ಬೆಳಗಾವಿ. ರಾಯಬಾಗ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪುರಸಭೆ ಆವರಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ132 ನೇ ಜಯಂತಿಯನ್ನು ಸರಳ ರೀತಿ ಆಚರಿಸಲಾಯಿತು

ಮೊದಲಿಗೆ ಅಂಬೇಡ್ಕರ್ರವರ ಜೀವನದಾರಿತ ಕ್ರಾಂತಿ ಗೀತೆಯನ್ನು ಹಾಡಿ ಅವರ ಭಾವಚಿತ್ರಕ್ಕೆ ಗಣ್ಯಮಾನ್ಯರು ಪುಷ್ಪನಮನ ಸಲ್ಲಿಸಿದರು
ತಮ್ಮ ಜೀವನವನ್ನೇ ದೇಶದ ಉದ್ದಾರಕ್ಕೆ ಮೂಡುಪಾಗಿಟ್ಟು ದೇಶಕ್ಕೆ ಸಂವಿಧಾನವನ್ನು ಬರೆದವರು ಡಾ ಬಿ ಆರ್ ಅಂಬೇಡ್ಕರ ಹಾಗಾಗಿ ಎಲ್ಲರೂ ಸಂವಿಧಾನ ಓದಿಕೊಂಡು ಈ ದೇಶದವನ್ನು ಮುನ್ನಡೆಸಲು ನೀವು ಎಲ್ಲರೂ ಇವತ್ತಿನಿಂದ ಪ್ರಾರಂಭ ಮಾಡಬೇಕೆಂದು ಅಂಬೇಡ್ಕರ್ ಪೀಪಲ್ ಪಾರ್ಟಿಯ ಸಂಸ್ಥಾಪಕರಾದ ಕೃಷ್ಣ ಸಿಎಂ ಮಂಡ್ಯ ಅವರು ಹೇಳಿದರು
ಕುಡಚಿ ಮತಕ್ಷೇತ್ರದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಮಾಜಿಕ ಹೋರಾಟಗಾರರಿಗೆ ಅಂಬೇಡ್ಕರ್ರವರ ಭಾವಚಿತ್ರ ಮತ್ತು ಸಂವಿಧಾನ ಪುಸ್ತಕ ನೀಡುವ ಮೂಲಕ ಭಾರತ ರತ್ನ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ರಾಜ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು

ಅಂಬೇಡ್ಕರ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದರು ಕೂಡಾ ವಿಶ್ವವೇ ಮನ್ನಣೆ ನೀಡುವಂತ ಸಾಧನೆ ಮಾಡಿದ ಅಂಬೇಡ್ಕರ್ ಅವರ ಆದರ್ಶವನ್ನು ಹಾಗೂ ಜೀವನದ ಮಾದರಿಯನ್ನು ಮೈಗೂಡಿಸಿಕೊಂಡು ಮುನ್ನಡೆಯೋಣ.
ಒಂದು ಹೊತ್ತು ಊಟಕ್ಕೆ ಕಮ್ಮಿಯಾದರು ಚಿಂತಿಸದೇ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಶಿಕ್ಷಣವನ್ನು ಎಂದಿಗೂ ಕಿತ್ತುಕೊಳ್ಳಬೇಡಿ ಅವರ ಮುಂದಿನ ಭವಿಷ್ಯವನ್ನೇ ಬದಲಿಸುತ್ತದೆಂದು ವಿದ್ಯಾರ್ಥಿಗಳ ಪಾಲಕರಿಗೆ ತಿಳಿ ಹೇಳಿದರು
ಇದೇ ಸಂದರ್ಭದಲ್ಲಿ ಮಾತೇ ರಾಮಬಾಯಿ ಅಂಬೇಡ್ಕರ್ ಸಂಘಟನೆ ವತಿಯಿಂದ ಮಹಿಳಾ ಹೋರಾಟಗಾರರು ವಿದ್ಯಾರ್ಥಿನಿಯರು ಅಂಬೇಡ್ಕರ್ ಭಾವಚಿತ್ರ ಮತ್ತು ನೀಲಿ ದ್ವಜ ಹಿಡಿದು ಜೈ ಭೀಮ್ ಜೈ ಭೀಮ್ ಘೋಷಣೆಗಳನ್ನು ಕೂಗಿ ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವವನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ವಿವಿಧ ಸಂಘಟನೆ ಮುಖಂಡರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಾಮಾಜಿಕ ಹೋರಾಟಗಾರರು ಉಪಸ್ಥಿತರಿದ್ದರು





