ಬೆಳಗಾವಿ
ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾ. ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳಿಂದ ಚಾಲನೆ;
ವರದಿ: ಸಂಗಮೇಶ ಹಿರೇಮಠ. ಮುಗಳಖೋಡ
ಮುಗಳಖೋಡ: ರಾಯಬಾಗ ತಾಲೂಕು ಸುಕ್ಷೇತ್ರ ಮುಗಳಖೋಡ ಪವಾಡ ಪುರುಷ ಸದ್ಗುರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಬ್ರಹನ್ ಮಠದಲ್ಲಿ ಬರುವ ಮಾರ್ಚ್ ೫ರಂದು ಸಿದ್ದಶ್ರೀ ಸೌಹಾರ್ದ ಸಹಕಾರಿ ಸಂಘವು ಮುಗಳಖೋಡ ಶಾಖೆಯು ಅಧಿಕೃತ ಕಾರ್ಯರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾಕ್ಟರ್ ಶ್ರೀ ಮುರುಘರಾಜೇಂದ್ರ ಮಹಾ ಶಿವಯೋಗಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಚನ್ನಬಸಪ್ಪ ನಾಡಗೌಡ, ಮುರಳಿಧರ ಏಕಲರಕರ, ಬಸವರಾಜ ಚೋಪಾಟಿ, ಸಿದ್ಧಶ್ರೀ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಚಂದ್ರಶೇಖರ ಸಂಗಣ್ಣ, ಕಾಶಿರಾಜ ಚಪ್ಪರಬಂಡಿ, ಪ್ರಕಾಶ ಭಂಡಾರೆ, ಜಗದೀಶ ಬೂದಿಹಾಳ, ಸಂಜಯ ಬಿರಡಿ, ಬಸಯ್ಯ ಮಠದ, ಸಂತೋಷಕುಮಾರ ಪಾಟೀಲ, ಹಿರಿಯರು ಮಾರುತಿ ಗೋಕಾಕ, ಪುರಸಭೆಯ ಸದಸ್ಯ ಪರಗೌಡ ಖೇತಗೌಡ, ಬಸವರಾಜ ಪಾಟೀಲ, ಗುರು ಹಿರೇಮಠ, ಸೋಮು ಹೊರಟ್ಟಿ, ಶ್ರೀ ಮಠದ ವ್ಯವಸ್ಥಾಪಕರು ಮಲ್ಲಿಕಾರ್ಜುನ ಢಕ್ಕುಳಗಿ, ಶಾಖಾ ವ್ಯವಸ್ಥಾಪಕರು ಕಲ್ಲಪ್ಪ ನಿಡೋಣಿ ಹಾಗೂ ಬ್ಯಾಂಕ್ ಸಿಬ್ಬಂದಿಯವರು ಉಪಸ್ಥಿತರಿದ್ದರು.