ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯ ಹಾರೂಗೇರಿ ವಿದ್ಯಾನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ದುಂಡವ್ವ ಪಾಟೀಲ ಅವರು ವಹಿಸಿಕೊಂಡಿದ್ದರು.ನೇತ್ರಾ ನಾಯಿಕ್ ಅವರು ಮಾತನಾಡಿ ಮಹಿಳೆ ಇವತ್ತು ಎಲ್ಲಾ ರಂಗಗಳಲ್ಲಿ ಇವತ್ತು ಪುರುಷನಷ್ಟೇ ಸಮಾನವಾಗಿ ಕೆಲಸ ಮಾಡುತ್ತಿದ್ದಾಳೆ ಅವಳಿಗೆ ತನ್ನದೇ ಆದ ವರ್ಚಸ್ಸನ್ನು ಈ ಸಮಾಜ ತಂದು ಕೊಡಬೇಕು. ಮಹಿಳೆ ಜಾಗತಿಕವಾಗಿ ಅಭಿವೃದ್ಧಿಯಾದರೆ ಜಗತ್ತು ಮುನ್ನಡೆಯನ್ನು ಸಾಧಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾದೇವಿ ವಡಗಾನ್ವಿ, ವಿಜಯಲಕ್ಷ್ಮಿ ಯಾದಗುಡೆ,. ಸುನಿತಾ ಹಿಪ್ಪರಗಿ, ಸವಿತಾ ಶೇಡಬಾಳ್, ಲಕ್ಷ್ಮಿ ಮಗದುಮ ಮುಂತಾದವರು ಭಾಗವಹಿಸಿದ್ದರು.ನಿರೂಪಣೆಯನ್ನು ರೂಪಾ ಪಾಟೀಲ್ ಅವರು ಮಾಡಿದರು. ಸುವರ್ಣ ಮೊಖಾಶಿ ವಂದಿಸಿದರು.
ವರದಿ : ಸುನೀಲ್ ಕಬ್ಬೂರ