ಗಂಗಾವತಿ
ಗಂಗಾವತಿ:ಗಂಗಾವತಿ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್.ಪಕ್ಷದ ಸಂಭಾವ್ಯ ಅಭ್ಯರ್ಥಿ ಎಚ್.ಆರ್.ಚನ್ನಕೇಶವ ವಿವಿಧ ಮುಖಂಡರನ್ನು ನಗರದಲ್ಲಿ ಭೇಟಿಯಾಗುತ್ತಿದ್ದಾರೆ.
ಅದರಂತೆ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಮತ್ತು ರಿಜಿಸ್ಟರ್ಡ ಫ಼ಾರ್ಮಸಿಸ್ಟ ಸಂಘದ ರಾಜ್ಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು ಕಳೆದ ಗುರುವಾರ ಅವರ ಕಚೇರಿಯಲ್ಲಿ ಭೇಟಿ ಮಾಡಿದ ಅವರು ತಮ್ಮನ್ನು ಬೆಂಬಲಿಸುವಂತೆ ಅಶೋಕಸ್ವಾಮಿ ಹೇರೂರ ಅವರಲ್ಲಿ ಕೋರಿದರು.
ಈ ಸಂಧರ್ಬದಲ್ಲಿ ಹಿಂದೆ 25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಎಜ್.ಜಿ.ರಾಮುಲು ಮತ್ತು ಶ್ರೀರಂಗದೇವರಾಯಲು ಅವರ ಒಡನಾಟದ ಬಗ್ಗೆ ಅಶೋಕಸ್ವಾಮಿ ಹೇರೂರ ನೆನಪುಗಳನ್ನು ಮೆಲುಕು ಹಾಕಿದರು.
ತಮ್ಮ ತಂದೆಯವರಾದ ಎಚ್.ಜಿ.ರಾಮುಲು ಅವರ ಜೊತೆಗೆ ರಾಜಕೀಯ ಮಾಡಿದ ತಮ್ಮಂತಹವರ ಸಹಕಾರ ನನಗೆ ಬೇಕಾಗಿದ್ದು ,ಸಹಕಾರ ನೀಡಲು ಚನ್ನಕೇಶವ ಅವರು ಕೋರಿದರು.
ಈ ಸಂಧರ್ಬದಲ್ಲಿ ಶ್ರೀ ವೀರಮಹೇಶವರ ಕೋ ಆಪರೇಟಿವ್ ನಿಯಮಿತ ಗಂಗಾವತಿ ಈ ಸಂಸ್ಥೆಯ ಮಾಜಿ ನಿರ್ದೇಶಕ ಎಸ್.ನಾಗರಾಜ ಸ್ವಾಮಿ,ಸತೀಶ್ ಕಲ್ಲೊಳಿ ಮಠ,ಸಿ.ಚಿದಾನಂದ ಮತ್ತು ಜೆ.ಡಿ.ಎಸ್.ಪಕ್ಷದ ಇತರ ಮುಖಂಡರು ಹಾಜರಿದ್ದರು.