ಬೆಳಗಾವಿ
ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ.
ರಾಯಬಾಗ: ತಾಲೂಕಿನ ಕೋಳಿಗುಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸಾಯಂಕಾಲ 4 ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ ಎಸ್ ಬಿ ಕಲ್ಚಿಮಡ್ ಆಗಮಿಸಿ ರಾಜಕೀಯ ಪಕ್ಷಗಳು,ಪ್ರಜಾಪ್ರಭುತ್ವದ ಬೆನ್ನೆಲುಬು ಆಗಿವೆ, ಮತದಾನ ಮಾಡುವಾಗ ವ್ಯಕ್ತಿಯ ವ್ಯಕ್ತಿತ್ವ , ಗುಣ, ನಡವಳಿಕೆ ನೋಡಿ ಮತದಾನ ಮಾಡ್ಬೇಕು,ಮತದಾನ ಅಂತಕ್ಕದ್ದು ಮೌಲ್ಯಯುತವಾದ ದ್ದು, ಮತದ ಮೌಲ್ಯವನ್ನು ಅರಿತು ಮತದಾನ ಮಾಡಬೇಕೆಂದು ಸ್ವಯಂ ಸೇವಕ/ಸೇವಕಿಯರಿಗೆ ಕಿವಿ ಮಾತು ಹೇಳಿದರು.. ಇನ್ನೋರ್ವ ಅತಿಗಳಾಗಿ ಸಂಕರಟ್ಟಿಯ ಪದವಿ ಪೂರ್ವ ಮಾಹಾವಿದ್ಯಲಯದ ಪ್ರೊ ಬಿ ಎಸ್ ಹರವಿ ಅವರು ಕೂಡ ಮತದಾನದ ಮಹತ್ವ ,ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿ ದೈಹಿಕ ನಿರ್ದೇಶಕರಾದ ಹೇಚ್ ಎಸ್ ಜೋಗಣ್ಣವರು ಮತದಾನದ ಮಹತ್ವ, ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ಕೊಟ್ಟವರು ವಿಶ್ವ ರತ್ನ,ಸಂವಿಧಾನ ಶಿಲ್ಪಿ,ಮಹಾಮಾನವತಾವಾದಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ನೇನೆಯಲೇಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ವೇದಿಕೆಯ ಮೇಲೆ ಇಂಗ್ಲೀಷ್ ಉಪನ್ಯಾಸಕರಾದ ಆರ ಕೆ ಕಟಾವಿ, ಪ್ರೊ ಆರ ಎಂ ಮಾಲಗಾರ, ರೈತ ಸಂಘದ ಮುಖಂಡ ಏ ಎಸ್ ರಡ್ರಟ್ಟಿ, ಶಿಬಿರದ ಅಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ, ಯುವ ಬಂಡಾಯ ಸಾಹಿತಿ, ಡಾ. ವಿಲಾಸ್ ಕಾಂಬಳೆ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಕ್ರಾಂತಿ ಕಾರಿ ಹಾಡುಗಾರ ಡಾ. ವಿಲಾಸ ಕಾಂಬಳೆ ಎನ್ ಎಸ್ ಎಸ್ ಗೀತೆ ಹಾಡಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲಿನ ಸಬಿಕರನ್ನು ಪರಿಚಯಿಸಿ , ಸ್ವಾಗತಿಸಿ,ಕಾರ್ಯಕ್ರಮವನ್ನು ನಿರ್ವಹಿಸಿ , ಭಾಗ್ಯಶ್ರೀ ಪಾಟೀಲ್ ವಂದಿಸಿದರು.
ವರದಿ : ಸುನೀಲ್ ಕಬ್ಬೂರ