ನಮ್ಮ ನಡೆ ಮತಗಟ್ಟೆಯ ಕಡೆ ಮತದಾನ ಜಾಗೃತಿ ಜಾಥಾ

Share the Post Now

ಮುಗಳಖೋಡ: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಪುರಸಭೆ ಇವರ ಸಹಯೋಗದೊಂದಿಗೆ ಏ.30 ರಂದು ರವಿವಾರ ನಮ್ಮ ನಡೆ ಮತಗಟ್ಟೆ ಕಡೆ ಎಂಬ ಮತದಾನ ಜಾಗೃತಿಯ ಜಾಥಾ ನಡೆಯಿತು.

ಪಟ್ಟಣದ ಪುರಸಭೆಯ ಕಾರ್ಯಾಲಯದ ಮುಂದೆ ಚುನಾವಣಾ ಅಧಿಕಾರಿ ಮುಕುಂದಸ್ವಾಮಿ ಆರ್.ಜಿ ಧ್ವಜಾರೋಹಣ ಮಾಡಿ, ಮಾತನಾಡಿದ ಅವರು ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಮತದಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಹಾಗೂ ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿಯೊಬ್ಬ ಮತದಾರರಿಗೆ ಮತ ಚಲಾಯಿಸುವ ಮತಗಟ್ಟೆ ಯಾವುದು ಎಂಬುದು ತಿಳಿಯುವಂತೆ ಮಾಡುವುದು ಇದರ ಉದ್ದೇಶವಾಗಿದೆ.



ಅದೆ ರೀತಿ ಈ ಬಾರಿ ಪಟ್ಟಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯಾಲಯವನ್ನು ಪಿಂಕ್‌ ಬೂತ ಅಂದರೆ ಸುಖೀ ಮತಗಟ್ಟೆಯನ್ನು ಮಾಡಲಾಗಿದೆ. ಸಖೀ ಮತಗಟ್ಟೆಯಲ್ಲಿ ಹೆಚ್ಚು ಮಹಿಳಾ ಮತದಾರರು ಇರುವ ಮತಗಟ್ಟೆಯನ್ನು ಪಿಂಕಬೂತ, ಸಖೀ ಮತಗಟ್ಟೆ ಎಂದು ವಿಶೇಷ ಹಾಗೂ ವಿವಿಧ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತಿದೆ ಎಂದು ಹೇಳಿದರು.

ನಂತರ ಪುರಸಭೆ ಸಮೀಪದ ಸರ್ಕಾರಿ ಪ್ರೌಢ ಶಾಲೆಯ ಮತಗಟ್ಟೆಯ ಮುಂದೆ ಧ್ವಜಾರೋಹಣ ಮಾಡಿ, ಪಟ್ಟಣದ ಮುಖ್ಯ ರಸ್ತೆಯ ಮಾರ್ಗವಾಗಿ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯಾಲಯದ ವರೆಗೆ ಜಾಥಾ ನಡೆಯಿತು.



ಈ ಸಂದರ್ಭದಲ್ಲಿ ರಾಯಬಾಗ ತಾಲೂಕು ಪಂಚಾಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಪ ಚುನಾವಣಾ ಅಧಿಕಾರಿ ಬಾಗ್ಯಶ್ರೀ ಜಹಾಗಿರದಾರ, ಪುರಸಭೆ ಮುಖ್ಯಾದಿಕಾರಿ ಮಹೇಂದ್ರ ತಮ್ಮಾಣಿ, ಗ್ರಾಮ ಲೆಕ್ಕಾಧಿಕಾರಿ ಎಸ್ ಎಸ್ ಹತ್ತರಗಿ, ಮತ್ತು ಪುರಸಭೆಯ ಎಲ್ಲಾ ಸಿಬ್ಬಂದಿಯವರು, ಹಾಗೂ ಅಂಗನವಾಡಿ ಅಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ವರದಿ: ಸಂತೋಷ ಮುಗಳಿ, ಮುಗಳಖೋಡ

Leave a Comment

Your email address will not be published. Required fields are marked *

error: Content is protected !!