ಬೆಳಗಾವಿ. ರಾಯಬಾಗ
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ವೀರಶೈವ ಧರ್ಮ ಸಂಸ್ಥಾಪಕರು ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ, ಕಾಶಿ ಎಂಬ 5 ಪಂಚ ಪೀಠಗಳನ್ನು ಸ್ಥಾಪಿಸಿ ಒಡೆಯನಾಗಿ ಮೆರೆದ ಹಾಗೂ ಜಂಗಮ ಸಮಾಜಕ್ಕೆ ಜೋಳಿಗೆಯನ್ನು ಹಸ್ತಾಂತರಿಸಿದ ಮಹಾಪ್ರಭು ಜಗದ್ಗುರು ಶ್ರೀ ರೇಣುಕಾಚಾರ್ಯರು ಎಂದು ಮುಗಳಖೋಡದ ಈಶ್ವರಲಿಂಗೇಶ್ವರ ಹಿರೇಮಠದ ಅರ್ಚಕರಾದ ಮಲ್ಲಿಕಾರ್ಜುನ ಶಾಸ್ತ್ರಿಜಿ ಹೇಳಿದರು.
ಅವರು ಮುಗಳಖೋಡ ಹಿರೇಮಠದ ಶ್ರೀ ಈಶ್ವರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದವರು ಈ ರೇಣುಕಾಚಾರ್ಯರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಮುಪ್ಪಯ್ಯಾ ಹಿರೇಮಠ, ಶ್ರೀಶೈಲ ಹಿರೇಮಠ, ಮುರುಗಯ್ಯಾ ಹಿರೇಮಠ, ಶ್ರೀಮತಿ ಸುಮಂಗಲಾ ಹಿರೇಮಠ, ರತ್ನವ್ವಾ ಹಿರೇಮಠ, ಶೋಭಾ ಹಿರೇಮಠ ಶಿವಲೀಲಾ ಹಿರೇಮಠ, ಶುಭಾಂಗಿನಿ ಹಿರೇಮಠ, ಬಾಳವ್ವಾ ಹಿರೇಮಠ, ಸಂಗಮೇಶ ಹಿರೇಮಠ, ಸಿದ್ದಲಿಂಗಯ್ಯಾ ಹಿರೇಮಠ ಸೇರಿದಂತೆ ಮುಗಳಖೋಡ ಪಟ್ಟಣದ ಸಮಸ್ತ ಜಂಗಮ ಬಂಧುಗಳು ಉಪಸ್ಥಿತರಿದ್ದರು.