ಬೆಳಗಾವಿ
ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ
ಮುಗಳಖೋಡ: ಬರುವ ರವಿವಾರ ದಿನಾಂಕ 5 ರಂದು ‘ಶ್ರೀ ಸಿದ್ಧಶ್ರೀ ಸೌಹಾರ್ದ ಸಹಕಾರಿ ನಿಯಮಿತ ಕಲಬುರಗಿ ಮುಗಳಖೋಡ ಶಾಖೆಯ ಕಾರ್ಯಾರಂಭ ಸಮಾರಂಭವು ಪಟ್ಟಣದ ಶ್ರೀಮಠದ ಆವರಣದಲ್ಲಿ ನೆರವೇರಲಿದೆ.
ಮುಗಳಖೋಡ-ಜಿಡಗಾ ಮಠಗಳ ಪೀಠಾಧಿಪತಿಗಳಾದ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ಸಹಕಾರಿ ಲಾಂಛನ ಬಿಡುಗಡೆ, ಕ್ಯಾಲೆಂಡರ್ ಬಿಡುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಸಿ. ಎ. ನಾಡಗೌಡರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಶ್ರೀಮತಿ ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ, ಅಣ್ಣಾಸಾಹೇಬ್ ಜೊಲ್ಲೆ, ಪಿ ರಾಜೀವ್, ದುರ್ಯೋಧನ ಐಹೊಳೆ, ಬಂಡೆಪ್ಪ ಕಾಶಂಪುರ, ಮಹಾದೇವಪ್ಪ ಯಾದವಾಡ, ಸಿದ್ದು ಸವದಿ, ಆನಂದ ನ್ಯಾಮಗೌಡ, ರಮೇಶ್ ಕತ್ತಿ, ಅಜಯ್ ಕುಮಾರ ಸರನಾಯಕ ಹಾಗೂ ಅತಿಥಿಗಳಾಗಿ ಜಗದೀಶ್ ಕವಟಿಗಿಮಠ, ಶ್ರೀಮತಿ ಶೈಲಜ ತಪಲಿ, ಚರಣಗೌಡ ಪಾಟೀಲ್, ಸಂಗಮೇಶ ನಿರಾಣಿ, ಹಾಗೂ ಹಾರೂಗೇರಿ ಎಸ್ಬಿಐ ಮತ್ತು ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕರು ಆಗಮಿಸಲಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಬುರ್ಗಿ ಸಂಸ್ಥೆಯ ಅಧ್ಯಕ್ಷ ಸಿ.ಎ. ನಾಡಗೌಡರ, ಬಸವರಾಜ ಜೋಪಾಟೆ, ಶಾಖಾ ವ್ಯವಸ್ಥಾಪಕ ಕಲ್ಲುರಾಜ್ ನಿಡೋಣಿ, ಸೋಮು ಹೊರಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಯವರು ಉಪಸ್ಥಿತರಿದ್ದರು.





