ಬೆಳಗಾವಿ
ವರದಿ: ರಾಜಶೇಖರ ಶೇಗುಣಸಿ ಮೂಗಳಖೋಡ.
ಮುಗಳಖೋಡ: ಮಾರ್ಚ್16 ಕ್ಕೆ ಹಾರೂಗೇರಿಯಲ್ಲಿ ನಡೆಯಬೆಕಿರುವ ಕಾಂಗ್ರೆಸ್ ಪಕ್ಷದ ಪ್ರಜಾದ್ವನಿ ಯಾತ್ರೆಯು ಮಾ.18 ಕ್ಕೆ ಕಾರಣಾಂತರಗಳಿಂದ ಮುಂದಕ್ಕೆ ಹಾಕಲಾಗಿದೆ. ಸುಮಾರು 40 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯೊಂದಿಗೆ ಯಾತ್ರೆ ನಡೆಯಲಿದೆ ಎಂದು ಮಹೇಂದ್ರ ತಮ್ಮಣ್ಣವರ ಹೇಳಿದರು.
ಅವರು ಪಟ್ಟಣದ ಕಿನಾಲ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಪಟ್ಟಣದಲ್ಲಿ ಬಹುತೇಕ ಜನ ಬಡವರು ಇದ್ದಾರೆ ಅವರ ಕಷ್ಟಗಳಿಗೆ ನಮ್ಮ ಪಕ್ಷ ಹಾಗೂ ನಾನು ನಿಮ್ಮೊಂದಿಗೆ ಇದ್ದೆನೆ.
ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಯೋಜನೆಗಳಿಗೆ ಬಿಜೆಪಿಯವರೆ ತೆಪೆ ಬಡಿದು ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆ. ಕೇವಲ ಕಮಿಷನ್ ಬರುವ ಯೋಜನೆಗಳನ್ನು ಮಾತ್ರ ಜಾರಿಗೆ ತರುತ್ತಿದ್ದಾರೆ. ಬಿಜೆಪಿಯವರು ಒಡ್ಡುವ ಆಶೆ ಆಮಿಷಗಳಿಗೆ ಬಲಿಯಾಗದಿರಿ, ಕಾಂಗ್ರೆಸ್ ಪಕ್ಷದವು ಈಗಾಗಲೇ ಎರಡು ಗ್ಯಾರಂಟಿ ಕಾರ್ಡಗಳನ್ನು ಮನೆ ಮನೆಗೆ ತಲುಪಿಸಿ ಮನವರಿಕೆ ಮಾಡುವಂತ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಒಗ್ಗಾಟ್ಟಾದರೆ ಈ ಸಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ಯಡವಣ್ಣವರ, ಪಿ.ಎಂ. ಕುಲಗೋಡ, ಶ್ರೀಶೈಲ ಅಂಗಡಿ, ಆನಂದ ತುಳಜವ್ವಗೋಳ, ಹಣಮಾಸಾಬ ನಾಯ್ಕರ, ದಸ್ತಗೀರ ಕಾಗವಾಡೆ, ಶಿವಶಂಕರ ನರಗಟ್ಟಿ ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಸಹಕಾರಿ ಘಟಕದ ಅಧ್ಯಕ್ಷರು. ಹಾಗೂ ಮತ್ತಿತರರು ಉಪಸ್ಥಿತರಿದ್ದರು.






