ಬೆಳಗಾವಿ
Editor:kareppa s kamble
ಕೊನೆಗೂ ಕ್ಷೇತ್ರ ಬದಲಾವಣೆ ಉಹಾ ಪೋಹಗಳಿಗೆ ತೆರೆ ಎಳೆದ ಕುಡಚಿ ಶಾಸಕರಾದ ಪಿ ರಾಜೀವ
ಬೆಳಗಾವಿ: ಜಿಲ್ಲೆಯ ಕುಡಚಿ ಮತಕ್ಷೇತ್ರದ ಅಲಕನೂರಿನಲ್ಲಿ ಭಾರತೀಯ ಜನತಾ ಪಕ್ಷದ ಕುಡಚಿ ಮಂಡಳದ ಚುನಾವಣಾ ಪೂರ್ವ ಬೃಹತ್ ಸಿದ್ದತಾ ಸಭೆ ಜರುಗಿತು
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ್ ನೆರ್ಲಿ ಮಾತನಾಡಿ ವಿಜಯ ಸಂಕಲ್ಪ ಯಾತ್ರೆಯು ಕುಡಚಿ ಕ್ಷೇತ್ರಕ್ಕೆ ಮಾರ್ಚ್ 5 ರಂದು ಸಾಯಂಕಾಲ ಬರಲಿದೆ ಈ ಯಾತ್ರೆಗೇ ಕಾರ್ಯಕರ್ತರು ಅಭಿಮಾನಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು
ಇನ್ನು ಕುಡಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ ರಾಜೀವ್ ಮಾತನಾಡಿ
ನನಗಾಗಿ ಜನರು ಪರೋಕ್ಷವಾಗಿ ಉಪಕಾರ ಮಾಡಿದ್ದಾರೆ ಅವರ ಋಣ ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ನಾನುಹಾಗೂ ನನ್ನ ಕುಟುಂಬ ಕ್ಕೆ ಕೊಟ್ಟಂತಹ ಪ್ರೀತಿ ಮಮತೆ ಮಮಕಾರ ವಾತ್ಸಲ್ಯ ಯಾರಿಗೂ ಸಿಗಲಿಕ್ಕೆ ಸಾಧ್ಯವಿಲ್ಲ ಎಂದರು
ಇನ್ನು 2023ರರ ಚುನಾವಣೆಯಲ್ಲಿ ಕುಡಚಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವವರು ಎಲ್ಲರೂ ಒಳ್ಳೆವರೇ!ನಾನೊಬ್ಬನೇ ಮೇಧಾವಿ ಎಂದು ನಾನು ಹೇಳಲಿಕ್ಕೆ ಹೋಗಲ್ಲ
ಆದರೆ ನನ್ನ ವರ್ತನೆಯನ್ನು ನೀವು ಹತ್ತು ವರ್ಷಗಳಿಂದ ನೋಡೋದ್ದಿರಿ ಹಾಗಾಗಿ ಇನ್ನು ಮುಂದೆ ಬರುವಂತವರು ಹೇಗೆ ಇರುತ್ತಾರೋ ಏನೋ ಗೊತ್ತಿಲ್ಲ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ನಾನು ಮಾಡುವುದಿಲ್ಲ ಎಂದರು
ನಾನು ಇಲ್ಲಿಯವರೆಗೆ ಯಾವೋಬ್ಬ ಒಬ್ಬ ವ್ಯಕ್ತಿಯ ಮೇಲೆ ದ್ವೇಷವನ್ನ ಸಾಧಿಸಿಲ್ಲ ಎಲ್ಲರನ್ನು ಪ್ರೀತಿಸುತ್ತೇನೆ ಹಾಗಾಗಿ ನನ್ನ ಜನ ನನ್ನ ಬಲ ಸದಾ ನಿಮಗಾಗಿ ನಾನು!
ಕೇವಲ ರಸ್ತೆ ಬಸ್ ಸ್ಟ್ಯಾಂಡ್ ಮೂಲಭೂತ ಸೌಲಭ್ಯ ಒದಗಿಸಿದರೆ ಸಾಲದು ಪ್ರತಿಯೊಬ್ಬರ ಜೀವನದಲ್ಲಿ ಸಾಮಾಜಿಕ ಆರ್ಥಿಕ ಬದಲಾವಣೆ ಆಗ್ಬೇಕು ನಾನು ಕುಡಚಿ ಕ್ಷೇತ್ರದಲ್ಲಿ ಯಾವೊಬ್ಬ ಅಧಿಕಾರಿ ಹತ್ರ ಒಂದುರುಪಾಯಿ ದುಡ್ಡು ಮುಟ್ಟಿಲ್ಲ ಭ್ರಷ್ಟಾಚಾರ ಮುಕ್ತ ಮಾಡಲು ಶ್ರಮಿಸಿದ್ದೇನೆ
ರಾಯಬಾಗ ಮತ್ತು ಕುಡಚಿಯಲ್ಲಿ ಗುಂಡಾಗಿರಿ ಈ ಹಿಂದೆ ತಾಂಡವ ಆಡತಾ ಇತ್ತು ಅದನ್ನು ನಾನು ಬಂದ ಮೇಲೆ ತಡೆದಿದ್ದೇನೆ
ನೀವು ಕೈ ತುತ್ತು ತಿನಿಸಿದ ನಿಮ್ಮ ಮಗ ಸಹೋದರ ಗೆಳಯ ನಾನು!ನಿಮ್ಮ ಪ್ರೀತಿ ಮರೆಯಲು ಸಾಧ್ಯವೇ!ನನ್ನ ತಾಯಿಯ ಮೇಲೆ ಪ್ರಮಾಣ ಮಾಡಿಹೇಳುತ್ತೇನೆ ಸಾಯೋತನಕ ನಿಮ್ಮ ಸೇವೆಗಾಗಿ ಇರುತ್ತೇನೆ ಕುಡಚಿ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ ನೀವು ಬರುವಂತಹ 2023 ರರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವಾದ ಮಾಡಬೇಕೆಂದು ಕೇಳಿ ಕೊಂಡರು
ಈ ಸಂದರ್ಭದಲ್ಲಿ ಡಾ. ರಾಜೇಶ್ ನೆರ್ಲಿ. ವೈ ಎನ್ ಗೌಡ್ರು. ಬಸನಗೌಡ ಆಸಂಗಿ.ಇಸಾಕ್ ಪೀರಜಾದೆ. ಡಿಸಿ ಸದಲಗಿ.ಶಿವಗೊಂಡ ಧರ್ಮಟ್ಟಿ. ನೇಮ್ಮಣ್ಣ ನಾಗಾವಿ ಸದಾನಂದ ಹಳಿಂಗಳಿ ಅಬಯ್ ಮಾನವಿ ಶ್ರೀಮತಿ ಲತಾ ಹುದ್ದಾರ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಬಾಹುಸಾಬ ಕಾಂಬಳೆ ನಿರೂಪಿಸಿದರು