ಬೆಳಗಾವಿ
ವರದಿ: ಸಂಗಮೇಶ ಹಿರೇಮಠ. ಮುಗಳಖೋಡ
ಮುಗಳಖೋಡ: ಪಟ್ಟಣದ ಚ.ವಿ.ವ. ಸಂಘದ ಬಾ.ಸಿ. ಮಠಪತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಮಂಗಳವಾರ ದಿನಾಂಕ 28 ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಸಿ. ಕಂಬಾರ ಮಾತನಾಡಿ ವಿದ್ಯಾರ್ಥಿಗಳು ಅವಶ್ಯಕತೆಗೆ ಮಾತ್ರ ಮೊಬೈಲ್ ಬಳಸಿ ಉಳಿದ ಸಮಯವನ್ನು ವಿದ್ಯಾಭ್ಯಾಸಕ್ಕಾಗಿ ಮೀಸಲಿಡಿ ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕ ಎಸ್.ಎ. ಹಿರೇಮಠ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಂಡು ಗುರುವಿನೊಂದಿಗೆ ಭಯ, ಭಕ್ತಿ, ನಂಬಿಕೆಯಿಂದ ಗೌರವಯುತವಾಗಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎ. ಕೊಪ್ಪದ ಎಲ್ಲರನ್ನ ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಶಾಲೆಗೆ ಈ ವರ್ಷದ ಆದರ್ಶ ವಿದ್ಯಾರ್ಥಿಯಾಗಿ ವಿನಾಯಕ ಮಾದರ, ಆದರ್ಶ ವಿದ್ಯಾರ್ಥಿನಿಯಾಗಿ ಅಖಿಲಾ ಚೌಗಲಾ ಹಾಗೂ ಅತ್ಯುತ್ತಮ ವಿದ್ಯಾರ್ಥಿ ಪ್ರಜ್ವಲ್ ಹುಕ್ಕೇರಿ, ಅತ್ಯುತ್ತಮ ವಿದ್ಯಾರ್ಥಿನಿ ಅಮೃತಾ ತೂಗದೆಲಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಎ.ಆರ್. ಹಿರೇಮಠ ನಿರೂಪಿಸಿ, ಎಸ್. ಆರ್. ಪಣದಿ ಸ್ವಾಗತಿಸಿ, ಎ. ಆರ್. ಮುನ್ಯಾಳ ವಂದಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್. ಹಿರೇಮಠ, ವಿ.ಬಿ. ನಾಯಿಕ, ಕುಮಾರಿ ಶೃತಿ ಕೊಣ್ಣೂರ, ಶ್ರೀಮತಿ ಡಿ.ಎನ್. ಮುಳಸಾವಳಗಿ ಸೇರಿದಂತೆ ಶಾಲೆಯ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.