ಹಾರೂಗೇರಿಯ ಎಸ್ ಬಿ ದರೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಬಣ್ಣದೋಕುಳಿ

Share the Post Now

ಬೆಳಗಾವಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಯಲ್ಲಿ ಚಿಣ್ಣರು ಭೂಲೋಕದಲ್ಲಿ ಅರಳಿದ ಸುರಲೋಕದ ಹೂವುಗಳು . ಅವುಗಳ ನಗು ಮೊಗದ ಪ್ರತಿ ಕ್ಷಣವೂ ಆನಂದಮಯ ಹೀಗಾಗಿ ಇಂದು ಸ್ಥಳೀಯ ಎಸ್ ಬಿ ದರೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಣ್ಣ ಆಡುವುದರೊಂದಿಗೆ ಪರಸ್ಪರ ಖುಷಿಯನ್ನು ಹಂಚಿಕೊಂಡ ಮಕ್ಕಳ ಆ ನಗು ಎಲ್ಲರಲ್ಲಿ ಸಂತಸದ ವಾತಾವರಣ ನಿರ್ಮಿಸಿತು. ಹೋಳಿ ಹಬ್ಬದ ನಿಮಿತ್ಯ ಶಾಲೆಯಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗದವರು ಇಂದೇ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು.ಅಲ್ಲದೆ ಭಾರತೀಯ ಸನಾತನ ನಂಬಿಕೆಯ ಪರಸ್ಪರ ಸ್ನೇಹ ಪರತೆಯನ್ನು ಸಾರುವ ಮೂಲಕ ಎಲ್ಲರೂ ಪರಸ್ಪರ ಬಣ್ಣ ಎರಚಿ ಓಕುಳಿಯಾಡಿದರು.

ವರದಿ : ಸುನೀಲ್ ಕಬ್ಬೂರ

Leave a Comment

Your email address will not be published. Required fields are marked *

error: Content is protected !!