ಕಣ್ಮನ ಸೆಳೆದ ರಥೋತ್ಸವ : ಜನಮನ ಸೆಳೆದ ಸಾಂಸ್ಕೃತಿಕ ವೈಭವ 

Share the Post Now

ಬೆಳಗಾವಿ. ಅಥಣಿ

ವರದಿ: ರಾಶಿದ್ ಶೇಖ್ ಅಥಣಿ


ಅಥಣಿ: ಇಲ್ಲಿನ ಗಚ್ಚಿನಮಠದ ಮಹಾತಪಸ್ವಿ ಭಕ್ತರ ಜೀವಾಳ  ಅಥಣಿಯ ಆರಾಧ್ಯ ದೈವ ಮುರುಘೇಂದ್ರ ಶಿವಯೋಗಿಗಳ  ಜಾತ್ರೆ ಅಂಗವಾಗಿ  ಶುಕ್ರವಾರ ಸಂಜೆ 7 ಗಂಟೆಗೆ ಸಂಭ್ರಮದ ರಥೋತ್ಸವ ವಿಜೃಂಭಣೆಯಿಂದ ಗಚ್ಚಿನ ಮಠದಿಂದ ಆರಂಭವಾಯಿತು 


  ಗಚ್ಚಿನ ಮಠದ ಮುರುಘೇಂದ್ರ ಶಿವಯೋಗಿಗಳ ಜಾತ್ರೆ ಭಾವೈಕ್ಯತೆ ಸಾರುವ ಜಾತ್ರೆಯಾಗಿದೆ ಎಲ್ಲಾ ಧರ್ಮದವರು ಒಟ್ಟಾಗಿ ಆಚರಿಸುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆಯುತ್ತಾರೆ ಈ ಮೂಲಕವಾಗಿ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ .ನಗರದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಂಚರಿಸುತ್ತ ಆಗಮಿಸಿದಾಗ ಭಕ್ತರು ಮುರುಗೇಂದ್ರ ಶಿವಯೋಗಿಗಳ ಜೈ ಘೋಷದೊಂದಿಗೆ ಬೆಂಡು ಬತ್ತಾಸು ಉತ್ತತ್ತಿಗಳನ್ನು ರಥದ ಮೇಲೆ ಹಾರಿಸುವ ಮೂಲಕ ಮಹಿಳೆಯರು ಮಕ್ಕಳು ಪುರುಷರೆನ್ನದೆ ಎಲ್ಲರೂ ಭಕ್ತಿಭಾವದಿಂದ ದರ್ಶನ ಪಡೆದರು .ನಗರದ ಎಲ್ಲೆಡೆ ಸಂಚರಿಸಿ ರಥೋತ್ಸವ ಕಣ್ಮನ ಸೆಳೆಯಿತು ವಿವಿಧ ವಾದ್ಯ ಮೇಳಗಳೊಂದಿಗೆ ಭಜನೆ ಹಾಡುವವರು ಭಾವುಕರಾಗಿ ಭಜನೆಯಲ್ಲಿ ತೊಡಗಿದರೆ  ,ಜಾಂಜ್ ಪತಾಕ್ ಮೇಳದೊಂದಿಗೆ ಯುವಕರು ವಿಶೇಷವಾಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ತಮ್ಮ ಭಕ್ತಿ ಭಾವ ಮೆರೆದರು ಸಂಗೀತದ ಮೇಳದೊಂದಿಗೆ ಹಾಡುಗಾರರ ಹಾಡುಗಳು ನೋಡುಗರ ಕಣ್ಮನ ಸೆಳೆದವು ನಗರದೆಲ್ಲೆಡೆಯಲ್ಲಿ ತಳಿರು ತೋರಣಗಳಿಂದ ರಥೋತ್ಸವ ಸಾಗುವ ಬೀದಿಗಳನ್ನು ಶೃಂಗಾರ ಮಾಡಲಾಗಿತ್ತು ಅಷ್ಟೇ ಅಲ್ಲದೆ ನಗರದಾದ್ಯಂತ ವಿದ್ಯುತ್ ದೀಪಗಳ ಅಲಂಕಾರ ಕಣ್ಮನ ಸೆಳೆಯುವಂತಿತ್ತು  , ಪುಷ್ಪಮಾಲೆ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲ್ಪಟ್ಟ ರಥ ಸಂಜೆ 7 ಗಂಟೆಗೆ ಶ್ರೀಮಠದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ನಸುಕಿನ ಜಾವ ಶಿವಯೋಗಿಗಳು ಅನುಷ್ಠಾನಗೈದ ಪುರಾತನೇಶ್ವರ ದೇವಸ್ಥಾನ ತಲುಪಿತು. ಶನಿವಾರ  ಬೆಳಗ್ಗೆ 6 ಗಂಟೆಗೆ ರಥ ಜಾತ್ರೆಯಿಂದ ಹೊರಟು ಗಚ್ಚಿನಮಠಕ್ಕೆ ಆಗಮಿಸುವುದು.

ವ್ಯಾಸನತೋಳ ಮೆರವಣಿಗೆ : ದೇಶದ ಪ್ರಖ್ಯಾತ ಕ್ಷೇತ್ರ ಕಾಶಿಯಲ್ಲಿ  ನಡೆಯುವ ವ್ಯಾಸನ ತೋಳ ಮೆರವಣಿಗೆ ಈ  ಸಂದರ್ಭದಲ್ಲಿ ಜರುಗಿತು  . ಒಂದು ಕಾಶಿಯಲ್ಲಿ ಇನ್ನೊಂದು ಅಥಣಿ ಗಚ್ಚಿನ ಮಠದಲ್ಲಿ ವ್ಯಾಸನ ತೋಳ ಮೆರವಣಿಗೆ ಜರುಗುತ್ತದೆ ಎಂಬುದು ಹೆಮ್ಮೆಯ ಸಂಗತಿ. 


ಬೆಳಗ್ಗೆ 8ಗಂಟೆಗೆ ಶಿವಯೋಗಿಗಳ ಜನ್ಮಸ್ಥಳವಾದ ನದಿ ಇಂಗಳಗಾಂವಿಯಿಂದ ಭಕ್ತರು ಶಿವಯೋಗಿಗಳ ಬಾಲ್ಯಮೂರ್ತಿಯನ್ನು ಉತ್ಸವದ ಮೂಲಕ ಗಚ್ಚಿನಮಠಕ್ಕೆ ತಂದರು. ನಂತರ ಪಂಚಕಲಶ, ವ್ಯಾಸನತೋಳ, ಸಕಲ ಬಿರುದಾವಳಿ ಸಹಿತ ಅಲಂಕರಿಸಿದ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು .ಸುಮಾರು 150 ಕೆಜಿ ಬೆಳ್ಳಿ ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯ ಶ್ರೀ ಶಿವಯೋಗಿ ಬೆಳ್ಳಿಯ  ಭಾವಚಿತ್ರ ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು .

ಸಂಪ್ರದಾಯದಂತೆ ಬೆಳಗ್ಗೆ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು . ಮಧ್ಯಾಹ್ನ ಮಹಾಪ್ರಸಾದ ಜರುಗಿತು .ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧರ್ಮಸಭೆ   ಶ್ರೀಮಠದ ಅನುಭವ ಮಂಟಪದಲ್ಲಿ ಪುರಾಣ, ಪ್ರವಚನ, ಶಿವಾನುಭವ, ವಚನ ಸಂಗೀತ, ಶಿವಭಜನೆ ಹಾಗೂ ಬಯಲಾಟ ಪ್ರದರ್ಶನ, ಜರುಗಲಿದೆ.


ಆನೆಯ ಮೆಲೆ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ :

ಪಟ್ಟಣದ ಪ್ರಮುಖ ಬಿದಿಗಳಲ್ಲಿ ಆನೆಯ ಮೇಲೆ ಶಿವಯೋಗಿಗಳ ಭಾವಚಿತ್ರವಿಟ್ಟು ಮೆರವಣಿಗೆ ಜರುಗಿತು .ಭಕ್ತಾದಿಗಳಿಗೆ ಪ್ರಮುಖ ಆಕರ್ಷಣೆಯಾದ ಗಜರಾಜನಿಂದ ಹಿರಿಕಿರಿಯರು ಸೊಂಡಿಲಿನಿಂದ ಆಶಿರ್ವಾದ ಪಡೆದು ಸಂಭ್ರಮಿಸುತ್ತಿರುವುದು ವಿಶೇಷವಾಗಿತ್ತು .

Leave a Comment

Your email address will not be published. Required fields are marked *

error: Content is protected !!