ಬೆಳಗಾವಿ. ರಾಯಬಾಗ
ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಮೂಡಿಸುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಭಿಮತ
ಕರ್ನಾಟಕ ರಾಜ್ಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಗಜಾನನ ಮನಿಕೇರಿಗೆ ಅಭಿನಂದನೆ ಸಲ್ಲಿಸಿದ ಶಿಕ್ಷಕ ಬಳಗ
ಹಂದಿಗುಂದ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸು ವುದರ ಜೊತೆಗೆ ಭಾವೈಕ್ಯತೆ ಮೂಡಿಸುತ್ತದೆ ಎಂದು ಧಾರವಾಡ ಅಫರ್ ಆಯುಕ್ತರ ಕಾರ್ಯಾಲಯದ ಜಂಟಿ ನಿರ್ದೇಶಕ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಗಜಾನನ ಮಣ್ಣಿಕೇರಿ ಹೇಳಿದರು.
ಅವರು ಹಂದಿಗುoದ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಭಾರತ್ ಮತ್ತು ಗೈಡ್ಸ್ ನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಗಜಾನನ ಮನ್ನಿಕೆರೆಯವರ ಅಭಿನಂದನಾ ಸಮಾರಂಭ ಮತ್ತು ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಯಬಾಗ ಹಾಗೂ ಬೆಳಗಾವಿ ಜಿಲ್ಲಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಬೇಸಿಗೆ ಶಿಬಿರವನ್ನು ಸಸಿಗೆ ನೀರು ಹಾಕುವದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು, ಅದರ ಜೊತೆಗೆ ಸಂಸ್ಕಾರವನ್ನು ಕಲಿಯಬೇಕು. ರಜೆಯ ಹಾಗೂ ಬೇಸಿಗೆ ದಿನಮಾನಗಳಲ್ಲಿ ಜೀವನಕ್ಕೆ ಉಪಯುಕ್ತ ವಾಗುವಂತಹ ಶಿಕ್ಷಣವನ್ನು ಪಡೆಯಬೇಕು ಎಂದು ಹೇಳಿದರು.
ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳ ಜೊತೆಗೆ ಉತ್ತಮ ಚಟುವಟಿಕೆಗಳನ್ನು ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕವಾಗುತ್ತದೆ ಎಂದರು,
ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಗಜಾನನ ಮಣ್ಣಿಕೇರಿ ಅವರನ್ನು ರಾಯಬಾಗ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು, ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸರ್ಕಾರಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಸತ್ಕರಿಸಿ ಅಭಿನಂದನೆ ಸಲ್ಲಿಸಿದರು .
ಸಿದ್ದೇಶ್ವರ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿ. ಪಿ ಮಠ, ರಾಯಬಾಗ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಷ್ಣು ಅರಗೆ, ಹಿರಿಯ ಶಿಕ್ಷಕ ಎಂ ಬಿ ಬಡಿಗೇರ ಮಾತನಾಡಿದರು.
ಬೆಳಗಾವಿ ಜಿಲ್ಲೆ ಸ್ಕೌಟ್ಸ್ ಜಿಲ್ಲಾ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಡಿಬಿ ಅತ್ತಾರ , ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಾಯ ಕೆ ಭಜಂತ್ರಿ, ರಾಯಭಾಗ ಶಿಕ್ಷಣ ಸಂಯೋಜಕ ಶ್ರೀಕಾಂತ ಕಂಬಾರ, ರಾಯಬಾಗ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಷ್ಣು ಅರಗೆ , ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷ ಎಸ್ ಎ ಜಮಾದಾರ,ಸಿದ್ದೇಶ್ವರ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ ಮಠ, ಸಿಆರ್ ಪಿ ಗಳಾದ ರಮೇಶ ಬಿಸನಕೊಪ್ಪ ಷಣ್ಮುಖ ನಾವಿ , ಅಜಿತ ಬಾನೆ ಪ್ರೌಢಶಾಲೆಯ ಮುಖೋಪಾಧ್ಯಾಯ ಧರೇಪ್ಪ ಬ್ಯಾಕೋಡ, ಮುಖ್ಯ ಶಿಕ್ಷಕರಾದ ಎಸ್ಎಂ ಚೂರಿ, ನಾಮದೇವ ತೈಕಾರ, ನಾರಾಯಣ ಜಾದವ , ಮಹಾಂತೇಶ ಬಿಜ್ಜರಗಿ, ಗಣಪತಿ ಬಡಿಗೇರ, ಎಂ ಕೆ ಸಂಗಾನಟ್ಟಿ , ಎಸ್ ಎ ದೇಸಾಯಿ,ಗೀತಾ ಸುತಾರ, ಸಿ.ಎಸ.ಹಿರೇಮಠ , ಎಮ್ ಎಚ್ ಬಿರಾದಾರ , ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಗುರುಗಳು ಹಾಗೂ ಗುರುಮಾತೆಯರು ವಿದ್ಯಾರ್ಥಿಗಳು ಇದ್ದರು.
ಟಿ ಜಿ ದಾಸಪ್ಪನವರ ಸ್ವಾಗತಿಸಿದರು . ವೈ ಎಸ್ ಜಕನೂರ ನಿರೂಪಿಸಿದರು .ಪಿ.ಟಿ ಅಥಣಿ ವಂದಿಸಿದರು.
*ಮುಖ್ಯಾಂಶಗಳು*
ರಜೆ ದಿನಗಳಲ್ಲಿ ವಿದ್ಯಾರ್ಥಿಗಳು ಹೊಸ ಹೊಸ ಜೀವನ ಕೌಶಲ್ಯಗಳನ್ನು ಕಲಿಯಬೇಕು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಶಿಸ್ತು ಬದ್ಧ ಜೀವನಕ್ಕೆ ಸಹಕಾರಿ.
ವಿದ್ಯಾರ್ಥಿಗಳಲ್ಲಿಉತ್ತಮ ನಾಯಕತ್ವ ಗುಣಗಳನ್ನು ಕಲಿಸುತ್ತದೆ.