ಬೆಳಗಾವಿ
ಸ್ವಚ್ಛ ಭಾರತ ಅಭಿಯಾನ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ 4 ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಮುಖ್ಯ ಮುಖ್ಯ ಅಥಿತಿಗಳಾಗಿ ಆಗಮಿಸಿ ಎಸ್ ಏಚ ಜೋಗಣ್ಣವರ್ ಸ್ವಚ್ಛ ಭಾರತ ಅಭಿಯಾನ ಕುರಿತು ಮಾತನಾಡಿದರು.
ಮೊದಲು ನಮ್ಮ ಮನ ಮತ್ತು ಮನಸು ಸ್ವಚ್ಛ್, ನಮ್ಮ ಸುತ್ತಮುತ್ತಲಿನ ಪರಿಸರ, ಸ್ವಚ್ಚವಾಗಿ ಇಟ್ಟು ಕೊಂಡರೆ, ಅದುವೇ ಸ್ವಚ್ಛ ಭಾರತದ ಅಭಿಯಾನ. ಇದು ಮಹಾತ್ಮ ಗಾಂಧೀಜಿ ಅವರ ಕನಸುಸಗಿತ್ತು,ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರಾದ ಎ ಬಿ ಧರ್ಮಟ್ಟಿ ವಹಿಸಿ ಸ್ವಚ್ಛತೆ ಅನ್ನೋದು ಜೀವನದ ಅವಿಭಾಜ್ಯ ಅಂಗವಾಗಿದೆ, ಅದರ ಜೊತೆ ಆರೋಗ್ಯ ಕೂಡ ಅಷ್ಟೆ ಮುಖ್ಯ,ಜೀವನದಲ್ಲಿ ಶಿಸ್ತು , ಸಮಯ ಪಾಲನೆ,ಮಾನವೀಯತೆ,ಕ್ರಮಬದ್ಧವಾದ ಅಧ್ಯಯನ ಇದ್ರೆ ,ಜೀವದಲ್ಲಿ ಅತ್ತುನ್ನ ತವಾದ ಸಾಧನೆ ಮಾಡಬಹುದು ಎಂದರು. ವೇದಿಕೆಯ ಮೇಲೆ ಪ್ರೊ ಪಿ ವಾಯ ಮುಂಜೆ, ಎ ಸಿ ಬಿರಾದರ್, ಶಿಬಿರದ ಅಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ, ಬಂಡಾಯ ಯುವ ಸಾಹಿತಿ ಡಾ. ವಿಲಾಸ್ ಕಾಂಬಳೆ ಉಪಸ್ಥಿತರಿದ್ದರು.ಪ್ರಾರ್ಥನಾ ಗೀತೆಯನ್ನು ಸ್ನೇಹಾ ಕಾಂಬಳೆ ಹಾಡಿದರು.ಏನ್ ಎಸ್ ಎಸ್ ಗೀತೆಯನ್ನು ಸೌಂದರ್ಯ ಮೇಳವಂಕಿ ಮತ್ತು ಸಂಗಡಿಗರು ಹಾಡಿದರು.ಕೊನೆಯದಾಗಿ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಫೈಯಾಜ್ ನದಾಫ್ ನಿರ್ವಹಿಸಿದರು.