ಬೆಳಗಾವಿ. ರಾಯಬಾಗ
ರಾಯಭಾಗ :ತಾಲೂಕಿನ ಹಾರೂಗೇರಿ ಪಟ್ಟಣದ ಹಣಮಂತ ಜಂಬಗಿಯವರ ತೋಟದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿಯವರು ದಿ. ಏ 03 ರಂದು ಕುಡಚಿ ಮತಕ್ಷೇತ್ರದ ಹಂದಿಗುಂದ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತಾಲೂಕಾ ಅಧ್ಯಕ್ಷ ಮಾರುತಿ ಶೇಗುಣಶಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಇದೇ ಸಮಯದಲ್ಲಿ ವಿಶ್ವನಾಥ ಗಾಣಿಗೇರ ಮತ್ತು ಶಾರದಾ ತುಳಸಿಗೇರಿಯರು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಪಕ್ಷಕ್ಕೆ ಸೇರ್ಪಡೆಯಗಲಿದ್ದಾರೆ.
ನಂತರ ಹಂದಿಗುಂದ ಗ್ರಾಮದಿಂದ ಬೈಕ್ ರ್ಯಾಲಿ ಮೂಲಕ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಶ್ರೀಮಠಕ್ಕೆ ಭೇಟಿ ಶ್ರೀಗಳ ದರ್ಶನಾಆಶೀರ್ವಾದ ಪಡೆದು ಹಿಡಕಲ್ ಮಾರ್ಗವಾಗಿ ಹಾರೂಗೇರಿ ಪುರಸಭೆ ಮುಂಭಾಗದ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರಚಾರಾರ್ಥ ಕೋಳಿಗುಡ್ಡ ಮಾರ್ಗವಾಗಿ ಅಥಣಿಗೆ ಪಟ್ಟಣಕ್ಕೆ ತೆರಳುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರದೀಪ ಕಾಂಬಳೆ, ಶ್ರೀಧರ ಗಾಣಿಗೇರ, ದಾದೆಪಾಷಾ ನಸರದಿ, ಗಣೇಶ ಬೋಸಲೆ, ಪರಶುರಾಮ ಟೋನಪೆ, ಎಜಾಜ ಸೈಯದ, ರಾಜು ದುಮಾಳೆ, ಮಹಾದೇವ ತುಳಸಿಗೇರಿ ಇನ್ನು ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.