ಬೆಳಗಾವಿ. ರಾಯಬಾಗ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೆಸರಾಂತ ಸಹಕಾರಿ ಬ್ಯಾಂಕ್ ಜನತಾ ಸಹಕಾರಿ ಬ್ಯಾಂಕನಲ್ಲಿ ಇತ್ತೀಚಿಗೆ ನಿಧನರಾದ ಲಿಂ. ಶ್ರೀ ಶ್ರೀಶೈಲ ಪಾಲಭಾವಿಯವರು ಹಾಗೂ ಜಿ. ಸಾತಪ್ಪ ಕರ್ಣವಾಡಿಯವರಿಂದ ತೆರವಾಗಿದ್ದ ನಿರ್ದೇಶಕರ ಸ್ಥಾನಕ್ಕೆ ನೂತನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಜರುಗಿತು. ಲಿಂ. ಶ್ರೀಶೈಲ ಪಾಲಭಾವಿಯವರ ಸ್ಥಾನಕ್ಕೆ ಅವರ ಸುಪುತ್ರ ಪ್ರಭುಲಿಂಗ ಶ್ರೀಶೈಲ ಪಾಲಭಾವಿ ಹಾಗೂ ಜಿ. ಸಾತಪ್ಪ ಕರ್ಣವಾಡಿಯವರ ಸ್ಥಾನಕ್ಕೆ ಅವರ ಸುಪುತ್ರ ಭೀಮಗೌಡ ಸಾತಪ್ಪ ಕರ್ಣವಾಡಿಯವರನ್ನು ಆಡಳಿತ ಮಂಡಳಿಯ ಸಹಮತದೊಂದಿಗೆ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಜಶೇಖರ ಬ. ಪಾಟೀಲ,ನಿರ್ದೇಶಕರಾದ ತಮ್ಮಣ್ಣಪ್ಪ ತೇಲಿ,ಶ್ರೀಮತಿ ರೇಖಾ ದೇಶಪಾಂಡೆ, ಪ್ರಕಾಶ ಕಶೆಟ್ಟಿ, ಹಣಮಂತ ಮಡಿವಾಳ,ವ್ಯವಸ್ಥಾಪಕರಾದ ಎಸ್ ಎಸ್ ಅಮರಶೆಟ್ಟಿ ಹಾಗೂ ಸಹಕಾರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ : ಸುನೀಲ್ ಕಬ್ಬೂರ