ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಮಾಡುವ ಭಕ್ತಾದಿಗಳು ರಾಯಭಾಗ ತಾಲೂಕಿನ ಬಡಬ್ಯಾಕುಡದಿಂದ ಶ್ರೀಶೈಲವರೆಗೆ ಪಾದಯಾತ್ರೆ ಕೈಗೊಂಡ ಭಕ್ತಾದಿಗಳು ಇದೀಗ ಬೆಳಗಲಿ ಗ್ರಾಮವನ್ನು ತಲುಪಿದ್ದಾರೆ. ಎಲ್ಲರೂ ಕ್ಷೇಮವಾಗಿ ಹೊರಡುತ್ತಿದ್ದು, ಮಲ್ಲಿಕಾರ್ಜುನನ ಭಕ್ತಾದಿಗಳು ಅವರಿಗೆ ಪ್ರಸಾದ, ತಂಗಲು ವ್ಯವಸ್ಥೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ರಮೇಶ್ ಕ ಶೆಟ್ಟಿ, ರಮೇಶ್ ಟಕ್ಕನ್ನವರ್, ಸುರೇಶ್ ಜಾಲಿಹಾಳ್, ರಾಮ್ ಕಾಂಬಳೆ, ವೇದಮೂರ್ತಿ ಡಾಕ್ಟರ್ ಚರಂತಯ್ಯ ಶಾಸ್ತ್ರಿಗಳು, ಸುರೇಶ್ ಕಶೆಟ್ಟಿ, ಮಹಿಳೆಯರಲ್ಲಿ ಇಂದ್ರವ್ವ ರಾಜು ಗಸ್ತಿ,ಕಸ್ತೂರಿ ಕಟ್ಟಿ, ಚೆನ್ನವ್ವ,ಶ್ರೀದೇವಿ, ಬಡಬ್ಯಾಕೂಡದಿಂದ ಶ್ರೀಶೈಲದವರಿಗೆ ಕಂಬಿ ಹೊರುವವರು ಶಾಂತು ಈಟಿ ಹಾಗೂ ಸಕಲ ಸದ್ಭಕ್ತರು ಬಡಬ್ಯಾಕೂಡ ಗ್ರಾಮಸ್ಥರು ಉಪಸ್ಥಿತರಿದ್ದರು ಮತ್ತು ಅನಿಲ್ ರಾಜು ಗಸ್ತಿ, ಹನುಮಂತ ವಾಳದ,ರಮೇಶ್ ಜಾಲಿಹಾಳ್, ಸಂತೋಷ ಗಸ್ತಿ,ಹಾಲಪ್ಪ ಜಾಲಿಹಾಳ್ ಮುಂತಾದವರು ಶುಭ ಕೊರಿದ್ದಾರೆ .ಇವರಿಗೆ ಟಿ ಶರ್ಟ್ ಸೇವೆಯನ್ನು ಪುರಸಭೆ ಸದಸ್ಯ ಆನಂದ ರಾಮಚಂದ್ರ ಪಾಟೀಲ ನೀಡಿದ್ದಾರೆ
ವರದಿ : ಸುನೀಲ್ ಕಬ್ಬೂರ