ಶಿಕ್ಷಣ ಎಂದರೆ ಆತ್ಮ ಸಾಕ್ಷಾತ್ಕಾರ, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಬೆಳಿಸಿ : ಪ.ಪೂ. ಪ್ರಭು ಬೆನ್ನಾಳಿ ಮಹಾರಾಜರು

Share the Post Now

*ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 18 ನೇ ವಾರ್ಷಿಕೋತ್ಸವ*

ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ

ಮುಗಳಖೋಡ: ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 18 ನೇ ವಾರ್ಷಿಕೋತ್ಸವ ಸಮಾರಂಭವು ಶನಿವಾರ ದಿನಾಂಕ 25.02.2023 ರಂದು ಸಾಯಂಕಾಲ 07.00 ಗಂಟೆಗೆ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಜಿ.ಜಂಬಗಿ ವಹಿಸಿದ್ದರು.


ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಇಂಚಗೇರಿ-ಹಿಪ್ಪರಗಿ ಮಠದ ಪೀಠಾಧಿಪತಿಗಳಾದ ಪ.ಪೂ.ಪ್ರಭು ಬೆನ್ನಾಳಿ ಮಹಾರಾಜರು ಮಾತನಾಡಿ ಶಿಕ್ಷಣ ಎಂದರೆ ಆತ್ಮ ಸಾಕ್ಷಾತ್ಕಾರ, ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ ಮತ್ತು ಸಮಾಜದಲ್ಲಿ ಸಮಾನರಾಗಿ ಬಾಳಲು ಕಲಿಸಿ ಹಾಗೂ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿ ಅವರನ್ನು ಹೃದಯ ಶ್ರೀಮಂತಿಕೆ ವ್ಯಕ್ತಿಗಳನ್ನಾಗಿ ಮಾಡಿ ಎಂದು ಆಶಿರ್ವಚನ ನೀಡಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ವಡರೇಹಟ್ಟಿ ಸರ್ಕಾರಿ ಪ.ಪೂ.ಕಾಲೇಜಿನ ಕನ್ನಡ ಉಪನ್ಯಾಸಕರಾದ ವಿ.ಬಿ.ಜೋಡಟ್ಟಿ ಅವರು ಮಾತನಾಡಿ

ಎಲ್ಲ ವಿದ್ಯಾರ್ಥಿಗಳು ಉತ್ತಮ ವಿಚಾರಗಳನ್ನು ಹೊತ್ತು ಸಾಗಿ, ಮಾನವಿಯ ಮೌಲ್ಯಗಳನ್ನು ಬೆಳಿಸಿಕೊಂಡು ಸಮಾಜದ ಉತ್ತಮ ನಾಗರಿಕರಾಗಿ ಬಾಳಿ ಹಾಗೂ ಪಾಲಕರು ಮಕ್ಕಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಮಕ್ಕಳನ್ನು ಅವರ ಪ್ರತಿಭೆಗೆ ಅನುಗುಣವಾಗಿ ಬೆಳೆಸಿ ಎಂದು ತಮ್ಮ ಮನದಾಳದ ಮಾತುಗಳನ್ನು ಅಭಿವ್ಯಕ್ತಿಗೊಳಿಸಿದರು.


ನಂತರದಲ್ಲಿ ರಾಯಬಾಗ ಶಿಕ್ಷಣ ಸಂಯೋಜಕರಾದ ಎಸ್.ಆರ್.ಕಂಬಾರ ಅವರು ಮಾತನಾಡಿ ನಿರಂತರ ಪರಿಶ್ರಮ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ, ಪಾಲಕರು ಮಕ್ಕಳಲ್ಲಿಯ ವಿಶೇಷ ಪ್ರತಿಭೆಯನ್ನು ಗುರುತಿಸಿ ಮಕ್ಕಳಲ್ಲಿಯ ಶಕ್ತಿಯನ್ನು ಹೆಚ್ಚಿಸಿ, ಮೋಬೈಲಗಳಿಂದ ದೂರವಿಡಿ ಹಾಗೂ ಅವರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿ ಎಂದು ಹೇಳಿದರು.


ಈ ಸಮಾರಂಭದಲ್ಲಿ ಸಿಆರ್.ಪಿ ಬಿ.ಸಿ. ಬಾಗೆನ್ನವರ, ಕೆ.ಬಿ.ಮುಶಿ, ಸಂಗಪ್ಪ ಜಂಬಗಿ, ಶಿವಬಸು ಕಾಪಶಿ, ಮಹಾದೇವ ಹುಕ್ಕೇರಿ, ಮಹಾಂತೇಶ ಯರಡತ್ತಿ, ಚೇತನ ಯಡವಣ್ಣವರ, ರಾಜು ನಾಯಿಕ, ರಮೇಶ ಯಡವನ್ನವರ, ಎಲ್.ಬಿ.ಮುನ್ಯಾಳ, ಶಿವನಿಂಗ ಯರಡತ್ತಿ, ಗೌಡಪ್ಪ ಖೇತಗೌಡರ, ನಾಗಪ್ಪ ಹುಕ್ಕೇರಿ ಮುಖ್ಯೋಪಾಧ್ಯಾಯರಾದ ಅಜಯ ತೇರದಾಳ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಮುಂತಾದವರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

error: Content is protected !!