ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ :ಹಾರೂಗೇರಿಯ ಪುರಸಭೆ ಸಭಾಂಗಣದಲ್ಲಿ ಜರುಗಿದ ಹೋಳಿ ಹಬ್ಬದ ನಿಮಿತ್ಯ ಶಾಂತಿ ಪಾಲನಾ ಸಭೆ ಜರುಗಿತು
ಸಭೆಯಲ್ಲಿ ಮಾತನಾಡಿದ ಹಾರೂಗೇರಿ ಸಿ ಪಿ ಐ ರವಿಚಂದ್ರ ಬಡಪಕೀರಪ್ಪನವರ ಅವರು, ನೈಸರ್ಗಿಕ ಬಣ್ಣ ಹಾಕಿ ಆಟವಾಡಿ ಹಾಗೂ ಎಲ್ಲರೂ ಸೇರಿ, ಎಲ್ಲರೂ ಒಂದೆಂದು ಭಾವಿಸಿ ಬಣ್ಣ ಆಡಬೇಕು. ಜೊತೆಗೆ ಬಣ್ಣ ಮತ್ತು ಮಧ್ಯಪಾನ ಎರಡರಿಂದಲೂ ಆಡಬೇಡಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಅಸಭ್ಯ ವಾತಾವರಣ ನಿರ್ಮಾಣ ಮಾಡದೇ ಆಟವಾಡಿ ಶಾಂತಿ-ಸಮತೆಯ ಹಬ್ಬವಾಗಿ ಆಚರಿಸಿ ಎಂದು ಮಾತನಾಡಿದರು. ಬುಧವಾರ ದಿವಸ ಸಂತೆ ಇರುವುದರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಣ್ಣವನ್ನ ಆಡಿ ಮುಂದಿನ ಸಮಯವನ್ನು ಸಂತೆ ಕೂಡಲು ಅನುಕೂಲ ಮಾಡಿಕೊಳ್ಳುವಂತೆ ಮುಖ್ಯಾಧಿಕಾರಿಗಳ ಮೂಲಕ ಆದೇಶ ಹೊರಡಿಸಲು ಎಲ್ಲರೂ ಅಭಿಪ್ರಾಯ ಹಂಚಿಕೊಂಡರು.*
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು, ಪೊಲೀಸ್ ಅಧಿಕಾರಿಗಳು, ಪುರಸಭೆ ಅಧಿಕಾರಿ ವರ್ಗದವರು ಹಾಗೂ ಪಟ್ಟಣದ ಹಲವಾರು ಸಮುದಾಯಗಳ ನಾಗರಿಕರು ಉಪಸ್ಥಿತರಿದ್ದರು.
ವರದಿ :ಸುನಿಲ್ ಕಬ್ಬುರ್