ಬೆಳಗಾವಿ : ಬೆಳಗಾವಿ ಉತ್ತರದಲ್ಲಿ ತಮ್ಮದೆ ಆದ ವಿಚಾರ ಧಾರೆಗಳ ಮೂಲಕ ಹೊಸ ಸಂಚಲನ ಮೂಡಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ ಹಿರೇಮಠ ಅವರು ಇಂದು ತಮ್ಮ ನಾಮಿನೇಷನ ಸಲ್ಲಿಸುವ ಮೂಲಕ ಬೆಳಗಾವಿ ರಾಜಕೀಯ ಅಖಾಡದಲ್ಲಿ ಕಹಳೆ ಊದಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿದ ಪ್ರವೀಣ ಕನ್ನಡದ ಮಣ್ಣಿನ ಶಕ್ತಿಯನ್ನು ವಿಶ್ವ ಮೆಚ್ಚುವಂತೆ ಸಾರಿದ ವಿಜಯನಗರ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ ಪವಿತ್ರ ದಿನದಂದು ನಾಮಿನೇಷನ ಸಲ್ಲಿಸಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಉದ್ದೇಶದ ಬಗ್ಗೆ ತಿಳಿಸಿದ ಪ್ರವೀಣ ಸರ್ವರಿಗೂ ಸಮ ಬಾಳು ಮತ್ತು ಸರ್ವರಿಗೂ ಸಮ ಪಾಲು ನೀಡುವುದೆ ಕೆಆರಪಿಪಿಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹೊಂದಿರುವದಾಗಿ ತಿಳಿಸಿದ ಹಿರೇಮಠ ಬೆಳಗಾವಿ ಉತ್ತರದಲ್ಲಿ 100ಕ್ಕೆ 100ರಷ್ಟು ಗೆದ್ದೆ ಗೆಲ್ಲುತ್ತೇನೆ ಎಂದು ವಿಸ್ವಾಸ ವ್ಯಕ್ತ ಪಡಿಸಿದ್ದಾರೆ.





