ಬೆಳಗಾವಿ
ವರದಿ :ಸಂಗಮೇಶ ಹಿರೇಮಠ
ನುಡಿದಂತೆ ನಡೆದ ಸರ್ಕಾರ ಬಿಜೆಪಿ ಸರ್ಕಾರ: ಉಮೇಶ ಕಾರಜೋಳ.
ಮುಗಳಖೋಡ: ವಿವಿದ ಸಮಾಜಗಳ ಏಳಿಗೆಗಾಗಿ ಕೊಟ್ಟ ಮಾತಿನಂತೆ ನಡೆದು ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿದ ಸರ್ಕಾರ ಅದುವೇ ಬಿಜೆಪಿ ಸರ್ಕಾರ. ಅದೆ ಸರ್ಕಾರ ನಿಮ್ಮ ಜೊತೆಗೆ ಇದೆ ನಿವೆಲ್ಲ ಕೂಡಾ ಪಕ್ಷದ ಜೊತೆಗಿರಿ ಎಂದು ವಿಜಯಪುರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕಾರಜೋಳ್ ಹೇಳಿದರು.
ಅವರು ಮುಗಳಖೋಡ ಪಟ್ಟಣದಲ್ಲಿ ನಿಗಮ ಸ್ಥಾಪನೆಗಳ ಹಿನ್ನಲೆಯಲ್ಲಿ ಹಮ್ಮಿಕೊಂಡ ಅಭಿನಂದನೆ ಕಾರ್ಯಕ್ರಮದಲ್ಲಿ ಬಾಗಿಯಾಗಿ ಮಾತನಾಡಿ ಸಮಾಜದವರಿಗೆ ಸಿಹಿ ಹಂಚಿದರು.
ಮಾಳಿ ಮಾಲಗಾರ, ಹಡಪದ ಅಪ್ಪಣ್ಣ, ಹೂಗಾರ, ಗಾಣಿಗೆ ಸಮಾಜದ ನಿಗಮ ಘೋಷಣೆ ಹಿನ್ನೆಲೆಯಲ್ಲಿ ಮುಗಳಖೋಡ ಪಟ್ಟಣದ ಚೇತನ್ ಯಡವನ್ನವರ ಅಂಗಡಿಯಿಂದ ಪಟ್ಟಣದ ವಿವೇಕಾನಂದ ಸರ್ಕಲದ ವರೆಗೆ ಜೈ ಮಾಳಿ ಜೈ ಜೈ ಮಾಳಿ, ಹಡಪದ ಅಪ್ಪಣ್ಣ ಅವರ ಘೋಷಣೆಗಳನ್ನು ಕೂಗುತ್ತಾ, ಪಟಾಕಿ ಸಿಡಿಮದ್ದುಗಳನ್ನು ಸಿಡಿಸುತ್ತಾ ಭವ್ಯ ಮೆರವಣಿಗೆ ಮೂಲಕ ಶ್ರೀ ಮಾಧವಾನಂದ ಆಶ್ರಮ ತಲುಪಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಡಾ. ಸಿ.ಬಿ. ಕುಲಿಗೋಡ ಮಾತನಾಡಿ ನಿಗಮ ಘೋಷಿಸಲು ಕಾರಣೀಭೂತರಾದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಮೊದಲು ಮಾಡಿಕೊಂಡು ಲಕ್ಷ್ಮಣ್ ಸವದಿ, ಪಿ ರಾಜೀವ್, ಬಾಲಚಂದ್ರ ಜಾರಕಿಹೊಳಿ, ಗೋವಿಂದ ಕಾರಜೋಳ್, ಸಿದ್ದು ಸವದಿ ಸೇರಿದಂತೆ ಅನೇಕ ಶಾಸಕರು ಮತ್ತು ಸಂಸದರಿಗೆ ಜೈಕಾರ ಹಾಕುತ್ತಾ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ಸಿ.ಬಿ.ಕುಲಿಗೋಡ, ರಮೇಶ ಯಡವಣ್ಣವರ, ಗೋಪಾಲ್ ಯಡವಣ್ಣವರ್, ರಮೇಶ ಖೇತಗೌಡರ, ಮಲ್ಲಿಕಾರ್ಜುನ ಖಾನಗೌಡರ, ವಿಠ್ಠಲ್ ಯಡವನವರ್, ಮಾಂತೇಶ್ ಯರಡತ್ತಿ, ಹಾಲಪ್ಪ ಶೇಗುಣಸಿ, ಶಿವಪ್ಪ ಹಳ್ಳೂರ್, ರಾಮಣ್ಣ ಖೇತಗೌಡರ, ರಾಜು ನಾಯಕ್, ರಾಜು ಮುಧೋಳ, ಶ್ರೀಶೈಲ್ ಮುಧೋಳ್, ಲಕ್ಷ್ಮಣ್ ಗೋಕಾಕ್, ಸಿದ್ರಾಮ ನಾವಿ, ಲಕ್ಷ್ಮಣ್ ನಾವಿ, ಶಿವಪುತ್ರ ನಾವಿ ಅಣ್ಣಪ್ಪ ನಾವಿ, ಸಂಗಪ್ಪ ತೇಲಿ, ಭೀಮಪ್ಪ ತೇಲಿ, ಸಂಗಣ್ಣ ರಾಜು ತೇಲಿ, ಮಹದೇವ ತೇಲಿ, ದರೆಪ್ಪ ತೇಲಿ, ಬಸಪ್ಪ ತೇಲಿ ಉಪಸ್ಥಿತರಿದ್ದರು.