ಬೆಳಗಾವಿ
ವರದಿ :ಸುನೀಲ್ ಕಬ್ಬುರ್
ರಾಯಬಾಗ:ತಾಲ್ಲೂಕಿನ ಹಾರೂಗೇರಿ ಪಟ್ಟಣದ ಕ್ರಿಯಾಶೀಲ ಸಂಘಟಕರು, ಶರಣಜೀವಿ ಶ್ರೀ ಸಂಜಯ ಗುರವ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಮಹಾರಾಷ್ಟ್ರ ರಾಜ್ಯದ ಬುಲ್ಡಾನಾ ಮಾಜಿ ಶಾಸಕರಾದ ಶ್ರೀ ವಿಜಯರಾಜ ಶಿಂಧೆ, ಹಾಗೂ ರಾಷ್ಟ್ರೀಯ ಕಾರ್ಯದರ್ಶಿಯಾದ ಶ್ರೀ ಮಲ್ಲಿಕಾರ್ಜುನ ಗುರವ, ಸೊಲ್ಲಾಪುರ ಹಾಗೂ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾದ ಶ್ರೀ ಪ್ರತಾಪ ರಾವ ಗುರವ ಅವರು ಶ್ರೀ ಸಂಜಯ ಗುರವ ಅವರನ್ನು ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.
ಈಗಾಗಲೇ ಅಖಿಲ ಕರ್ನಾಟಕ ಹೂಗಾರ ಮಹಾಸಭಾ (ರಿ) ಬೆಂಗಳೂರು ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ, ಹಾಗೂ ಅಖಿಲ ಕರ್ನಾಟಕ ಹೂಗಾರ ಯುವ ಸೇನೆಯ ರಾಜ್ಯ ಸಲಹಾ ಸಮೀತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 10 ವರುಷಗಳಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಂಜಯ ಅವರ ಸಾಮಾಜಿಕ ಕೈಂಕರ್ಯವನ್ನು ಗುರುತಿಸಿ ಒಂದು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಈ ಉನ್ನತ ಪಟ್ಟ ಪ್ರಾಪ್ತವಾಗಿದ್ದಕ್ಕೆ ಜಿಲ್ಲೆಯ ಹಾಗೂ ತಾಲ್ಲೂಕಿನ ಗುರವ ಹಾಗೂ ಹೂಗಾರ ಸಮಾಜದ ಮುಖಂಡರು, ಹಿರಿಯರು ಹಾಗೂ ಹಿತೈಷಿಗಳು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.





