ಮೋಜು ಮಸ್ತಿ ಸ್ಥಾನವಾದ ಮುಗಳಖೋಡ ನಿರೀಕ್ಷಣಾ ಮಂದಿರ

Share the Post Now

ಬೆಳಗಾವಿ

ವರದಿ:- ರಾಜಶೇಖರ ಶೇಗುಣಸಿ ಮೂಗಳಖೋಡ

ಮುಗಳ ಖೋಡ ಲೋಕೋಪಯೋಗಿ ನಿರೀಕ್ಷಣಾ ಮಂದಿರ ಇದು ರಾಜಕೀಯ ವ್ಯಕ್ತಿಗಳ ಹಿಂಬಾಲಕರ ಐಷಾರಾಮಿ ಬಂಗಲೆಯಾದ ಪರಿವರ್ತನೆ ಆಗುತ್ತಿದೆ

ಆವರಣದಲ್ಲಿ ರಾಜಾರೋಷವಾಗಿ ಮಧ್ಯಸೇವನೆ, ಸೋಮವಾರವೂ ಮಾಂಸಾಹಾರ, ಸಾಮಾನ್ಯರಿಗಿಲ್ಲ ಆಹಾರ.ಎಗ್ಗಿಲ್ಲದೇ ನಡೆಯುತ್ತದೆ

ಮುಗಳಖೋಡ: ಪಟ್ಟಣದ ಪುರಸಭೆ ಎದುರಿಗಿರುವ ಲೋಕೋಪಯೋಗಿ ನಿರೀಕ್ಷಣಾ ಮಂದಿರ ಸಂಜೆಯಾದರೆ ಸಾಕು ಕೆಲವು ರಾಜಕಾರಣಿಗಳ ಹಾಗೂ ಅವರ ಹಿಂಬಾಲಕರ ಐಷಾರಾಮಿ, ಮೋಜಿನ ರೆಸ್ಟೋರಂಟ್ ಆಗಿ ಪರಿವರ್ತನೆಯಾಗುತ್ತಿರುವುದು ವಿಪರ್ಯಾಸದ ಸಂಗತಿ.

ನಿರೀಕ್ಷಣಾ ಮಂದಿರ ಇರುವುದು ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸದ ನಿರೀಕ್ಷಣೆ ನಿಮಿತ್ಯ ಆಗಮಿಸಿದಾಗ ಊಟ ಮತ್ತು ವಿಶ್ರಾಂತಿಗಾಗಿ. ಸುತ್ತಮುತ್ತ ಲೋಕೋಪಯೋಗಿ ಇಲಾಖೆ ಹಾಗೂ ಇನ್ನುಳಿದ ಇಲಾಖೆಗಳಿಂದ ನಿರ್ಮಾಣ ಹಂತದಲ್ಲಿರುವ ಕಟ್ಟಡ ಮತ್ತು ಕಾಮಗಾರಿಗಳ ಪರಿವೀಕ್ಷಣೆಗಾಗಿ ಬಂದ ಅಧಿಕಾರಿ ಹಾಗೂ ಮೇಲಾಧಿಕಾರಿಗಳ ವಿಶ್ರಾಂತಿಗಾಗಿ ಇಂತಹ ಕಟ್ಟಡಗಳನ್ನು ಇಲಾಖೆ ನಿರ್ಮಿಸಿ ಸಾರ್ವಜನಿಕರು ಊಟ ಮಾಡಲು ಇಲ್ಲಿ ಅವಕಾಶ ಕಲ್ಪಿಸಿರುತ್ತದೆ.

ಆದರೆ ಇಂತಹ ಕಟ್ಟಡವೊಂದು ಪಟ್ಟಣದಲ್ಲಿ ದುರುಪಯೋಗವಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಲ್ಲಿ ಕೇವಲ ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗೆ ಮಾತ್ರ ಊಟದ ವ್ಯವಸ್ಥೆ, ಮಧ್ಯ ಸೇವನೆ ಮಾಡಲು ಇಲ್ಲಿನ ನಿರೀಕ್ಷಣಾ ಮಂದಿರ ವ್ಯವಸ್ಥಾಪಕರು ಕಲ್ಪಿಸಿಕೊಡುತ್ತಿದ್ದಾರೆ. ಮತ್ತು ಸಂಜೆಯಾದರೆ ಸಾಕು ರಾಜಾರೋಷವಾಗಿ ಇಲ್ಲಿನ ಆವರಣದಲ್ಲಿ ಅಕ್ರಮವಾಗಿ ಮಧ್ಯಸೇವನೆ ಮಾಡುತ್ತಿದ್ದಾರೆಂದು ಪ್ರತ್ಯೇಕ್ಷದರ್ಶಿಗಳು ತಮ್ಮ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾರ್ವಜನಿಕರಿಗಿಲ್ಲ ಊಟ: ಸಾರ್ವಜನಿಕರು ಊಟ ಕೇಳಿ ಹೋದರೆ ಇಲ್ಲವೆನ್ನುವ ವ್ಯವಸ್ಥಾಪಕ, ಅದೇ ರಾಜಕೀಯ ವ್ಯಕ್ತಿಗಳಿಗೆ ವಿಶ್ರಾಂತಿ ಕೊಠಡಿಯಲ್ಲಿ ಕುಳಿತು ಊಟ ಮತ್ತು ಮಧ್ಯ ಸೇವಿಸಲು ಅವಕಾಶ ಕಲ್ಪಿಸುತ್ತಿರುವುದು ನಾಗರೀಕರ ಕೋಪಕ್ಕೆ ಕಾರಣವಾಗಿದೆ.

ಪಟ್ಟಣದ ಕಟ್ಟಳೆ ಮೀರಿ ಮಾಂಸಾಹಾರ: ಪಟ್ಟಣದಲ್ಲಿ ಸೋಮವಾರ ಮಾಂಸ ಮಾರಾಟ ಮಾಡುವಂತಿಲ್ಲ ಹಾಗೂ ಮಾಂಸಾಹಾರ ನೀಡುವಂತಿಲ್ಲ ಎಂಬ ಕಟ್ಟಳೆಯಿದೆ. ಆದರೂ ಅದ್ಯಾವದನ್ನು ಲೆಕ್ಕಿಸದೆ ಮಾಂಸಾಹಾರವನ್ನು ಇಲ್ಲಿ
ನೀಡುತ್ತಿರುವುದು ಪಟ್ಟಣದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಸಾಮಾನ್ಯವಾಗಿ ಪ್ರವಾಸಿ ಮಂದಿರ ವಿಶೇಷ ಅತಿಥಿಗಳು (ಸರಕಾರಿ ಅಧಿಕಾರಿಗಳು) ಮತ್ತು ಪ್ರವಾಸಿಗರು ಕಡಿಮೆ ವೆಚ್ಚದಲ್ಲಿ ತಂಗಲು ಅನುಕೂಲವಾಗಲಿ ಎಂದು ನಿರ್ಮಿಸಿರುತ್ತಾರೆ. ಆದರೆ ಅಲ್ಲಿ ನಿತ್ಯ ರಾಜಕೀಯ ಪಕ್ಷಗಳಿಂದ ಗುರುತಿಸಿಕೊಂಡ ಜನರು ಕಿಕ್ಕಿರಿದು ತುಂಬಿರುತ್ತಾರೆ. ಪ್ರವಾಸಿ ಮಂದಿರದಲ್ಲಿ ರಾಜಕೀಯ ನಾಯಕರು ಇಲ್ಲದಿದ್ದರೂ ಅವರ ಹಿಂಬಾಲಕರಂತೂ ದಿನವಿಡಿ ಅಲ್ಲೆ ಬೀಡು ಬಿಟ್ಟಿರುತ್ತಾರೆ . ಅಲ್ಲಿಯೇ ತಿಂಡಿ, ಚಹಾ ಕುಡಿದು ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂದು ಸಾರ್ವಜನಿಕರ ಆರೋಪವಾಗಿದೆ.

ಇನ್ನು ಎಲ್ಲಾ ವಿಶ್ರಾಂತಿ ಕೊಠಡಿಗಳ ಸ್ವಚ್ಚತೆ ನಿರ್ವಹಿಸುವುದು ಇವರ ಕರ್ತವ್ಯವಾದರೂ, ಕೊಠಡಿಗಳಲ್ಲಿ ಮಧ್ಯ ಮತ್ತು ಧೂಮಪಾನದ ದುರ್ವಾಸನೆ ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ

ಸರ್ಕಾರ ಸಾರ್ವಜನಿಕರ ತೆರಿಗೆ ಹಣದಿಂದ ಕೋಟಿಗಟ್ಟಲೆ ಅನುದಾನ ವ್ಯಯಿಸಿ ನಿರ್ಮಿಸಿರುವ ಪ್ರವಾಸಿ ಮಂದಿರಗಳು ಪ್ರವಾಸಿಗರ ಪಾಲಿಗೆ ನಿರುಪಯುಕ್ತವಾಗುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಇಲ್ಲಿ ನಡೆಯುವ ಘಟನೆಗಳನ್ನು ಸ್ಥಗಿತಗೊಳಿಸಿ, ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಾಕ್ಷ್ ಲೈನ್: …
1)..ಅಧಿಕಾರಿಗಳನ್ನು ಹೊರತುಪಡಿಸಿ ನಿರೀಕ್ಷಣಾ ಮಂದಿರದಲ್ಲಿ ಊಟಕ್ಕೆಂದು ಹೋದ ಎಲ್ಲರನ್ನು ಸಮಾನರನ್ನಾಗಿ ಕಾಣಬೇಕು. ರಾಜಕೀಯ ವ್ಯಕ್ತಿಗಳೆಂದು ಬಿಂಬಿಸಿಕೊಳ್ಳುವವರಿಗೆ ರಾಜಗೌರವ, ಜನಸಾಮಾನ್ಯರಿಗೆ ಇನ್ನೊಂದಾಗಬಾರದು. ಮೇಲಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ, ವ್ಯವಸ್ಥಾಪಕರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.

-ಶಿವಲಿಂಗ ರಾ. ಕಟಕಭಾವಿ, ಪಟ್ಟಣದ ವ್ಯಾಪಾರಸ್ಥರು.

ನಿರೀಕ್ಷಣಾ ಮಂದಿರವಿರುವುದು ಸಾರ್ವಜನಿಕರಿಗೋ? ಅಥವಾ ಕೇವಲ ಪುರಸಭೆ ಸದಸ್ಯರಿಗೋ ತಿಳಿಯುತ್ತಿಲ್ಲ. ನಾವು ವಿಶ್ರಾಂತಿಗೆಂದು ಹೋದರೆ ಇಲ್ಲವೆನ್ನುವ ವ್ಯವಸ್ಥಾಪಕ, ಪುರಸಭೆ ಸದಸ್ಯರಿಗೆ ಮಧ್ಯ ಸಹಿತ ಊಟ ನೀಡುತ್ತಾನೆ. ಸೋಮವಾರವೂ ಮಾಂಸಾಹಾರ ನೀಡುತ್ತಾನೆ. ಎಲ್ಲರೂ ಸಮಾನರೆಂದು ಬಂದವರಿಗೆ ಆತಿಥ್ಯ ನೀಡಬೇಕು. ಇಲ್ಲದಿದ್ದರೆ ಈ ಅವ್ಯವಸ್ತೆ ನಿಲ್ಲಬೇಕೇಂದು ಒತ್ತಾಯಿಸುತ್ತೇನೆ


3).ಪ್ರವಾಸಿ ಮಂದಿರದಲ್ಲಿ ಈ ರೀತಿ ಅಕ್ರಮಗಳು ನಡೆಯಬಾರದು. ವಿಷಯ ನನ್ನ ಗಮನಕ್ಕೆ ಈಗ ಬಂದಿದೆ. ಈ ರೀತಿ ಮಾಡಬಾರದೆಂದು ವ್ಯವಸ್ಥಾಪಕನಿಗೆ ಎಚ್ಚರಿಕೆ ನೀಡಿ, ಕ್ರಮ ಜರುಗಿಸಲಾಗುವುದು. ಎಂದು ಕೆ.ಎನ್. ಹಂಚಿನಮನಿ
ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ರಾಯಬಾಗ ಉಪ ವಿಭಾಗ ಇವರು ತಿಳಿಸಿದರು.

Leave a Comment

Your email address will not be published. Required fields are marked *

error: Content is protected !!