ಬಸವರಾಜೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದ ಎ.ಬಿ.ಪಾಟೀಲ ದಂಪತಿ.

Share the Post Now

ವರದಿ: ಸಂಗಮೇಶ ಹಿರೇಮಠ.

ಮುಗಳಖೋಡ: ಪಟ್ಟಣದ ಪವಾಡ ಪುರುಷ ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಕರ್ತೃ ಗದ್ದುಗೆಗೆ ನಮಸ್ಕರಿಸಿ ನಂತರ ಅಚಲೇರಿ ಜಿಡಗಾ ಮಠದ ಪೀಠಾಧಿಪತಿ ಶ್ರೀ‌ ಬಸವರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಮಾಜಿ ಸಚಿವ ಎ. ಬಿ. ಪಾಟೀಲ ದಂಪತಿಗಳು.

ಮಾಜಿ ಸಚಿವ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ಸಂಸ್ಥಾಪಕ ಸದಸ್ಯ, ಹಿರಿಯ ಕಾಂಗ್ರೇಸ್ ಧುರೀಣರಾದ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎ. ಬಿ. ಪಾಟೀಲ್ ಶ್ರೀಮತಿ ಮೀನಾಕ್ಷಿ ಪಾಟೀಲ ದಂಪತಿಗಳು ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ರವಿವಾರ ದಿನಾಂಕ 16 ರಂದು ಸಾಯಂಕಾಲ ಸುಕ್ಷೇತ್ರ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರರ ಕರ್ತೃ ಗದ್ದುಗೆಯ ದರ್ಶನಾಶೀರ್ವಾದ ಪಡೆದು ಅಂಬಲಿ ಪ್ರಸಾದ ಸ್ವೀಕರಿಸಿದರು.



ನಂತರ ಕೆನಾಲ್ ಬಸವೇಶ್ವರ ಮಲ್ಲಿಕಾರ್ಜುನ ಮಂದಿರದಲ್ಲಿ ಅಚಲೇರಿ ಜಿಡಗಾ ಮಠದ ಪೀಠಾಧಿಪತಿಗಳಾದ ಬಸವರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಪಾಟೀಲ ದಂಪತಿಗಳನ್ನು ಶ್ರೀಗಳು ಸತ್ಕರಿಸಿ ಗುರುವಿನ ಕೃಪೆಯಿಂದ ನೂರಕ್ಕೆ ನೂರೂ ಜಯ ನಿಮ್ಮದೆ ಎಂದು ಆಶೀರ್ವಾದ ಮಾಡಿದರು.



ಮುಗಳಖೋಡದಲ್ಲಿ ತಮ್ಮ ಅತ್ಮೀಯ ಅಭಿಮಾನಿಗಳಾದ ಅಶೋಕ ಕೊಪ್ಪದ, ರಮೇಶ ಯಡವಣ್ಣವರ, ಹುಲೆಪ್ಪ ತೇಗೂರ ಇವರಿಂದ ಸತ್ಕಾರ ಸ್ವೀಕರಿಸಿದರು.



ಈ ಸಂದರ್ಭದಲ್ಲಿ ಬಿ. ಆರ್. ಆಜೂರೆ, ಸದಾಶಿವ ಬಿರಡಿ, ಸದಾಶಿವ ಬಡಿಗೇರ, ಬಸವರಾಜ ತುಳಸಿಗೇರಿ, ಈಠ್ಠಪ್ಪ ಮೆಕ್ಕಳಕಿ, ಪ್ರಶಾಂತ ಮಣ್ಣಿಕೇರಿ, ಬಸನಗೌಡ ಪಾಟೀಲ, ಡಿ ಎಸ್ ನಾಯಿಕ, ರಾಮಣ್ಣ ಗಸ್ತಿ, ಶಂಕರ ನರಗಟ್ಟಿ, ವಿಠ್ಠಲ ಹಳ್ಳೂರ, ರಾಜೇಂದ್ರ ಪಾಟೀಲ, ಯೋಗೇಶ ರೋಡಕರ, ಬಸವರಾಜ ಖೇತಗೌಡರ, ಯಲ್ಲಾಲಿಂಗ ಖೇತಗೌಡರ, ಶಂಭು ಚೇರಮನ್, ಕೃಷ್ಣಾ ನಾಯಿಕ ಹಾಗೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!