ಬಸವರಾಜೇಂದ್ರ ಸ್ವಾಮಿಗಳ‌ ಆಶೀರ್ವಾದ ಪಡೆದ ಶಂಭು ಕಲ್ಲೋಳಿಕರ.

Share the Post Now

ಬೆಳಗಾವಿ. ರಾಯಬಾಗ


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ನಿರ್ಣಾಯಕರು ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ;

ಟಿಕೆಟ್ ಪಡೆಯಬಹುದು…… ಆದರೆ ವೋಟ್ ಪಡೆಯುವುದು ಕಷ್ಟ ಶಂಭು ಕಲ್ಲೋಳಿಕರ;

ವರದಿ: ಸಂಗಮೇಶ ಹಿರೇಮಠ.

ಮುಗಳಖೋಡ: ರಾಯಬಾಗ ಮತಕ್ಷೇತ್ರಕ್ಕೆ ನಾನು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ, ಕಳೆದ ಸುಮಾರು 3,4 ತಿಂಗಳಿಂದ ರಾಯಬಾಗ ಕ್ಷೇತ್ರದಲ್ಲಿ ಸಂಚರಿಸಿ, ಜನರ ನಾಡಿಮಿಡಿತ ಅರಿತ್ತಿದ್ದೇನೆ. ಪಕ್ಷವು ನನಗೆ ಟಿಕೆಟ್ ನೀಡುವ ಸಾಧ್ಯತೆ ಇತ್ತು. ಆದರೆ ಕೊನೆಯ ಘಳಿಗೆಯ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಜೆಡಿಎಸ್, ಆಮ್ ಆದ್ಮಿ, ಇನ್ನೂ ಅನೇಕ ರಾಷ್ಟ್ರೀಯ ಪಕ್ಷಗಳು ನನ್ನನ್ನು ಕರೆಯುತ್ತಿವೆ. ಆದರೆ ರಾಯಬಾಗ ಮತಕ್ಷೇತ್ರದ ನಾಯಕ ಹಾಗೂ ಕಾರ್ಯಕರ್ತರ ಅಭಿಪ್ರಾಯ ಪದೆದು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೆನೆ.

ಕುಡಚಿ ಮತಕ್ಷೇತ್ರದ ಸುಕ್ಷೇತ್ರ ಮುಗಳಖೋಡ ಪಟ್ಟಣದ ಕೆನಾಲ್ ಬಸವೇಶ್ವರ ದೇವಸ್ಥಾನದಲ್ಲಿ ಇಂದು ಅಚಲೇರಿ – ಜಡಗಾ ಮಠದ ಪೀಠಾಧಿಪತಿ ಶ್ರೀ ಬಸವರಾಜೆಂದ್ರ ಮಹಾಸ್ವಾಮಿಗಳ ದರ್ಶನ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.


ಇದಕ್ಕೂ ಮೊದಲು ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಅವರು ಶ್ರೀ ಬಸವರಾಜೆಂದ್ರ ಮಹಾಸ್ವಾಮಿಗಳವರಿಗೆ ಶಾಲು, ಹೂಮಾಲೆ ಹಾಕಿ ಫಲಪುಷ್ಪ ನೀಡಿ ಗೌರವಿಸಿದರು. ನಂತರ ಪೂಜ್ಯರು ಶಂಭುಲಿಂಗ ಕಲ್ಲೋಳಿಕರ ಅವರಿಗೆ ಶಾಲುಹೊದಿಸಿ, ಗೌರವಿಸಿ ನಿಮ್ಮ ಗೆಲುವು ನಿಶ್ಚಿತ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಮೇಶ ಯಡವನ್ನವರ, ಅಶೋಕ ಕೊಪ್ಪದ, ರಾಜು ನಾಯಿಕ, ಗಂಗಪ್ಪ ಗೋಕಾಕ, ಪರಪ್ಪ ಖೇತಗೌಡ, ಶಿವಪುತ್ರ ಯಡವನ್ನವರ, ಶಿವಬಸವ ಕಾಪಶಿ, ನಾಗಪ್ಪ ಚೌಗಲಾ, ಪರಶುರಾಮ ಯರಡತ್ತಿ, ಕೃಷ್ಣಾ ನಾಯಿಕ, ಮಾರುತಿ ಹಳಿಂಗಳಿ, ಶ್ರೀಪಾಲ ಕುರಬಳ್ಳಿ ಇತರರು ಇದ್ದರು.

Leave a Comment

Your email address will not be published. Required fields are marked *

error: Content is protected !!