ಬೆಳಗಾವಿ
ಹುಕ್ಕೇರಿ: ತಾಲ್ಲೂಕಿನ ಮದಿಹಳ್ಳಿ ಗ್ರಾಮದ ಗ್ರಾಮ ಸಭೆ ಅರ್ಧದಲ್ಲೇ ಮುಟುಕ ಗೊಳಿಸಿದ್ದಾರೆ.ವಿವಿಧ ಯೋಜನೆಯ ವಸತಿ ಮಂಜೂರಾದ ನಿವೇಶನ ಹಂಚಿಕೆ ಮಾಡಲಾಗಿದೆ ಇವರಿಗೆ ಬೇಕಾದ ವ್ಯಕ್ತಿಗಳಿಗೆ ಹೊಸ ಅರ್ಜಿದಾರರಿಗೆ. ಹಳೆ ಅರ್ಜಿದಾರರನ್ನು ಕಡೆಗಣಿಸದಿರಿ ಎಂದು ಸ್ಥಳೀಯರು ಆರೋಪಿದಾಗ ನಾವು ಹೇಳಿದ್ದೆ ಕೊನೆ ಎಂದು ಹೇಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಧ್ಯವರ್ತಿಗಳ ಮಧ್ಯಸ್ಥಿಕೆಯಿಂದ ಮನೆಗಳ ಹಂಚಿಕೆ ಮಾಡಲಾಗಿದೆ ಅದು ಅಲ್ಲದೆ ಮಹಿಳಾ ಸದಸ್ಯರ ಬದಲಾಗಿ ಮಹಿಳಾ ಸದಸ್ಯರ ಸಂಬಂಧಿಕರು ಈ ಸಭೆಯ ವೇದಿಕೆಯನ್ನು ಅಲಂಕರಿಸಿದ್ದರು. ಕೆಲವು ಬಡ ಮಹಿಳಾ ಫಲಾನುಭವಿಗಳಿಗೆ ನಮಗೆ ಇದು ಸಲ ಮನೆ ಸಿಗುವುದಿಲ್ಲ ವೆಂದು ತಿಳಿದು ಅಳುತ್ತಾ ಗ್ರಾಮ ಸಭೆಯಿಂದ ಹೊರ ಬಂದು ಸುದ್ದಿಗಾರರೊಂದಿಗೆ ಅಳುತ್ತಾ ಮಾತನಾಡಿ ನಮ್ಮಂತಾ ಬಡವರಿಗೆ ಇಲ್ಲಿ ಬೆಲೆ ಇಲ್ಲ ಇಲ್ಲಿ ಹೇಳೋರು ಕೇಳೋರು ಬಡವರ ಪರ ಮಾತನಾಡುವವರು ಇಲ್ಲವೇ ಇಲ್ಲ. ನಂತರ ಮದಿಹಳ್ಳಿ ಗ್ರಾಮದ ಜನರು ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರು ವಿಷಯ ತಿಳಿದ ಅಧಿಕಾರಿಗಳು ಗ್ರಾಮಕ್ಕೆ ಬಂದು ವಿಚಾರಿಸಿದರು ಆವಾಗಲೂ ಬಂದ ವಿಷಯ ನಾವು ಹೇಳಿದ್ದೇ ಇಲ್ಲಿ ಕೊನೆ ಇಲ್ಲಿ ನಾವೇ ಸರ್ವಾಧಿಕಾರಿಗಳು ಎಂಬುದು ಮಧ್ಯವರ್ತಿಗಳ ಹಾವಭಾವ ಕಂಡು ಬಂದರು ಬಂದ ದಾರಿಗೆ ಸುಂಕವಿಲ್ಲ ಎನ್ನುವ ಹಾಗೆ ಅಧಿಕಾರಿಗಳು ಅಲ್ಲಿಂದ ತಮ್ಮ ಕಾಲ್ಕಿತ್ತರು.
ವರದಿ. ಕಲ್ಲಪ್ಪಾ ಮಾಳಾಜ