ನುಡಿದಂತೆ ನಡೆದ ಸರಕಾರ ನಮ್ಮದು : ಲಕ್ಷ್ಮಣ ಸವದಿ.
ಹಡಪದ ಸಮಾಜಕ್ಕೆ ‘ ಕರ್ನಾಟಕ ಹಡಪದ ಅಭಿವೃದ್ದಿ ನಿಗಮ’ ಸ್ಥಾಪನೆ.

Share the Post Now

ಬೆಳಗಾವಿ

ವರದಿ :ಸಚಿನ್ ಕಾಂಬ್ಳೆ


ಅಥಣಿ : ಕರ್ನಾಟಕ ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಹಡಪದ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಬಿಜೆಪಿ ಸರಕಾರ ಕೊಟ್ಟ ಮಾತಿನಂತೆ ನಡೆಯುವ ಮೂಲಕ “ಕರ್ನಾಟಕ ಹಡಪದ ಅಭಿವೃದ್ದಿ ನಿಗಮ ಮಂಡಳಿ” ಸ್ಥಾಪಿಸಿ ಈ ಸಮುದಾಯವನ್ನು ಮೇಲಕ್ಕೆ ತರುವಂತಹ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ವಿ.ಪ ಸದಸ್ಯ ಲಕ್ಷ್ಮಣ ಸವದಿ ಅವರು ಹೇಳಿದರು.

ಅವರು ಕರ್ನಾಟಕ ರಾಜ್ಯ ಸರ್ಕಾರ ಹಡಪದ ಸಮುದಾಯಕ್ಕೆ ನಿಗಮ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಥಣಿ ತಾಲೂಕು‌ ಹಡಪದ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಕಾಯಕ ನಿಷ್ಠೆಗೆ ಹೆಸರುವಾಸಿಯಾದ ಹಡಪದ ಸಮಾಜಕ್ಕೆ ನಮ್ಮ ಸರಕಾರ ಸಾಮಾಜಿಕ ನ್ಯಾಯ ಒದಗಿಸಿದೆ, ಈ ಸಮಾಜ ಬಾಂಧವರು ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಸಬಲರಾಗಬೇಕು ಎಂದರು.

ಅನಂತರ ಮಾತನಾಡಿದ ಹಡಪದ ಸಮಾಜ ತಾಲೂಕಾಧ್ಯಕ್ಷ ಶಿವಾನಂದ ಹುನ್ನೂರ ಅವರು ತೀರಾ ಹಿಂದೆ ಉಳಿದ ಸಮಾಜಕ್ಕೆ ಬೊಮ್ಮಾಯಿ‌ ನೇತೃತ್ವದ ಸರಕಾರ ನಿಗಮ ಮಂಡಳಿ ರಚಿಸಿ ಅಭಿವೃದ್ದಿಗೆ ಸಹಕಾರ ಕೊಟ್ಟಿದೆ ಈ ಕಾರ್ಯಕ್ಕೆ ಮಾಜಿ ಉಪಮುಖ್ಯಮಂತ್ರಿ, ವಿ.ಪ ಸದಸ್ಯ ಲಕ್ಷ್ಮಣ ಸವದಿ ಸೇರಿದಂತೆ ಇತರರ ಸಹಕಾರ ಬಲು ದೊಡ್ಡದು, ನಮ್ಮ ಸಮಾಜಕ್ಕೆ ಇದು ಒಂದು ದೊಡ್ಡ ಮೈಲುಗಲ್ಲು ಇದಕ್ಕೆ ಸಹಕರಿಸಿದ ಇತರ ಶಾಸಕರಿಗೆ, ಸಚಿವರಿಗೂ ಕೂಡ ಧನ್ಯವಾದಗಳು ಎಂದರು.

ಈ ವೇಳೆ ಸುರೇಶ ಹಡಪದ, ಮಾಂತೇಶ ಹಡಪದ, ಶಂಕರ ಹಡಪದ, ಮಾರುತಿ ನಾವಿ, ಚನ್ನಪ್ಪಾ ನಾವಿ, ಅನೀಲ ನಾವಿ, ಕುಮಾರ ನಾವಿ, ಶಂಕರ ನಾವಿ, ಬಸು ನಾವಿ, ಸಂಜು ನಾವಿ, ಶಿವು ನಾವಿ, ಶ್ರೀಕಾಂತ ನಾವಿ, ಅರುಣ ನಾವಿ, ಶಿವಾಜಿ ನಾವಿ, ಸದಾಶಿವ ನಾವಿ, ಮಲ್ಲು‌ ನಾವಿ, ಅಪ್ಪು ಹಡಪದ, ಆನಂದ ಹಡಪದ, ಶ್ರೀಮಂತ ನಾವಿ, ಧರೆಪ್ಪಾ ನಾವಿ, ಮುತ್ತಪ್ಪಾ ನಾವಿ, ರಾಜು ಹಡಪದ, ಮಾದೇವ ನಾವಿ, ವಿಜಯ ನಾವಿ ಸೇರಿದಂತೆ ಇತರರಿದ್ದರು.

Leave a Comment

Your email address will not be published. Required fields are marked *

error: Content is protected !!