ಬೆಳಗಾವಿ
ಕಾಗವಾಡ:ಪುರುಷರಿಗಿಂತ ಮಹಿಳೆಯರು ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಮುಂಚೂಣಿಯಲ್ಲಿದ್ದಾರೆ ಆ ಕಾರಣದಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರು ಪುರುಷರ ಸಂಘಗಳನ್ನು ಸ್ಥಾಪಿಸದೇ ಗ್ರಾಮಾಭಿವೃದ್ದಿ ಮಹಿಳಾ ಸಂಘಗಳನ್ನು ಸ್ಥಾಪಿಸಿ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಜಿಲ್ಲಾ ನಿರ್ದೆಶಕಿಯಾದ ನಾಗರತ್ನ ಹೆಗಡೆ ಹೇಳಿದರು.
ಅವರು ಶನಿವಾರ ದಿ.೪ ರಂದು ಉಗಾರ ಖುರ್ದ ಗ್ರಾಮದ ವಿಹಾರ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಕಾಗವಾಡ ತಾಲ್ಲೂಕಾ ಘಟಕ ವತಿಯಿಂದ ಆಯೋಜಿಸಲಾಗಿದ್ದ ತಾಲ್ಲೂಕಾ ಮಟ್ಟದ ಮಹಿಳಾ ವಿಚಾರಗೋಷ಼್ಠಿ,ಮಹಿಳಾ ಸಾಧಕರ ಸನ್ಮಾನವನ್ನು ಉದ್ಘಾಟಿಸಿ ಮಾತನಾಡುತಗತಿದ್ದರು.
ಅವರು ಮುಂದೆ ಮಾತನಾಡುತ್ತಾ,ಡಾ.ವಿರೇಂದ್ರ ಹೆಗಡೆ ಮತ್ತು ಡಾ.ಹೇಮಾವತಿ ಹೆಗಡೆ ಅವರ ಮಾರ್ಗದರ್ಶನದಂತೆ ಮಹಿಳೆಯರ ಸ್ಚಾವಲಂಬಿ ಜೀವನಕ್ಕಾಗಿ ಸಂಘಗಳ ಮೂಲಕ ಮಹಿಳೆಯರಿಗೆ ಕೋಟ್ಯಾಂತರ ರೂಪಾಯಿ ಸಾಲ ವಿತರಿಸಲಾಗಿದೆ.ಆ ಸಂಘಗಳು ಸರಿಯಾದ ಸಮಯದಲ್ಲಿ ಸಾಲ ಮರು ಪಾವತಿ ಮಾಡಿ ತಮ್ಮ ಅಭಿವೃದ್ಧಿ ಜೊತೆಗೆ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ದೇಶದಲ್ಲಿ ಅನೇಕ ಪ್ರಖ್ಯಾತ ಉದ್ಯಮಿಗಳು ಕೋಟ್ಯಾಂತರ ರೂಪಾಯಿ ಸಾಲ ಪಡೆದುಕೊಂಡು ಆ ಸಾಲವನ್ನು ಮುಳುಗಿಸಿ ವಿದೇಶಕ್ಕೆ ತೆರಳಿ ದ್ರೋಹ ಎಸಗಿದ ಉದಾಹರಣೆಗಳು ಸಾಕಷ್ಟಿವೆ.ಆದರೆ ನಮ್ಮ ಮಹಿಳಾ ಸಂಘದ ಸದಸ್ಯರು ಒಂದು ರೂಪಾಯಿ ಕೂಡ ಸಾಲವನ್ನು ಮುಳುಗಿಸಿದ ಉದಾಹರಣೆಗಳಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಗಾರ ಶುಗರ್ ಮಹಿಳಾ ಮಂಡಳದ ಶ್ರೀಮತಿ ಸ್ಮೀತಾ ಶಿರಗಾಂವಕರ ಮಾತನಾಡಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಜು ಮರಾಠೆ,ಉಗಾರ ಖುರ್ದದ ವೈಧ್ಯೆ ಡಿ.ಎಚ್.ಮುಲ್ಲಾ,ಉಗಾರ ಕೆಚ್ ನ ಸಬ್ ಇನ್ಸ್ಪೆಕ್ಟರ್ ರೇಖಾ,ನ್ಯಾಯವಾದಿ ಅರ್ಚನಾ ಪಾಟೀಲ್,ಮೊದಲಾದವರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳಾಮನಿಗಳನ್ನ ಉದ್ದೇಶಿಸಿ ಅನೇಕ ವಿಷುಲಯಗಳ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಂಡು ವಿಶೇಷ ಸಾಧನೆ ಮಾಡಿದ ಹತ್ತು ಮಹಿಳೆಯರನ್ನ ಸತ್ಕರಿಸಿ ಸನ್ಮಾನಿಸಲಾಯಿತು.
ಈ ವೇಳೆ ಮೇಲ್ವಿಚಾರಕರಾದ ರಿಹಾನ ಶೇಖ,ಜ್ಞಾನ ವಿಕಾಸ ಅಧಿಕಾರಿ ಶೈನಾಜ,ಕೃಷಿ ಮೇಲ್ವಿಚಾರಕ ಶಿವಪ್ಪ ಎಸ್ ಎಸ್.ಪ್ರತಾಪ ಕಾಂಬ್ಳೆ,ಜಯೇಂದ್ರ ಸನದಿ,ಈಶ್ವರ ಕಾಂಬ್ಳೆ ,ರಾವಸಾಬ ಕಾಕಡೆ,ಸೇರಿದಂತೆ ತಾಲೂಕಿನ ಸೇವಾ ಪ್ರತಿನಿಧಿಗಳು,ಸಂಘದ ಸದಸ್ಯರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು.
ಶಿಕ್ಷಕಿ ಜಾಸ್ಮಿನ್ ಕಾರ್ಯಕ್ರಮ ಸ್ವಾಗತಿಸಿ,ವಂದಿಸಿ,ನಿರೂಪಿಸಿದರು.