ಬೆಳಗಾವಿ, ಅಥಣಿ
ಹೌದು ಇದು ನಡೆದಿರುವುದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶೇಗುಣಶಿ ಗ್ರಾಮದಲ್ಲಿ
ಅಕ್ರಮ ಸಾರಾಯಿ ಮಾರಾಟದಿಂದ ಬೀದಿಗೆ ಬೀಳುತ್ತಿರುವುದರಿಂದ ಗ್ರಾಮದ ಮಹಿಳೆಯರೆಲ್ಲರೂ ಪಂಚಾಯತ್ಗೆ ಮುತ್ತಿಗೆ ಹಾಕಿ, ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡುವುದರ ಜೊತೆಗೆ ಅಬಕಾರಿ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಲಂಚ ಪಡೆಯುವುದಾಗಿ ಆರೋಪ ಮಾಡಿ 5ನೇ ಬಾರಿ ಮನವಿ ಪತ್ರ ಸಲ್ಲಿಸಿದರು,
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳಾದ DYSE ಹಣಮಂತ ವಜ್ರಮಟ್ಟಿ, ಸಿಪಿಐ ಸಂಜಯ ಅಸ್ಕಿ ಪಿಎಸ್ಐ ಕಿರಣ್ ಜೂಲ್ಪಿ, ಪಿಎಸ್ಐ ದತ್ತಗೂರು ಅಥಣಿ, ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕೂಡಲೇ ಬಂದು ಮಹಿಳೆಯರ ಸಮಸ್ಯೆಗೆ ಮತ್ತು ಅಕ್ರಮವಾಗಿ ಸಾರಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕ್ಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಚೀನ ಪಾಟೀಲ, ಪಂಚಾಯತ್ ಅಧ್ಯಕ್ಷರು ಲಕ್ಷ್ಮಣ್ ಆಲೂರು, ಸದಸ್ಯರು ಗ್ರಾಮದ ಯುವಕರು ಮುಂಚುನೇಯಲ್ಲಿದ್ದರು.