ಬೆಳಗಾವಿ
ಅನ್ನಬಾಗ್ಯಕ್ಕೆ ಕನ್ನ ಹಂದಿಗುಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಮೋಸ ಕಣ್ಣು ಮುಚ್ಚಿ ಕುಳಿತ ರಾಯಭಾಗ ಆಹಾರ ಇಲಾಖೆ ಅಧಿಕಾರಿಗಳು
ವರದಿ :ಸಂಗಮೇಶ ಹಿರೇಮಠ
ಪ್ರತಿ ವ್ಯಕ್ತಿಗೆ 7ಕೆ.ಜಿ ಅಕ್ಕಿ ಕೊಡಬೇಕೆಂದು ಸರ್ಕಾರದ ಆದೇಶವಿದ್ದರೂ 6 ಕೆ.ಜಿ ಅಕ್ಕಿ ಕೊಟ್ಟು ಫಲಾನುಭವಿಗೆ ಮೋಸ ಮಾಡಿದ ನ್ಯಾಯಬೆಲೆಯ ಅಂಗಡಿಕಾರರು….!!
ಮಾಜಿ ಗ್ರಾಪಂ ಸದಸ್ಯ ಶಿವಲಿಂಗಯ್ಯ ಹಿರೇಮಠ ಅವರ ತಕರಾರು ಮಾಡಿದ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಕರಾರು ಮತ್ತೇ ಒಂದು ಕೆಜಿ ಅಕ್ಕಿ ವಿತರಣೆ.
ತಮ್ಮ ತಪ್ಪಿನ ಅರಿವಾಗಿ ಮತ್ತೆ ೧ ಕೆಜಿ ಅಕ್ಕಿಯನ್ನು ತೆಗೆದುಕೊಂಡು ಹೋಗುವಂತೆ ಡಂಗರು…..

ಮುಗಳಖೋಡ: ರಾಜ್ಯ ಸರ್ಕಾರವು ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡುದಾರರಿಗೆ ಫೆಬ್ರವರಿ ತಿಂಗಳಲ್ಲಿ 7 ಕೆಜಿ ಅಕ್ಕಿ ಕೊಡಬೇಕೆಂದು ಆದೇಶ ಹೊರಡಿಸಿತ್ತು. ಆದರೆ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡುದಾರರಿಗೆ ಕೇವಲ ೬ ಕೆಜಿ ಅಕ್ಕಿ ಕೊಟ್ಟು ಮೋಸ ಮಾಡಿದ ಘಟನೆ ಹಂದಿಗುಂದ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸರ್ಕಾರಿ ಸಂಘ ಹಾಗೂ ಶ್ರೀ ಭುವನೇಶ್ವರಿ ಸ್ವಸಹಾಯ ಸಂಘದ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಘಟನೆ ಸಂಭವಿಸಿದೆ ಎಂದು ಮಾಜಿ ಗ್ರಾಪಂ ಸದಸ್ಯ ಶಿವಲಿಂಗಯ್ಯ ಹಿರೇಮಠ ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರದ ಆದೇಶ ಗಾಳಿಗೆ ತೂರಿ ಫಲಾನುಭವಿಗಳಿಗೆ 7 ಕೆಜಿ ಬದಲಿಗೆ 6 ಕೆಜಿ ಅಕ್ಕಿ ಕೊಟ್ಟು ಬಡವರಿಗೆ ಮೋಸ ಮಾಡುವ ಈ ನ್ಯಾಯಬೆಲೆ ಅಂಗಡಿಗಳನ್ನು ತಕ್ಷಣವೇ ರದ್ದು ಮಾಡಬೇಕು. ಮತ್ತು ಆ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಮಾಜಿ ಗ್ರಾಮದ ಸದಸ್ಯ, ಪಿ ರಾಜೀವ ಚಾಂಪಿಯನ್ ಟ್ರೋಫಿ ರೂವಾರಿ ಶಿವಲಿಂಗಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಬೆಲೆ ಅಂಗಡಿಕಾರರಿಗೆ ತಮ್ಮ ತಪ್ಪಿನ ಅರಿವಾಗಿ ಗ್ರಾಮ ಪಂಚಾಯಿತಿಯಿಂದ ಧ್ವನಿವರ್ಧಕದ ಮೂಲಕ ಡಂಗೂರ ಬಾರಿಸಿ 6 ಕೆ.ಜಿ ಅಕ್ಕಿ ಪಡೆದ ಫಲಾನುಭವಿಗಳಿಗೆ ದಿ: 22 ರಂದು ಮತ್ತೆ 1 ಕೆಜಿ ಅಕ್ಕಿಯನ್ನು ವಿತರಿಸಿದ್ದಾರೆ.
ರಾಯಬಾಗ ತಾಲೂಕಿನಲ್ಲಿ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ “ಅದೇ ರಾಗ ಅದೇ ಹಾಡು” ಎಂಬಂತೆ ಹಲವಾರು ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಕಡಿಮೆ ರೇಷನ್ ಕೊಡುತ್ತಿರುವುದು ಆಗಾಗ ಬೆಳಕಿಗೆ ಬರುತ್ತಿದೆ ಇದು ಅಧಿಕಾರಿಗಳ ತಪ್ಪೋ ಅಥವಾ ನ್ಯಾಯಬೆಲೆ ಅಂಗಡಿಕಾರರ ದಿವ್ಯ ನಿರ್ಲಕ್ಷ್ಯವೋ ಒಂದು ತಿಳಿಯದಾಗಿದೆ. “ದೇವರು ವರ ಕೊಟ್ಟರೂ ಪೂಜಾರಿ ಕೊಡಲಾರ” ಎಂಬಂತೆ ಸರ್ಕಾರದ ಆದೇಶವಿದ್ದರೂ ಕೂಡ ನ್ಯಾಯಬೆಲೆ ಅಂಗಡಿಕಾರರು ಫಲಾನುಭವಿಗಳಿಗೆ ಮೋಸ ಮಾಡುತ್ತಿರುವುದು ಎಷ್ಟು ಸರಿ.!! ಈ ತಪ್ಪನ್ನು ಸಂಬಂಧ ಪಟ್ಟಂತ ಅಧಿಕಾರಿಗಳು ಸರಿಪಡಿಸುವರೇ ಎಂದು ಕಾದು ನೋಡಬೇಕಾಗಿದೆ.
*ಬಾಕ್ಸ್ ಲೈನ್….*
1) ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಕೊಡುವುದರಲ್ಲಿ 7ಕೆ.ಜಿ ಬದಲಿಗೆ 6 ಕೆಜಿ ಅಕ್ಕಿ ಕೊಟ್ಟ ಮಾಹಿತಿ ನಮಗೆ ಬಂದಿದ್ದು, ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ಕ್ರಮ ಜರುಗಿಸಲಾಗುವುದು.
*ಈಶ್ವರ ಮಾರ್ತಂಡನ್ನವರ* ಜಿಲ್ಲಾ ಆಹಾರ ಇಲಾಖೆಯ ಸಹಾಯಕ ಅಧಿಕಾರಿ.
2) ಗ್ರಾಮದಲ್ಲಿ ಕಡುಬಡವರಿಗೆ, ದೀನ ದುರ್ಬಲರಿಗೆ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಸರ್ಕಾರದ ಅದೇಶ ಕೈಬಿಟ್ಟು 7 ಕೆಜಿ ಬದಲಿಗೆ ಮೋಸದಿಂದ 6 ಕೆಜಿ ಅಕ್ಕಿ ಕೊಡುತ್ತಿರುವುದು ಯಾವ ನ್ಯಾಯ? ಇಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಿ, ನೋಟಿಸ್ ಜಾರಿ ಮಾಡಬೇಕು.
*ಸಂಗಪ್ಪ ಮಿರ್ಜಿ* ಗ್ರಾಪಂ ಸದಸ್ಯ ಹಂದಿಗುಂದ.
ಈ ಸಂದರ್ಭದಲ್ಲಿ ಮಾಜಿ ಗ್ರಾಮಪಂ ಸದಸ್ಯ ಶಿವಲಿಂಗಯ್ಯ ಹಿರೇಮಠ, ರಮೇಶ ಖಾನಗೌಡ, ಸುರೇಶ ಹೊಸಪೇಟಿ, ಮಲ್ಲಪ್ಪ ಬೆಸುಗುಪ್ಪಿ, ಶ್ರೀಶೈಲ ಪಾಯನ್ನವರ, ಮೌನೇಶ್ ಬಡಿಗೇರ ರಾಜು ಗಂಟಿ, ರಾಯಣ್ಣ ಉಳ್ಳಾಗಡ್ಡಿ, ಲಗಮಪ್ಪ ಮೇಟಿ, ಕವಿತಾ ಗೋಲಬಾವಿ, ಯಲ್ಲವ್ವ ಭಜಂತ್ರಿ, ಕಾಶಪ್ಪ ಹೊಸಾಲಿ, ಫಕೀರ್ ಬಿಲ್ಲಗಾರ ಇತರರು ಇದ್ದರು.





