ಗಂಗಾವತಿ
ಗಂಗಾವತಿ: ಗಂಗಾವತಿ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ (ಬಿ.ಜೆ.ಪಿ) ಪಕ್ಷದ ಟಿಕೆಟ್ ಅಕಾಂಕ್ಷಿ ವೀರಶೈವ ಮಹಾ ಸಭಾದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಕಳಕನಗೌಡ ಕಲ್ಲೂರ, ಗಂಗಾವತಿ ತಾಲೂಕು ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು ಭೇಟಿಯಾಗಿ ರಾಜಕೀಯ ವಿಧ್ಯಮಾನಗಳ ಬಗ್ಗೆ ಚರ್ಚಿಸಿದರು.
ಜನಾರ್ಧನ ರೆಡ್ಡಿಯವರ ಪ್ರವೇಶದಿಂದಾಗಿ ಗಂಗಾವತಿ ವಿಧಾನ ಸಭಾ ಕ್ಷೇತ್ರ, ಕುತೂಹಲದ ಕಣವಾಗಿದ್ದು, ಕೇತ್ರದ ಟಿಕೆಟ್ ಆಕಾಂಕ್ಷಿಗಳು ವಿವಿಧ ಮುಖಂಡರುಗಳನ್ನು ಭೇಟಿಯಾಗುತ್ತಿರುವುದು ಕಂಡು ಬರುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ , ಅಶೋಕಸ್ವಾಮಿ ಹೇರೂರ ಅವರನ್ನು ಭೇಟಿಯಾಗಿದ್ದರು.ಅದರಂತೆ ಜಾತ್ಯಾತೀತ ಜನತಾದಳ ಪಕ್ಷದ (ಜೆ.ಡಿ.ಎಸ್.) ಟಿಕೆಟ್ ಆಕಾಂಕ್ಷಿ ಎಚ್.ಆರ್.ಚನ್ನಕೇಶವ ಇತ್ತೀಚಿಗೆ ಹೇರೂರ ಅವರನ್ನು ಭೇಟಿಯಾಗಿದ್ದರು.
ಇದೀಗ ಉದ್ಯಮಿ ಕಳಕನಗೌಡ ಕಲ್ಲೂರು, ಅಶೋಕಸ್ವಾಮಿ ಹೇರೂರ ಅವರನ್ನು ಭೇಟಿಯಾಗಿರುವುದು,ರಾಜಕೀಯ ವಲಯದಲ್ಲಿ ಜಾತಿ-ಪಂಗಡಗಳ ಲೆಕ್ಕಾಚಾರ ಪ್ರಾಮುಖ್ಯತೆ ಪಡೆಯುತ್ತಿದೆ.
ಗಣಿ ಉದ್ಯಮಿ ಜನಾರ್ಧನ ರೆಡ್ಡಿ ಪ್ರವೇಶದಿಂದ ತೀವ್ರ ಪೈಪೋಟಿ ಉಂಟಾಗುವ ಕಾರಣಗಳಿಗಾಗಿ ಜಾತಿ ಲೆಕ್ಕಾಚಾರ ಮುನ್ನೆಲೆಗೆ ಬರುತ್ತಿದ್ದು, ಕಳಕನಗೌಡ ಹಾಗೂ ಅಶೋಕಸ್ವಾಮಿ ಹೇರೂರ ಜೊತೆಗಿನ ಭೇಟಿ ಕುತೂಹಲಕ್ಕೆ ನಾಂದಿಯಾಗಿದೆ.