ಬೆಳಗಾವಿ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ದರೂರ ಕಲಾ ಹಾಗೂ ವಾಣಿಜ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಾಮರ್ಸ್ ವಿಭಾಗದಿಂದ ರಾಜ್ಯ ಮತ್ತು ಸಾರ್ವತ್ರಿಕ ಬಜೆಟ್ ಮೇಲಿನ ವಿಷಯವಾಗಿ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು.ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸಿ ಆರ್ ಗುಡಸಿಯವರು ಹಮ್ಮಿಕೊಂಡಿದ್ದ ಈ ಚರ್ಚಾ ಕೂಟದಲ್ಲಿ ಅತ್ಯುತ್ತಮ ಪ್ರಶ್ನೆ- ಉತ್ತರಗಳ ಕಲರವ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿಯ ಲೆಕ್ಕ ಪರಿಶೋಧಕರಾದ ಹಾಗೂ ಭಾರತೀಯ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಡಾ. ಸಿ ಡಿ ಮುಂಗುರವಾಡಿಯವರು,ಬಡವರ ಹಾಗೂ ಶ್ರೀಮಂತರ ನಡುವಿನ ಅಂತರವನ್ನು ಹೋಗಲಾಡಿಸೋಕೆ, ದೇಶದ ಸಮಗ್ರ ಅಭಿವೃದ್ಧಿಗಾಗಿ ಹುಟ್ಟಿದ ಮಗುವಿನಿಂದ ಹಿಡಿದು ಜೀವನದ ಅಂತ್ಯದವರೆಗೂ ಮನುಷ್ಯ ಟ್ಯಾಕ್ಸ್ ಭರ್ತಿ ಮಾಡಲೇಬೇಕು.ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸ್ ವ್ಯವಸ್ಥೆಯಲ್ಲಿ ದೇಶದ ಮೂಲ ಆದಾಯವೇ ಇದಾಗಿದ್ದರಿಂದ ಇದು ಮನುಷ್ಯ ಬದುಕಿನ ಖಚಿತ ಕಾರ್ಯವಾಗಿದೆ ಅಲ್ಲದೆ ಸಾಮಾನ್ಯ ಜನರಿಗೆ ಮತ್ತು ಅಸಾಮಾನ್ಯ ಜನರಿಗೂ ಈ ಟ್ಯಾಕ್ಸ್ ಪ್ರಕ್ರಿಯೆಗಳು ಅನುಕೂಲ ಆಗಲೆಂದು ಈಗಿನ ಕೇಂದ್ರ ಸರ್ಕಾರ ಅತ್ಯಂತ ಹತ್ತಿರದ ಸೂಕ್ತ ಅನುಕೂಲ ಕಲ್ಪಿಸಿದೆ.ಆದ್ದರಿಂದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ.ವಿಶ್ವಾಸದಿಂದ ಟ್ಯಾಕ್ಸ್ ತುಂಬಿ ದೇಶ ಅಭಿವೃಧಿ ಮಾಡಿ, ದೇಶಕ್ಕೆ ವಿಶ್ವಾಸಘಾತಕ ಮಾಡಬೇಡಿ.ದುಬೈ ದೇಶದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ 5% ಟ್ಯಾಕ್ಸ್ ಇದೆ. ಅಲ್ಲಿನ ಜನ ಅತ್ಯಂತ ಪ್ರಾಮಾಣಿಕರಾಗಿದ್ದಾರೆ ಅಲ್ಲದೆ ಅಲ್ಲಿನ ಜನ ದೇಶದ ಅಭಿವೃದ್ಧಿ ಮಂತ್ರ ಜಪಿಸುತ್ತಾರೆ ಯಾವುದೇ ಭ್ರಷ್ಟಾಚಾರ ಆ ದೇಶದಲ್ಲಿಲ್ಲ ಹಾಗಾಗಿ ಪ್ರತಿ ಮನುಷ್ಯ ಪ್ರಾಮಾಣಿಕನಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಚಿಕ್ಕೋಡಿ ಕಾಂಗ್ರೆಸ್ ಯುವ ಜಿಲ್ಲಾಧ್ಯಕ್ಷ ಯಲ್ಲಪ್ಪ ಶಿಂಗೆ,7-8 ಕೋಟಿ ಜನ ಅಂದರೆ ಪ್ರತಿಷತ 5% ಕರವನ್ನು ನಿಯಮಬದ್ಧವಾಗಿ ತುಂಬುತ್ತಿದ್ದಾರೆ.ಆಸ್ತಿಯನ್ನು ಬೇರೆಯವರ ಹೆಸರಿನಲ್ಲಿ ಇಟ್ಟು (ಬೇನಾಮಿ ಆಸ್ತಿ ಮಾಡಿರುವ ) ಹಾಗೂ ಟ್ಯಾಕ್ಸ್ ತುಂಬದೆ ಇರುವಂಥ ಮೈಗಳ್ಳತನವನ್ನು ಹಲವಾರು ಜನ ದೊಡ್ಡ ಜನರೇ ಮಾಡುತ್ತಿರುವಾಗ ಸರ್ಕಾರಕ್ಕೆ ನಾವು ಕೇಳಿಕೊಳ್ಳುವುದೇನೆಂದರೆ ಆದಾಯ ಅತಿ ಹೆಚ್ಚು ಇರೋರಿಗೆ ಹೆಚ್ಚು ಟ್ಯಾಕ್ಸ್ ಹಾಕಿ ಬಡವರಿಗೆ ಕಮ್ಮಿ ಮಾಡುವ ವ್ಯವಸ್ಥೆ ಮಾಡಬೇಕು ಹಾಗೂ ಸಬ್ಸಿಡಿ ಯೋಜನೆಗಳನ್ನು ಮಾಡಿದ್ದು ಸರಿಯಿದೆ ಏಕೆಂದರೆ ಎಲ್ಲಾ ಸ್ಥರಾದ ಜನರಿಗೆ ಸಾಮಾಜಿಕ ನ್ಯಾಯ ಒದಗಬೇಕು ಹಾಗಾಗಿ ಯೋಜನೆಗಳು ಅವಶ್ಯ ಎಂದು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ ಬಿ ನರಗುಂದ ಮಾತನಾಡಿ,
ತೆರಿಗೆ ವಸೂಲಿ ಅನಿವಾರ್ಯ. ಅದು ಬೇಕೇ ಬೇಕು. ಆದರೆ ವಿದ್ಯಾರ್ಥಿಗಳಿಗೆ ಹಾಗೂ ಬಡವರಿಗೆ ಅನುಕೂಲವಾಗುವಂತೆ ಟ್ಯಾಕ್ಸ್ ಮಾಡಬೇಕು.ಅಲ್ಲದೆ ತೆರಿಗೆ ಕಟ್ಟುವ ವ್ಯಕ್ತಿಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಕಟ್ಟದೆ ಇರೋರಿಗೆ ಇರೋದಿಲ್ಲ ಆದ್ದರಿಂದ ಎಲ್ಲರಿಗೂ ಟ್ಯಾಕ್ಸ್ ಅವಶ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿಕರಿಗೆ ಆದಾಯ ತೆರಿಗೆ ಹಾಕಬಾರದು. ಏಕೆಂದರೆ ತೆಗೆದುಕೊಂಡ ಸಾಲವನ್ನೇ ಅವರು ತುಂಬೋಕಾಗದೆ ಇರೋ ಕಾರಣ ಅವರ ಖರ್ಚು ವೆಚ್ಚಗಳನ್ನು ಬಹಳಷ್ಟು ನಿಭಾಯಿಸದೆ ಆಗದೆ ಇರೋದ್ರಿಂದ ರೈತರಿಗೆ ಟ್ಯಾಕ್ಸ್ ಹಾಕಬಾರದು ಎಂದು ವಿದ್ಯಾರ್ಥಿ ಪ್ರತಿನಿಧಿ ಕುಮಾರಿ : ಅರ್ಚನಾ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕಾಮರ್ಸ್ ವಿಭಾಗದ ವಿದ್ಯಾರ್ಥಿ/ನಿಯರು ಉಪಸ್ಥಿತರಿದ್ದರು.
ವರದಿ : ಸುನೀಲ್ ಕಬ್ಬೂರ