ಬೆಳಗಾವಿ, ಪ್ರತಿ ವರ್ಷ ಪವಿತ್ರಮಾಸವಾದ ರಂಜಾನ ತಿಂಗಳನಲ್ಲಿ ಮುಸ್ಲಿಂ ಸಮಾಜದ ನಮ್ಮ
ಸಹೋದರ ಸಹೋದರಿಯರು ಬಹಳ ಶ್ರುದ್ದಾ ಭಕ್ತಿಯಿಂದ ಉಪವಾಸ ಮಾಡುತ್ತಾರೆ.ಬಹು
ಧರ್ಮ ಹಾಗೂ ಸಂಸ್ಕøತಿಯ ಜಗತ್ತಿನಲ್ಲೇ ನಮ್ಮ ಭಾರತ ದೇಶಕ್ಕೆ ವಿಶಿಷ್ಟ ಸ್ಥಾನವಿದೆ ಎಂದು
ಏಒಆಅ ಮಾಜಿ ಅಧ್ಯಕ್ಷರಾದ ಶ್ರೀ ಮುಕ್ತಾರ ಪಠಾಣ ಅವರು ಹೇಳಿದರು.
ಬೆಳಗಾವಿಯ ಸುರೇಶ ಯಾದವ ಪೌoಡೇಶನ್ ವತಿಯಿಂದ ಪ್ಯಾರಡೈಸ್ ಹಾಲನಲ್ಲಿ ಜರುಗಿದ ಇಪ್ತಾರ-
ಕೂಟ ಕಾರ್ಯಕ್ರಮದಲ್ಲಿ ಪಾಲಗೊಂಡು ಮಾತನಾಡಿದ ಅವರು ನಾಗರೀಕತೆ ತೊಟ್ಟಿಲಲ್ಲಿ ಮಾನುವ
ಸಮೂಹ ಜೀವನ ನಡೆಸಲು ಕೆಲವು ಕಟ್ಟಳೆಗಳನ್ನು ಮಾಡಿಕೊಂಡರು.ಅವೇ ಮುಂದೆ ವಿವಿಧ
ಧರ್ಮಗಳಾಗಿ ಮಾರ್ಪಟ್ಟವು.ಹೀಗೆ ಸುಖಮಯ ಜೀವನ ನಡೆಸಲು ಹುಟ್ಟಿದ ಧರ್ಮಗಳೇ
ಇಂದು ನಮ್ಮ ನಡುವೆ ಕಂದಕ ಮೂಡಿಸುತ್ತಿರುವುದು ವಿಧಿನೀಯ. ಅಂಥ ವಿಷ ವರ್ತೂಲದಿಂದ
ಪಾರಾಗಲು ಇಂಥ ಸಾಮರಸ್ಯ ಸಾರಬಲ್ಲ ಇಪ್ತಾರ- ಕೂಟಗಳು ಸಹಕರಿಯಾಗಬಲ್ಲವು.ಈ ನಿಟ್ಟಿನಲ್ಲಿ
&quoಣ;ಸುರೇಶ ಯಾದವ ಪೌoಡೇಶನ್ ಕಾರ್ಯ ಶ್ಲಾಘನಿಯ &quoಣ; ಎಂದರು.
ಸುರೇಶ ಯಾದವ ಅವರನ್ನು ಅವರ ಗೆಳೆಯ ಬಳಗದವರು ಸತ್ಕಾರಿಸಿ ಗೌರವಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಸುರೇಶ ಯಾದವ ಅವರು ಆಟೋನಗರ ಕೈಗಾರಿಕೆ
ಪ್ರದೇಶದಲ್ಲಿ ವಿವಿಧ ಸಮುದಾಯದ ಉದ್ಯಮಿಗಳಿದ್ದು ಮೊದಲಿನಿಂದ ಎಲ್ಲರೂ ಒಂದೇ ಕುಟುಂಬದ
ಸದಸ್ಯರಂತೆ ಬದುಕುತಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಸಲೀಮ್ ಮುಲ್ಲಾ, ರಿಯಾಜ, ಆಯುಭ. ಮಹಮ್ಮದಶರೀಫ್ ಪಟೇಲ್,
ಏಕನಾಥ್ ಅಗಸಿಮಣಿ, ಮಹದೇವ ಟೊಣ್ಣಿ. ದಿಕ್ಸಿತ ಓS ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.