರಿಗೆ ನಿವೇಶನ ಮಂಜೂರಾತಿ ಮಾಡಿಸಿದ್ದೇನೆ ಎಂದು ಸರ್ಕಾರದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಿವೇಶನ ಇಲ್ಲದ ಸ್ಥಳೀಯರಿಗೆ ಸರ್ಕಾರದಿಂದ ನಿವೇಶನ ಹಂಚಿಕೆ ಮಾಡ್ಬೇಕೆಂದು ಸ್ಪಷ್ಟವಾದ ನಿರ್ದೇಶನವಿದ್ದರು ಶಾಸಕರು ಅವುಗಳನ್ನು ಪಾಲಿಸಿದರೆ, ರಾತ್ರೋ ರಾತ್ರಿ ಮುಗಳಖೋಡ ಮುಗ್ಧ ಜನರ ಮನೆಗೆ ತೆರಳಿ ನಿಮಗೆ ನಿವೇಶನ ಮಂಜೂರಾತಿ ಮಾಡಿಸಿದ್ದೇನೆ ಎಂದು ಒಂದು ಬಿಳಿ ಪೇಪರ್ ಮೇಲೆ ಬರೆದು ನಿವೇಶನ ನಂಬರ ಹಾಕಿರುವ ಚಿಟಿ ಹಂಚಿಕೆ ಮಾಡುತ್ತಿದ್ದಾರೆ, ಹಕ್ಕು ಪತ್ರ ಇಲ್ಲದೆ, ಸಂವಿಧಾನದ ಸರ್ಕಾರದ ಮಾನದಂಡ ಅನುಸರಿಸದೆ, ಪುರಸಭೆ ಅಧಿಕಾರಿಗಳ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ನಿವೇಶನ ಹಂಚಿಕೆ ಮಾಡುತ್ತಿದ್ದಾರೆ, ಮುಗ್ಧ ಜನರ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದಾರೆ, ನಾವು ನಾನೂನೂ ಚೌಕಟ್ಟಿನಲ್ಲಿ ಸ್ಥಳಿಯ ಶಾಸಕರ ವಿರುದ್ಧ ದೂರು ಸಲ್ಲಿಸಲಾಗುವುದು ಆದಷ್ಟು ಬೇಗನೆ ಶಾಸಕ ಪಿ ರಾಜೀವ್ ಜೈಲಿಗೆ ಹೊಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.