ರಾಯಬಾಗ:~* ತಾಲ್ಲೂಕಿನ ಹಿಡಕಲ್ ಗ್ರಾಮದ ಮಾಳಸಿದ್ದೇಶ್ವರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಯಬಾಗ ಕ.ಸಾ.ಪ.ಘಟಕದ ವತಿಯಿಂದ ನಾಳೆ ಶುಕ್ರವಾರ ದಿ.5 ರಂದು ಕ.ಸಾ.ಪ.109 ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ಯ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ ಅಪರಾಹ್ನ 3 ಗಂಟೆಗೆ ನಡೆಯಲಿದೆ.ಎಸ್.ಡಿ.ಎಂ.ಸಿ.ಅಧ್ಯಕ್ಷ ಶ್ರೀ ರಮೇಶ್ ಸೈದಾಪುರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ.ಆರ್.ಗುಡಸಿ ಉದ್ಘಾಟಕರಾಗಿ ಆಗಮಿಸುವರು.ಶಿಕ್ಷಕ ಆರ್.ಎನ್. ಮುರಾರಿ ಉಪನ್ಯಾಸ ನೀಡಲಿದ್ದಾರೆ.ಶಿಕ್ಷಕ ಶ್ರೀ ಟಿ.ಜಿ.ದಾಸಪ್ಪನವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕ.ಸಾ.ಪ.ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀ ಆರ್.ಎಂ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಡಾ.ಜಯವೀರ ಎ ಕೆ.ಖೇಮಲಾಪುರ