ಕೊಟ್ಟಲಗಿ ಗ್ರಾಮದಲ್ಲಿ ಸವದಿಯವರ ಪರ ಎಂ.ಬಿ. ಪಾಟೀಲ ಅಬ್ಬರದ ಪ್ರಚಾರ

Share the Post Now

ಅಥಣಿ ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವುದಾಗಿ ರೈತರಿಗೆ ಭರವಸೆ

ರೈತ ನಾಯಕರಾದ ಲಕ್ಷ್ಮಣ ಸವದಿಯವರನ್ನುದಾಖಲೆ ಮತಗಳ ಅಂತರದಿಂದ ಗೆಲ್ಲಿಸಲು ಮನವಿ

ಅಥಣಿ* : ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು, *ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರ* ಪರ ಬೃಹತ್ ಚುನಾವಣೆ ಪ್ರಚಾರ ಸಭೆ ದಿ. 3-5-2023 ರಂದು ಜರುಗಿತು.

ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ *ಕಾಂಗ್ರೆಸ್ ಹಿರಿಯ ಮುಖಂಡರು, ಕೆಪಿಸಿಸಿ* *ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ಬಿ.* *ಪಾಟೀಲ ಅವರು* , ಲಕ್ಷ್ಮಣ ಸಂ. ಸವದಿಯವರು ಅಥಣಿ ಮತಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಏತ ನೀರಾವರಿ ಯೋಜನೆಗಳ ಮೂಲಕ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಅಥಣಿ ಅಭಿವೃದ್ಧಿಯಾಗಿದ್ದು ಲಕ್ಷ್ಮಣ ಸವದಿಯವರಿಂದ ಮಾತ್ರ. ಮುಂದೆಯೂ ಅವರಿಂದಲೇ ಅಭಿವೃದ್ಧಿಯಾಗಲಿದೆ. ಆದ್ದರಿಂದ ಅಥಣಿ ಅಭಿವೃದ್ಧಿ ದೃಷ್ಟಿಯಿಂದ ಇಲ್ಲಿನ ಕಾಂಗ್ರೆಸ್ ಪಕ್ಷದ ಎಲ್ಲ ಸ್ಪರ್ಧಾಕಾಂಕ್ಷಿಗಳು ಅವರ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ನಾನು ಹಾಗೂ ಲಕ್ಷ್ಮಣ ಸಂ. ಸವದಿಯವರು ಅಥಣಿ ತಾಲೂಕಿನ ಇತರ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ತಾಲೂಕನ್ನು ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಿಸುತ್ತೇವೆ. ಈ ಬಾರಿ ಲಕ್ಷ್ಮಣ ಸಂ. ಸವದಿಯವರನ್ನು ದಾಖಲೆ ಮತಗಳ ಅಂತರದಿಂದ ಆಯ್ಕೆಗೊಳಿಸಬೇಕು ಎಂದು ಮನವಿ ಮಾಡಿದರು.
ಲಕ್ಷ್ಮಣ ಸಂ. ಸವದಿಯವರು ಮಾತನಾಡಿ, ಮಾನ್ಯ ಶ್ರೀ ಎಂ.ಬಿ. ಪಾಟೀಲರು ಹಾಗೂ ನಾನು ಅಥಣಿ ಮತ್ತು ಬಬಲೇಶ್ವರ ಮತಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.



*ಜತ್ತ ತಾಲೂಕು ಶಾಸಕರಾದ ಶ್ರೀ ವಿಕ್ರಮದಾದಾ, ಅಥಣಿ ತಾಲೂಕು ಕಾಂಗ್ರೆಸ್* *ಮುಖಂಡರಾದ ಶ್ರೀ ಸದಾಶಿವ ಬುಟಾಳೆ, ಶ್ರೀ ಗಜಾನನ* *ಮಂಗಸೂಳಿ, ಶ್ರೀ* *ಶಿವು ಗುಡ್ಡಾಪುರ, ಅಥಣಿ* *ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಸಿಂಗೆ, ತೆಲಸಂಗ ಬ್ಲಾಕ್* *ಕಾಂಗ್ರೆಸ್ ಅಧ್ಯಕ್ಷರಾದ (ವಕೀಲರು) ಶ್ರೀ ಶ್ರೀಕಾಂತ* *ಪೂಜಾರಿ, ಕೆಪಿಸಿಸಿ ಸದಸ್ಯರಾದ ಶ್ರೀ ಶ್ಯಾಮರಾವ್ ಪೂಜಾರಿ* , *ಶ್ರೀ ಸುರೇಶಗೌಡ ಪಾಟೀಲ, ಶ್ರೀ ಬಸವರಾಜ ಬುಟಾಳೆ, ಶ್ರೀ ರವಿ* *ಹಂಜಿ, ಶ್ರೀ ಅಣ್ಣಾರಾಯ ಹಾಲಳ್ಳಿ,* *ಶ್ರೀ ಸಿದರಾಯ ಯಲಡಗಿ, ಕಾಂಗ್ರೆಸ್ ಪಕ್ಷದ ಅಥಣಿ ತಾಲೂಕು* *ಮಹಿಳಾ ಅಧ್ಯಕ್ಷೆ ಶ್ರೀಮತಿ ರೇಖಾ ಪಾಟೀಲ,* *ಕೆಪಿಸಿಸಿ ಸಂಯೋಜಕಿ ಸುನಿತಾ ಐಹೊಳೆ, ತೆಲಸಂಗ ಬ್ಲಾಕ್ ಮಹಿಳಾ ಅಧ್ಯಕ್ಷೆ ಕಲಾವತಿ ಕಿತ್ತೂರ ಸೇರಿದಂತೆ ಇತರ ಗಣ್ಯಮಾನ್ಯರು, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.*

Leave a Comment

Your email address will not be published. Required fields are marked *

error: Content is protected !!