ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ
ಮುಗಳಖೋಡ ಪಟ್ಟಣದ ಪ್ರಭಾವಿ ನಾಯಕ ಮಹಾಂತೇಶ್ ಕುರಾಡೇ ಬಿಜೆಪಿ ಪಕ್ಷ ತೊರೆದು ಸಹಸ್ರಾರು ಜನಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
10 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ನನಗೆ ಪಿ.ರಾಜೀವ್ ಅವರಿಂದ ಅವಮಾನ;
ಸಾರ್ವಜನಿಕ ಕೆಲಸ ಕೇಳಲು ಹೋದರೆ ಶಾಸಕ ಪಿ ರಾಜೀವ್ ಅವರು ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ
ಬಿಜೆಪಿ ಪಕ್ಷದಲ್ಲಿ ದಲಿತ ಮುಖಂಡರು ಬೆಳೆಯಲು ಶಾಸಕ ಪಿ. ರಾಜೀವ್ ಬಿಡುವುದಿಲ್ಲ ಅಂಥವರನ್ನು ಅಸ್ಪಷರಂತೆ ಕಾಣುತ್ತಾರೆ: ಮಹಾoತೇಶ ಕುರಾಡೆ ಗಂಭೀರ ಆರೋಪ;
ಮುಗಳಖೋಡ : ಕುಡಚಿ ಮತಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯಕರ್ತನಾಗಿ ಪ್ರಾಮಾಣಿಕ ಕೆಲಸ ಮಾಡುತ್ತಾ ಬಂದಿದ್ದೇನೆ. ಇತ್ತೀಚಿಗೆ ಶಾಸಕ ಪಿ.ರಾಜೀವ್ ಅವರು ಬಹಳಷ್ಟು ಬದಲಾವಣೆಯಾಗಿದ್ದಾರೆ. ಸಾರ್ವಜನಿಕವಾಗಿ ಅಭಿವೃದ್ಧಿ ಬಗ್ಗೆ ಕೆಲಸ ಕೇಳಲು ಹೋದರೆ ಉಡಾಫೆ ಮಾತುಗಳನ್ನು ಆಡಿ ನಮ್ಮ ಮನಸ್ಸಿಗೆ ನೋವು ತರುವಂತಹ ಘಟನೆಗಳು ಸಾಕಷ್ಟು ಸಂಭವಿಸಿವೇ.
ಈ ಎಲ್ಲ ಘಟನೆಗಳಿಂದ ನಾನು ಬೇಸತ್ತು, ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಎಂದು ಮುಗಳಖೋಡ ಪಟ್ಟಣದ ದಲಿತ ಮುಖಂಡ ಮಹಾಂತೇಶ ಕುರಾಡೆ ಸುದ್ದಿಗಾರರಿಗೆ ತಿಳಿಸಿದರು.
ರವಿವಾರ ಮಧ್ಯಾಹ್ನ 4 ಗಂಟೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಅವರು ಪ್ರಚಾರ ಮಾಡುವ ಸಂದರ್ಭದಲ್ಲಿ ಡಾಕ್ಟರ್ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸೇರಿದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತ
ಬಿಜೆಪಿ ಪಕ್ಷದಲ್ಲಿ ಎರಡು ಬಾರಿ ಶಾಸಕರಾಗಿ ಗುರುತಿಸಿಕೊಂಡ ಪಿ.ರಾಜೀವ್ ಅವರು ಕ್ಷೇತ್ರದಲ್ಲಿ ಎಲ್ಲಿಯೂ ದಲಿತ ಮುಖಂಡರನ್ನು ಬೆಳೆಸಲಿಲ್ಲ, ನಮ್ಮಂತವರನ್ನು ಅಸ್ಪೃಶ್ಯರಂತೆ ಕಾಣುವ ಮನಸ್ಸು ಪಿ.ರಾಜೀವ್ ಅವರಿಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಅವರನ್ನು ಅಂತರದ ಮತಗಳಿಂದ ಗೆಲ್ಲಿಸುತ್ತೇವೆ ಇದು ಅಕ್ಷರ ಸಹ ಸತ್ಯ. ಮುಗಳಖೋಡ ಪಟ್ಟಣದ ವಾರ್ಡ್ ನಂಬರ್ 5ರಲ್ಲಿ ಬಿಜೆಪಿ ಅಭ್ಯರ್ಥಿ ಪಿ.ರಾಜೀವ್ ಅವರೂ 12 ಅಥವಾ 15 ವೋಟ್ ಪಡೆದುಕೊಳ್ಳುತ್ತಾರೆ. ಕುಡಚಿ ಕ್ಷೇತ್ರದಲ್ಲಿ ಪಿ.ರಾಜೀವ್ ಅವರಿಗೆ ಹೀನಾಯ ಸೋಲು ಖಚಿತ ಎಂದು ಮಹಾಂತೇಶ ಕುರಾಡೆ ಆಕ್ರೋಶವಾಗಿ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯ ರಮೇಶ ಯಡವನ್ನವರ, ವಿಠ್ಠಲ ಹಳ್ಳೂರ, ಮಹಾವೀರ ಕುರಾಡೆ, ರೈತ ಮುಖಂಡ ಶ್ರೀಶೈಲ ಅಂಗಡಿ, ಶ್ರೀಕಾಂತ ಖೇತಗೌಡರ, ರವಿಶಂಕರ ನರಗಟ್ಟಿ, ಗಜಾನನ ಗಸ್ತಿ, ವರ್ಧಮಾನ ಬದನೆಕಾಯಿ, ಬಸವರಾಜ ಚೌಗಲಾ, ನಾಗು ನರಗಟ್ಟಿ, ಲೋಕೇಶ ಕಡಪಟ್ಟಿ, ಬಾಳು ಹಾಡಕರ, ಸಮಾಜದ ಹಿರಿಯರಾದ ರಾಮಚಂದ್ರ ಕುರಾಡೆ, ಶ್ರೀಮಂತ ಖಾಕಂಡಕಿ, ಮಹಾವೀರ ದೇವಣ್ಣವರ, ಸುಖದೇವ ಕರಭೀಮಗೋಳ, ಯುವ ಮುಖಂಡರಾದ ಮಹಾಂತೇಶ ಕುರಾಡೆ, ಚೇತನ ನಡುವಿನಕೇರಿ, ಅರಭಾವಿ ಪೌಂಡೇಶನ್ ಅಧ್ಯಕ್ಷ ಸಂತೋಷ ಅರಬಾವಿ, ಆನಂದ ತುಳಜವ್ವಗೋಳ, ಅಕ್ಷಯ ಕುರಾಡೆ, ಸಚಿನ ಹಳಕಲ್ಲ, ಶ್ರೀಕಾಂತ ಶೇಗುಣಸಿ, ಸಿದ್ದಲಿಂಗ ಹುನ್ನೂರ, ರವಿ ಶಿಂಗೆ, ಶಿವಾನಂದ ನಡುವಿನಕೇರಿ, ರಾಜು ದೇವಣ್ಣವರ, ವೀಣಾ ಗಸ್ತಿ, ಜಯಶ್ರೀ ಬಸಲಿಂಗಗೋಳ, ಗೌರವ್ವ ಕೆಳಗಡೆ, ಸುಮಿತ್ರಾ ನಡುವಿನಕೇರಿ, ಮಹಾದೇವಿ ಕುಡ್ಡಣ್ಣವರ, ರೇಣುಕಾ ಸಂದ್ರಿಮನಿ, ದ್ರಾಕ್ಷಾಯಿಣಿ ಸನದಿ ಇತರರು ಇದ್ದರು.