ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಮಾಲಗತ್ತಿ ಗ್ರಾಮದಲ್ಲಿ ಪ್ರಿಯಾಂಕ್ ಖರ್ಗೆ ಭರ್ಜರಿ ಪ್ರಚಾರ!

Share the Post Now

ಚಿತ್ತಾಪುರ :ನನಗೆ ನೀವು ಎರಡು ಸಲ ಆಶೀರ್ವಾದ ಮಾಡಿದ್ದೀರಿ. ಅದರಂತೆ ನಾನು ಕೂಡಾ ಪ್ರಾಮಾಣಿಕವಾಗಿ ನಿಮ್ಮ ಮನೆಯ ಮಗನಂತೆ ಕೆಲಸ ಮಾಡಿದ್ದೇನೆ. ನಿಮ್ಮ ಗೌರವಕ್ಕೆ ಕುಂದು ತರದಂತೆ ಹಾಗೂ ನಿಮ್ಮ ಮತಕ್ಕೆ ಅಗೌರವ ತರುವಂತ ಕೆಲಸ ಮಾಡಿಲ್ಲ. ಹಾಗಾಗಿ ನಾನು ಈಗ ಮತ್ತೆ ಮತ ಕೇಳಲು ಬಂದಿದ್ದೇನೆ ಎಂದು ಮಾಜಿ ಸಚಿವ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಹೇಳಿದರು

ನಾನು ಸುಳ್ಳು ಹೇಳಿ ಹೋಗುವಂತ ವ್ಯಕ್ತಿಯಲ್ಲ. ನಾನು ನಾಳೆ ಮತ್ತೆ ಈ ಊರಿಗೆ ಬರಬೇಕಲ್ಲ. ನಾನು ಭಾಷೆ ಕೊಟ್ಟಂತೆ ನಡೆದುಕೊಂಡಿದ್ದೇನೆ ಹಾಗೆ ಅಭಿವೃದ್ದಿ ಕೂಡಾ ಮಾಡಿದ್ದೇನೆ. ನನ್ನ ಶಕ್ತಿ ಮೀರಿ ಅನುದಾನ ತಂದು ಅಷ್ಟೂ ಅನುದಾನವನ್ನು ಬಳಕೆ ಮಾಡಿದ್ದೇನೆ. ಈ ಗ್ರಾಮದ ಜನರ ಬೇಡಿಕೆಯಂತೆ ಅಂಬಿಗರ ಚೌಡಯ್ಯ ಭವನ ಹಾಗೂ ರಾಮಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ‌ ಅನುದಾನ ಬಿಡುಗಡೆ ಮಾಡುತ್ತೇನೆ,

ನನ್ನನ್ನು ಹಾಗೂ ಬಿಜೆಪಿ ಅಭ್ಯರ್ಥಿಯನ್ನು‌ ಹೋಲಿಕೆ ಮಾಡಿ ನೋಡಿ. ಅವನು ನ್ಯಾಯಬೆಲೆ ಅಂಗಡಿಯಿಂದ ಸಾರ್ವಜನಿಕರಿಗೆ ಹಂಚಲು ಸರಬರಾಜು ಮಾಡಿದ್ದ ಅಕ್ಕಿ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕೊಡಲು ತಂದ ಹಾಲಿನ‌ಪುಡಿಯನ್ನು ಕದ್ದು ಅಕ್ರಮ ಕಳ್ಳ ಸಾಗಾಣಿಕೆ ಮಾಡಿದ ಆರೋಪದ‌ ಹಿನ್ನೆಲೆಯಲ್ಲಿ ಎರಡು ವರ್ಷ ಜೈಲು ಶಿಕ್ಷೆಯಾಗಿದೆ ಅಂತವನನ್ನು ಬಿಜೆಪಿ ಶಾಸಕನನ್ನಾಗಿ ಮಾಡಹೊರಟಿದೆ. ಆದರೆ ಅವರ ಕನಸು‌ ನನಸಾಗುವುದಿಲ್ಲ‌ ಯಾಕೆಂದರೆ‌ ಚಿತ್ತಾಪುರದ ಸ್ವಾಭಿಮಾನಿ ಮತದಾರರು ಅಂತಹ ವ್ಯಕ್ತಿಗೆ ಮನ್ನಣೆ ನೀಡುವುದಿಲ್ಲ ಎಂದು ಭಾವಿಸಿರುತ್ತೇನೆ.

ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಡುಗೆ ಅನಿಲ ಹಾಗೂ ಇತರೆ ಧಾನ್ಯಗಳ ಬೆಲೆ ಗಗನಕ್ಕೇರಿದೆ.‌ ಅದಕ್ಕಾಗಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಪಕ್ಷ ಐದು ಪ್ರಮುಖ ಬದುಕುಕಟ್ಟುವ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಖಾತ್ರಿಗೆ ಪಕ್ಷ ಗ್ಯಾರೆಂಟಿ ಕಾರ್ಡ್ ಕೊಡುತ್ತಿದೆ. ಗೃಹಲಕ್ಷ್ಮಿ,‌ ಗೃಹಜ್ಯೋತಿ,‌ ಯುವನಿಧಿ, 10 ಕೆಜಿ ಅಕ್ಕಿ ಉಚಿತ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣ ಉಚಿತಗೊಳಿಸುತ್ತಿದ್ದೇವೆ.

ನನಗೆ ನೀವು ಹೆಚ್ಚಿನ‌ ಮತಗಳಿಂದ ಗೆಲ್ಲಿಸಿದರೆ ಚಿತ್ತಾಪುರ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಅನುದಾನ ತಂದು ಅಭಿವೃದ್ದಿ ಗೊಳಿಸಲಿದ್ದೇನೆ. ಈಗಾಗಲೇ ಸಾಕಷ್ಟು ಸಮುದಾಯ ಭವನ, ಶಾಲೆ, ಹಾಸ್ಟೆಲ್, ವಸತಿಶಾಲೆಗಳನ್ನು ನಿರ್ಮಾಣ ಮಾಡಿ ಶೈಕ್ಷಣಿಕ‌ ಕ್ಷೇತ್ರದ ಅಭಿವೃದ್ದಿಗೆ ಕ್ರಮಕೈಗೊಂಡಿದ್ದೇನೆ. ನೀವು ನನಗೆ ಮತ್ತೆ ಆಶೀರ್ವಾದ ಮಾಡಿ ಶಾಸಕನನ್ನಾಗಿ ಮಾಡಿದರೆ ಮತ್ತಷ್ಟು ಅಭಿವೃದ್ದಿ ಮಾಡುತ್ತೇನೆ ಎಂದರು

Leave a Comment

Your email address will not be published. Required fields are marked *

error: Content is protected !!