ಬೆಳಗಾವಿ
ಅಥಣಿ ಮತಕ್ಷೇತ್ರದಲ್ಲಿ ಬಾಂದಾರಗಳ ನಿರ್ಮಾಣಕ್ಕೆ ಹೆಚ್ಚಿನ ಇತ್ತು ಕೊಟ್ಟು 16ಕ್ಕೂ ಅಧಿಕ ಬಾಂದಾರಗಳನ್ನು ಮಂಜೂರು ಮಾಡಲಾಗಿದ್ದು ಸಧ್ಯ ಕಾಮಗಾರಿಗಳು ಪ್ರಾರಂಭವಾಗಿವೆ. ಈಗಾಗಲೇ 28.98 ಕೋಟಿ ರೂ ಅನುದಾನವನ್ನು ಬಾಂದರುಗಳ ರಿಪೇರಿ ಕಾರ್ಯಗಳಿಗೆ ತರಲಾಗಿದ್ದು ಶೀಘ್ರ ಭೂಮಿಪೂಜೆ ನೆರೆವೇರಿಸಲಿದ್ದೇವೆ. ಮತಕ್ಷೇತ್ರದ ಜನತೆ ಆಶೀರ್ವಾದ ಮಾಡಿ ನನ್ನನ್ನು ಶಾಸಕನ ಮಾಡಿದ್ದು ಅವರ ಸೇವೆ ಮಾಡುತ್ತಿದ್ದೇನೆ ಎಂದು ಅಥಣಿ ಶಾಸಕ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ಅಥಣಿ ತಾಲೂಕಿನ ದೇಸಾರಟ್ಟಿ ಗ್ರಾಮದಲ್ಲಿ 1 ಕೋಟಿ 60 ಲಕ್ಷ ರೂ ವೆಚ್ಚದ ದೇಸಾರಟ್ಟಿ ಕೋಕಟನೂರ ರಸ್ತೆ ಕಾಮಗಾರಿ. ಕೋಕಟನೂರ ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದ ಎಸ್ ಸಿ ಕಾಲೊನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ. 2 ಕೋಟಿ 11 ಲಕ್ಷ ರೂ ವೆಚ್ಚದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಟ್ಟಡ ಕಾಮಗಾರಿ. 5 ಲಕ್ಷ ರೂ ವೆಚ್ಚದ ಶ್ರೀ ಕರಿಸಿದ್ದೇಶ್ವರ ದೇವಾಸ್ಥಾನದ ಸಮುದಾಯ ಭವನ ಕಟ್ಟಡ ಕಾಮಗಾರಿ. 2 ಕೋಟಿ ರೂ ವೆಚ್ಚದ ಹಿರೇ ಹಳ್ಳಕ್ಕೆ ಬ್ರಿಡ್ಜ್ ಕಮ್ ಬಾಂದಾರ ನಿರ್ಮಾಣ ಕಾಮಗಾರಿ. 5 ಲಕ್ಷ ರೂ ವೆಚ್ಚದ ಶ್ರೀ ಅಪ್ಪಯ್ಯ ಸ್ವಾಮಿ ದೇವಸ್ಥಾನದ ಸಮುದಾಯ ಭವನ ಕಟ್ಟಡ ಕಾಮಗಾರಿ. 2 ಕೋಟಿ 65 ಲಕ್ಷ ರೂ ವೆಚ್ಚದ ಕೋಕಟನೂರ ಸುಟ್ಟಟ್ಟಿ ರಸ್ತೆ ಕಾಮಗಾರಿ. ಯಲ್ಲಮ್ಮವಾಡಿ ಗ್ರಾಮದಲ್ಲಿ 14 ಲಕ್ಷ ರೂ 1 ಪ್ರಾಥಮಿಕ ಶಾಲಾ ಕೊಠಡಿ ಕಾಮಗಾರಿ. 3 ಕೋಟಿ ರೂ ವೆಚ್ಚದ ಕೋಕಟನೂರ- ತುಂಗಳ ರಸ್ತೆ ಕಾಮಗಾರಿ. ಸುಟ್ಟಟ್ಟಿ ಗ್ರಾಮದಲ್ಲಿ 3 ಕೋಟಿ 50 ಲಕ್ಷ ರೂ ವೆಚ್ಚದ ಯಲ್ಲಮ್ಮವಾಡಿ – ಝು0ಜರವಾಡ ರಸ್ತೆ ಕಾಮಗಾರಿ. ಬಾದಾಗಿ ಗ್ರಾಮದಲ್ಲಿ 95 ಲಕ್ಷ ರೂ ವೆಚ್ಚದಲ್ಲಿ ಹಿರೇ ಹಳ್ಳಕ್ಕೆ ಸೇತುವೆ ಸಹಿತ ಬಾಂದಾರ ಕಾಮಗಾರಿ. ಕಕಮರಿ ಗ್ರಾಮದಲ್ಲಿ 1 ಕೋಟಿ 38 ಲಕ್ಷ ರೂ ವೆಚ್ಚದ ಡೋನಿಗೆ ಅಡ್ಡಲಾಗಿ ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾಮಗಾರಿ ಸೇರಿದಂತೆ ಒಟ್ಟಾರೆ 16.79 ಕೋಟಿ ರೂ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಾನಂದ ಮಾಲಗಾಂವಿ, ಆರ್ ಎಲ್ ಬಿರಾದಾರ, ಬಾಹುಸಾಹೇಬ ಜಾದವ, ರವಿ ದೊಡಮನಿ, ಎ ಎನ್ ಪಾಟೀಲ್, ತಿಪ್ಪಣ್ಣ ಭಜಂತ್ರಿ, ಶಿವರುದ್ರ ಘುಲಪ್ಪನ್ನವರ ಸೋಮನಾಥ ಗೋರ್ಪಡೆ ಇನ್ನು ಮುಂತಾದವರು ಉಪಸ್ಥಿತರಿದ್ದರು