ಬೆಳಗಾವಿ
ವರದಿ: ಶಶಿಕಾಂತ ಪುಂಡಿಪಲ್ಲೆ
ಅಥಣಿ: ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಸಲುವಾಗಿ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಜಲ ಜೀವನ ಮೀಷನ್ ಯೋಜನೆಯನ್ನು ಅಥಣಿ ಮತಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ತಾಲೂಕಿನ ಅವರಖೋಡ ಗ್ರಾಮದಲ್ಲಿ 70 ಲಕ್ಷ ರೂ ವೆಚ್ಚದ ಜಲ ಜೀವನ ಮಷನ ಯೋಜನೇಯಡಿ ಕುಡಿಯುವ ನೀರಿನ ಕಾಮಗಾರಿ ಭೂಮೀ ಪೂಜೆ,
ಅಕ್ಕೊಳ ತೋಟದ ಹತ್ತಿರ 45 ಲಕ್ಷ ರೂ ವೆಚ್ಚದ ಜಲ ಜೀವನ ಮಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಭೂಮೀ ಪೂಜೆ.
ದರೂರ ಗ್ರಾಮದಲ್ಲಿ 1 ಕೋಟಿ 14 ಲಕ್ಷ ರೂ ವೆಚ್ಚದ ಜಲ ಜೀವನ ಮಿಷನ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ.
ಖವಟಕೋಪ ಗ್ರಾಮದಲ್ಲಿ
1 ಕೋಟಿ 12 ಲಕ್ಷ ರೂ ವೆಚ್ಚದ ಜಲ ಜೀವನ ಮಿಷನ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಭೂಮೀ ಪೂಜೆ ನೆರವೇರಿಸಿದರು.
ಈ ವೇಳೆ ಗುತ್ತಿಗೆದಾರರಾದ
ಶ್ರೀಮಂತ ಸಲಗರ, ಆನಂದ ಕುಲಕರ್ಣಿ,ನಿಂಗಪ್ಪ ನಂದೇಶ್ವರ, ಚೇತನ ನಂದೇಶ್ವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.