ಹಳ್ಳೂರ : ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪ್ರಮುಖರ ಸಭೆಯಲ್ಲಿ ಅರಬಾಂವಿ ವಿಧಾನಸಭಾ ಚುನಾವಣೆ ಬಿ ಜೆ ಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರ ಪರ ಮತ ಯಾಚಿಸಿದ ನಾಗಪ್ಪ ಶೇಖರಗೋಳ ಮಾತನಾಡಿ ಗ್ರಾಮದ ಎಲ್ಲಾ ಮತ ಗಟ್ಟೆಗಳಲ್ಲಿ ಪ್ರಮುಖರೆಲ್ಲ ಸೇರಿ ಹೆಚ್ಚು ಪ್ರಚಾರ ಮಾಡಿ ಪ್ರತಿ ಮತ ಗಟ್ಟೆಗಳಲ್ಲಿ ಹೆಚ್ಚು ಬಿ ಜೆ ಪಿ ಗೆ ಮತ ಹಾಕಿಸಿ ಹೆಚ್ಚು ಮತಗಳಿಂದ ಗೆಲುವು ಸಾದಿಸಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬಿ ಜೆ ಪಿ ಮತದಾರರು ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಹಕಾರ ಮಾಡಿದರೆ ನಿಮಗೆ ಸಹಾಯ ಸಹಕಾರ ನೀಡಲು ಏನ್ ಎಸ್ ಎಫ್ ಕಚೇರಿ ಸದಾಕಾಲ ಸಿದ್ದವಿದೆ. ಪ್ರಮುಖರು ಪ್ರಾಮಾಣಿಕ ಸೇವೆ ಮಾಡಬೇಕು ಗೆಲುವಿಗೆ ಹಗಲಿರುಳು ದುಡಿದು ಕಾರ್ಯ ಕರ್ತರು ತಮ್ಮ ವೈಮನಸ್ಸು ಮರೆತು ಈ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವಂತೆ ಹೇಳಿದರು.ಈ ಸಮಯದಲ್ಲಿ ಬಿ ಜೆ ಪಿ ನೂರಾರು ಕಾರ್ಯಕರ್ತರು ಹಾಗೂ ಪ್ರಮುಖರಿದ್ದರು.





