ಬೆಳಗಾವಿ
ಅಲಖನೂರ: ರಾಯಭಾಗ ತಾಲೂಕಿನ ಅಲಖನೂರ ಗ್ರಾಮದ ವಾರ್ಡ್ ನಂಬರ್ 5 ಮತ್ತು 6ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೂಜಾರಿ ಇವರ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು
ಸುಮಾರು 120ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು ಇವಳೆ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಬಂದ ಕಾರ್ಯಕರ್ತರನ್ನು ಕುಡಚಿ ಮತಕ್ಷೇತ್ರ ಶಾಸಕರಾದ ಪಿ ರಾಜು ಅವರು ಆತ್ಮೀಯವಾಗಿ ಬರಮಾಡಿಕೊಂಡು ಬಿಜೆಪಿ ಪಕ್ಷದ ಶಾಲನ್ನು ಹಾಕಿ ಧ್ವಜವನ್ನು ಕೊಟ್ಟು ಪಕ್ಷಕ್ಕೆ ಬರಮಾಡಿಕೊಂಡು ಪ್ರೀತಿಯಿಂದ ಸ್ವಾಗತಿಸಿದರು.
ಈ ವೇಳೆ ಸ್ಥಳೀಯ ಮುಖಂಡರಾದ ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ ಗಡ್ಡಿ ಸದಾಶಿವ ಪೂಜಾರಿ ಶಂಕರ್ ಪೂಜಾರಿ ರಾಮಪ್ಪ ಪೂಜಾರಿ ಕುಮಾರ್ ಯಲಹಟ್ಟಿ ಹನುಮಂತ್ ರಮೇಶ್ ಪಾಟೀಲ್ ಸುರೇಶ್ ನಾವಿ ಸುರೇಶ್ ಪೂಜಾರಿ ಅಜ್ಜಪ್ಪ ಪಾಟೀಲ್ ಪರಶುರಾಮ್ ಬಡಿಗೇರ್ ಗೂಳಪ್ಪ ಚಲಿಕೆರಿ ಇನ್ನು ಪಕ್ಷದ ಹಲವಾರು ಮುಖಂಡರು ಹಾಜರಿದ್ದರು.
ವರದಿ : ಸಂದೀಪ್ ಗಡ್ಡಿ