ಬೆಳಗಾವಿ
ಶಿಕ್ಷಕರ & ವಿದ್ಯಾರ್ಥಿಗಳಿಗೆ ವಿವಿಧ ಆಟಗಳ ಜೊತೆ ಮನರಂಜನ ಕಾರ್ಯಕ್ರಮಗಳು.
ವರದಿ: ಸಂಗಮೇಶ ಹಿರೇಮಠ ಮುಗಳಖೋಡ.
ಮುಗಳಖೋಡ: ಸರ್ವಜ್ಞ ಎಂಬುವನು ಗರ್ವದಿಂದಾದವನೇ, ಸರ್ವರೊಳಗೆ ಒಂದೊಂದು ನುಡಿ ಕೇಳಿ ವಿಷಯ ಸಂಗ್ರಹಿಸಿ ಕಲಿತವನೇ ಸರ್ವಜ್ಞ. ಅದರಂತೆ ಯಾವ ಮಾರ್ಗದಿಂದ ಆದರೂ ಸರಿ, ಯಾರಿಂದಾದರೂ ಸರಿ ವಿಷಯವನ್ನ ಸಂಗ್ರಹಿಸುವುದನ್ನು ರೂಡಿಸಿಕೊಂಡಾಗ ಮಾತ್ರ ಐಎಎಸ್ ಕೆಎಎಸ್ ನಂತಹ ಕನಸು ಕಾಣಲು ಸಾಧ್ಯ ಎಂದು ಡಾ ಸಿ ಆರ್ ಗುಡಸಿ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಡಾ. ಸಿ. ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಸ್ನೇಹಿತರ ಪಾತ್ರ ಬಹುಮುಖ್ಯವಾದದ್ದು, ಜನರು ಗೆದ್ದವರನ್ನು ಮಾತ್ರ ನೆನಪಿಡುತ್ತಾರೆ. ಇವತ್ತಿನ ದಿನಮಾನಗಳಲ್ಲಿ ಹೆಚ್ಚಿನ ಶಿಕ್ಷಣವಾದರೂ ಕಡಿಮೆ ಉದ್ಯೋಗ ದೊರೆಯುವುದು ಸಾಮಾನ್ಯವಾಗಿದೆ. ಕಾರಣ ಇವತ್ತಿನ ವಿದ್ಯಾರ್ಥಿಗಳು ಗುರುವಿನ ಮಹತ್ವವನ್ನು ಅರಿತುಕೊಂಡು ಹೆಚ್ಚಿನ ವಿಷಯಗಳನ್ನು ಸಂಗ್ರಹಣೆ ಮಾಡಿಕೊಂಡು ದೊಡ್ಡ ದೊಡ್ಡ ಉದ್ಯೋಗಗಳ ಕಡೆ ಮುಖ ಮಾಡಬೇಕಿದೆ. ಭಾರತ ದೇಶವು ತನ್ನ ಸಂಸ್ಕಾರದಿಂದ ಎಲ್ಲೆಡೆ ಗುರುತಿಸಿಕೊಂಡಿದೆ, ಇಲ್ಲಿರುವ ವಿದ್ಯಾರ್ಥಿಗಳು ಜ್ಞಾನದೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು, ಸಮಾಜದಲ್ಲಿ ಗುರುತಿಸಲ್ಪಡುವ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಾ. ಸಿ. ಬಿ. ಕುಲಿಗೋಡ ಕಾಲೇಜಿನಲ್ಲಿ ಸಿಗುವ ಆಟ ಪಾಠಗಳೆಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಗುರುವಿನ ಮಾರ್ಗದರ್ಶನದಂತೆ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಪ್ರಾಚಾರ್ಯ ಪಿ.ಸಿ. ಕಂಬಾರ ಎಲ್ಲರನ್ನ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ವಿಷ್ಣು ಮುಧೋಳ್, ಸೃಷ್ಟಿ ಹೊನ್ನಳ್ಳಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು.
ನಂತರ ಪದವಿ ಮಹಾವಿದ್ಯಾಲಯದ ಪ್ರಥಮ ವರ್ಗದ ವಿದ್ಯಾರ್ಥಿಗಳಿಗೆ ಹಲವಾರು ಆಟಗಳ ಜೊತೆ ಮನರಂಜನಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಎಲ್ಲ ವಿದ್ಯಾರ್ಥಿಗಳು ಭಾಗಿಯಾಗಿ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಸಹನಾ ಕಾಡಶೆಟ್ಟಿ ನಿರೂಪಿಸಿ, ಮುರುಘೇಂದ್ರ ಗೋಕಾಕ್ ಸ್ವಾಗತಿಸಿ, ಆರತಿ ಪಾಟೀಲ್ ವಂದಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾದ ಪ್ರಕಾಶ್ ಆದಪ್ಪಗೋಳ, ಎಸ್ ಎಸ್ ಮದಾಳೆ, ಎಸ್ ಎಸ್ ಕುಲಿಗೋಡ್, ಎಸ್ ಎಮ್ ಕೊಪ್ಪದ್, ಸಂಸ್ಕೃತಕ ವಿಭಾಗದ ಮುಖ್ಯಸ್ಥರಾದ ಸಂಗಮೇಶ್ ಹಿರೇಮಠ, ಗುರುಪಾದ ಜಂಬಗಿ, ಡಾ. ಪಿ ಬಿ ಕೊರವಿ, ಆರ್ ಎಸ್ ಶೇಗುಣಿಸಿ, ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರದೀಪ್ ನಾಯಕ್, ಬಿ.ಎಸ್ ಸವಸುದ್ದಿ, ಕೆ.ಪಿ. ಹಾಲಹಳ್ಳಿ, ಶ್ರೀಮತಿ ಶಿವಲೀಲಾ ಪಾರ್ವತಿ, ಆರ್. ಎಂ. ಖೇತಗೌಡರ, ಹುಸೇನ್ ಎಲಿಗಾರ್, ಬಸು ಸಣ್ಣಕ್ಕಿ ಸೇರಿದಂತೆ ಎಲ್ಲಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.