ಬೆಳಗಾವಿ
ವರದಿ. ಕಲ್ಲಪ್ಪಾ ಮಾಳಾಜ
ಭಾರತೀಯ ಜನತಾ ಪಕ್ಷದ ಆಡಳಿತದಿಂದ ಸಾಮಾನ್ಯ ಜನರ ಜೀವನ ದುಸ್ಥರವಾಗಿದೆ ಎಂದು ಮಾಜಿ ಸಚಿವ ಎ ಬಿ ಪಾಟೀಲ ಹೇಳಿದರು.
ಇಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಬಿ ಜೆ ಪಿ ಸರ್ಕಾರ ದಿನ ನಿತ್ಯದ ಅಗತ್ಯ ವಸ್ತುಗಳಾದ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಬೆಳೆಕಾಳುಗಳುಗಳಿಂದ ಉಪ್ಪಿನ ವರಗೆ ಬೆಲೆಗಳನ್ನು ಹೆಚ್ಚಿಸಿ ಬಡವರ,ದಿನ ದಲಿತರ, ಕೂಲಿಕಾರರ ಮತ್ತು ಮದ್ಯಮ ವರ್ಗದ ಜನರ ಬದುಕು ದುಸ್ಥರಮಾಡಿದ್ದಾರೆ.
ಮುಂಬರುವ 2023ರರ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿ ಜೆ ಪಿ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ,
ಹುಕ್ಕೇರಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೆ ಎಂದು ಘೋಷನೆ ಮಾಡಿದರು.ಅಲ್ಲದೆ ಮಾರ್ಚ 2 ರಂದು ಹುಕ್ಕೇರಿ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಜರಗಲಿರುವ ಪ್ರಜಾದ್ವನಿ ಯಾತ್ರೆಗೆ ಸುಮಾರು 20 ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಹುಕ್ಕೇರಿ ಬ್ಲಾಕ್ ಅದ್ಯಕ್ಷ ವಿಜಯ ರವದಿ, ಸಂಕೇಶ್ವರ ಬ್ಲಾಕ್ ಅದ್ಯಕ್ಷ ಸಂತೋಷ ಮುಡಸಿ, ಮಹಿಳಾ ಅದ್ಯಕ್ಷೆ ರೇಖಾ ಚಿಕ್ಕೋಡಿ, ಮುಖಂಡರಾದ ಬಸವರಾಜ ಪಾಟೀಲ, ವೃಷಭ ಪಾಟೀಲ, ಶಾನೂಲ ತಹಶಿಲ್ದಾರ, ರಾಜು ಸಿದ್ನಾಳ, ಕರುಣಾಕರ ಶೇಟ್ಟಿ, ಚಂದು ಗಂಗಣ್ಣವರ, ಗವಿಶ ರವದಿ ಮೊದಲಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.