ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಕೇಸ್ಕರದಡ್ಡಿ ಮತ್ತು ಬಾವನದಡ್ಡಿಯಲ್ಲಿ ಹನಿ ನೀರಿಗಾಗಿ ಪರದಾಟ

Share the Post Now

ಬೆಳಗಾವಿ


ತೀವ್ರ ಬರಪೀಡಿತ ಗ್ರಾಮಗಳ ಜನರ ಜಲದಾಹ ನೀಗಿಸಬೇಕಾದ ಕೋಹಳ್ಳಿಯ ಕೇಸ್ಕರದಡ್ಡಿ ಮತ್ತು ಬಾವನದಡ್ಡಿಯಲ್ಲಿ ಬಿರು ಬೇಸಿಗೆ ಪ್ರಾರಂಭವಾಗುವ ಮುನ್ನವೇ ಹನಿ ನೀರಿಗಾಗಿ ಕೇಸ್ಕರದಡ್ಡಿ ಮತ್ತು ಬಾವನದಡ್ಡಿ ಜನರು ಪರದಾಡುವಂತಾಗಿದೆ.
ನೀರಿಗಾಗಿ ಮೈಲಿಗಟ್ಟಲೇ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.


ಕೇಸ್ಕರದಡ್ಡಿ ಮತ್ತು ಬಾವನದಡ್ಡಿ ಯಲ್ಲಿ ಸುಮಾರು 150ಕ್ಕಿಂತ ಹೆಚ್ಚು ಕುಟುಂಬಗಳು ವಾಸವಾಗಿವೆ ಈ ಎರಡು ದಡ್ಡಿಯಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಬೋರವೇಲ್ಗಳಿಲ್ಲ.

ಕೇಸ್ಕರದಡ್ಡಿ ಮತ್ತು ಬಾವನದಡ್ಡಿಗೆ ಇರುವ ಒಂದೇ ಟಾಕೆಯಿಂದ ಎರಡು ದಡ್ಡಿಗೆ ನೀರು ಸಫಲಯ್ ಆಗುತ್ತೆ ಸುಮಾರು ಎರಡು ತಿಂಗಳಿನಿಂದ ಈ ಟಾಕೆಗೆ ಹೊಳೆ ನೀರು ಬರ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ಇಲ್ಲಿನ ನೀರಿನ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ಮಹಿಳೆಯರು ಪಬ್ಲಿಕ್ 24 ನ್ಯೂಸ್ ಮುಂದೆ ತಮ್ಮ ಅಳಲು ತೋಡಿಕೊಂದಿದ್ದಾರೆ.
ಇನ್ನು ಗ್ರಾಮಕ್ಕೆ ಸೇದು ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಅದು ಬೇಸಿಗೆಯಲ್ಲಿ ನೀರು ಬರುವುದಿಲ್ಲ ಹೀಗಾಗಿ ಇಲ್ಲಿನ ಮಹಿಳೆಯರು ನೀರಿಗಾಗಿ ದಿನ ನಿತ್ಯ ಪರದಾಡಿ ಸೋತು ಸುಣ್ಣಾಗುತ್ತಿದ್ದಾರೆ ಇನ್ನು ಕಡು ಬಿಸಿಲು ಪ್ರಾರಂಭವಾಗುವ ಮುನ್ನವೇ ಹನಿ ನೀರಿಗಾಗಿ ದಡ್ಡಿಯ ಜನರು ಪರದಾಡುತ್ತಿದ್ದಾರೆ. ಇನ್ನು ಮೇ ತಿಂಗಳಲ್ಲಿ ನೀರಿನ ಹಾಹಾಕಾರ ಹೇಗೆ ಇರಬಹುದು ಎಂದು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಂದು ಕುಟುಂಬಗಳಿಗೆ ಅನುಕೂಲವಾಗಲೆಂದು ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದೆ.

ಆದರೆ ಕೇಸ್ಕರದಡ್ಡಿ ಮತ್ತು ಬಾವನದಡ್ಡಿ ಜನರಿಗೆ ಅದು ಮರೀಚಿಕೆಯಾಗೆ ಉಳಿದಿದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಅದು ತುಕ್ಕು ಹಿಡಿದಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ 13 ಹಳ್ಳಿಗಳಿಗೆ ಸರಬರಾಜು ಆಗುತ್ತೆ ಆದರೆ ಕೋಹಳ್ಳಿ ಗ್ರಾಮದ ಕೇಸ್ಕರದಡ್ಡಿ ಮತ್ತು ಬಾವನದಡ್ಡಿ ಸೇರಿದಂತೆ ಬರಪೀಡಿತ ಮಡ್ಡಿಭಾಗದ ಜನರ ಜಲದಾಹ ನೀಗಿಸುವದಕ್ಕಾಗಿ ಐಗಳಿ ಕ್ರಾಸ್ ದಲ್ಲಿ ಬಹುಗ್ರಾಮ ಕುಡಿಯುವ ಯೋಜನೆಯನ್ನು ಪ್ರಾರಂಭಿಸಲಾಯಿತು. ಆದರೆ ಜನರ ನೀರಿನ ದಾಹ ನೀಗಿಸುವಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಯಿತು. ಈ ಯೋಜನೆ ನೀರು ನೀಡುವ ಬದಲು ಪೈಪ್ ಒಡೆದಿರುವುದೇ ಹೆಚ್ಚು ಒಟ್ಟಿನಲ್ಲಿ ಇಲ್ಲಿನ ಜನರಿಗೆ ಕುಡಿಯುವ ನೀರು ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕುಂಭಕರ್ಣ ನಿದ್ರೆಯಿಂದ ಎದ್ದು ಸಮಸ್ಯೆ ಬಗೆಹರಿಸುತ್ತಾರಾ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಈ ಸಂದರ್ಭದಲ್ಲಿ ಕೇದಾರಿ ಮರಗಾಳೆ, ಮಾತಾರಭಾ ಮರಗಾಳೆ, ಜ್ಞಾನು ಮರಗಾಳೆ, ಸುರೇಶ ಮರಗಾಳೆ, ಶ್ರೀಮಂತ ಮರಗಾಳೆ, ಸಕುಬಾಯಿ ಮರಗಾಳೆ, ರೂಪಾಲಿ ಮರಗಾಳೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!